ಕರ್ನಾಟಕ

karnataka

ETV Bharat / state

ಬಂಡಾಯವೆದ್ದ ಕೆ.ಎಸ್​. ಈ​ಶ್ವರಪ್ಪಗೆ ಭಾರೀ ಹಿನ್ನಡೆ: ಮೂರನೇ ಸ್ಥಾನಕ್ಕೆ ಕುಸಿತ - K S Eshwarappa in third place - K S ESHWARAPPA IN THIRD PLACE

ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ದಿಸಿದ್ದ ಕೆ.ಎಸ್​. ಈ​ಶ್ವರಪ್ಪ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. ಸಮಯ 11:58ರ ವೇಳೆಗೆ ಒಟ್ಟು 17411 ಮತ ಪಡೆದಿದ್ದಾರೆ.

Etv Bharat
Etv Bharat (Etv Bharat)

By ETV Bharat Karnataka Team

Published : Jun 4, 2024, 11:49 AM IST

Updated : Jun 4, 2024, 12:05 PM IST

ಶಿವಮೊಗ್ಗ:ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕೆ.ಎಸ್​. ಈ​ಶ್ವರಪ್ಪ ಬೆಳಗ್ಗೆ 11:58ರ ವೇಳೆಗೆ ಒಟ್ಟು 17411ಮತಗಳಿಸಿದ್ದಾರೆ. ಬಿಜೆಪಿಯನ್ನು ಎದರು ಹಾಕಿಕೊಂಡು ಸ್ಪರ್ಧಿಸಿರುವ ಈಶ್ವರಪ್ಪ ಅವರಿಗೆ ಮತಗಳ ಹೊಡೆತ ಬಿದ್ದಿದೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಕೆ.ಎಸ್​. ಈ​ಶ್ವರಪ್ಪ ಅವರನ್ನು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಭರ್ಜರಿ ಮತಗಳ ಅಂತರದಿಂದ ಹಿಂದಿಕ್ಕಿದ್ದಾರೆ.

ಬೆಳಗ್ಗೆಯಿಂದಲೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಫಲಿತಾಂಶದಲ್ಲಿ ಹಣಾಹಣಿ ಏರ್ಪಟ್ಟಿದೆ. ಕ್ಷೇತ್ರದಲ್ಲಿ ಬಿಜೆಪಿಯಿಂದ ಬಿ.ವೈ. ರಾಘವೇಂದ್ರ, ಕಾಂಗ್ರೆಸ್​ಯಿಂದ ಗೀತಾ ಶಿವರಾಜ್​ಕುಮಾರ್, ಹಾಗೇ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್​. ಈ​ಶ್ವರಪ್ಪ ಸ್ಪರ್ಧಿಸಿದ್ದಾರೆ. ಪುತ್ರನಿಗೆ ಟಿಕೆಟ್ ಕೈತಪ್ಪಿದ ಕಾರಣಕ್ಕಾಗಿ ಬಿಜೆಪಿ ಕಟ್ಟಾಳಾಗಿದ್ದ ಕೆ.ಎಸ್. ಈಶ್ವರಪ್ಪ ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮುಕಿದ್ದರು.

ಮತಗಳ ಅಂತರ ಹೀಗಿದೆ (ಸಮಯ 11:25 AM):

ಪಕ್ಷ ಅಭ್ಯರ್ಥಿ ಮತಗಳು ಅಂತರ
ಬಿಜೆಪಿ ಬಿ.ವೈ. ರಾಘವೇಂದ್ರ 455035 ಮುನ್ನಡೆ
ಕಾಂಗ್ರೆಸ್ ಗೀತಾ ಶಿವರಾಜ್​ಕುಮಾರ್ 317533 ಹಿನ್ನಡೆ
ಪಕ್ಷೇತರ ಕೆ.ಎಸ್​. ಈಶ್ವರಪ್ಪ 17411 ಹಿನ್ನಡೆ

ಇದನ್ನೂ ಓದಿ:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಜೇಶ್ ಚೌಟ ಮುನ್ನಡೆ - Dakshina kannada result

Last Updated : Jun 4, 2024, 12:05 PM IST

ABOUT THE AUTHOR

...view details