ಕರ್ನಾಟಕ

karnataka

By ETV Bharat Karnataka Team

Published : Mar 28, 2024, 8:17 PM IST

Updated : Mar 28, 2024, 8:31 PM IST

ETV Bharat / state

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಪ್ರಮುಖ ಶಂಕಿತನನ್ನು ಬಂಧಿಸಿದ ಎನ್​ಐಎ - Rameshwaram Cafe Blast

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

nia-arrests-key-conspirator-in-rameshwaram-cafe-blast-case
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಪ್ರಮುಖ ಶಂಕಿತನ ಬಂಧಿಸಿದ ಎನ್​ಐಎ

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಎನ್​ಐಎ ಅಧಿಕಾರಿಗಳು ಪ್ರಮುಖ ಶಂಕಿತನ‌ನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಬುಧವಾರ 18 ಕಡೆ ದಾಳಿ ನಡೆಸಿದ್ದ ಎನ್ಐಎ ತಂಡ, ತೀವ್ರ ಪರಿಶೀಲನೆ ನಡೆಸಿತ್ತು.

ಕರ್ನಾಟಕ, ತಮಿಳುನಾಡು ಹಾಗೂ ಕೇರಳದ 18 ಕಡೆ ದಾಳಿ ನಡೆಸಿ ಹಲವು ವಸ್ತುಗಳು, ಹಣ ವಶಕ್ಕೆ ಪಡೆಯಲಾಗಿತ್ತು. ಈ ವೇಳೆ, ಓರ್ವ ಶಂಕಿತನ ಬಂಧನ ಮಾಡಲಾಗಿದೆ. ಮುಜಾಮಿಲ್ ಶರೀಫ್ ಎಂಬಾತನೇ ಬಂಧಿತನಾಗಿದ್ದು, ಈತ ಬಾಂಬರ್​​ಗೆ ಸಹಾಯ ಮಾಡಿದ್ದ. ಪ್ರಮುಖ ಆರೋಪಿಯ ಓಡಾಟ ಹಾಗೂ ಎಸ್ಕೇಪ್ ಆಗಲು ಸಹಾಯ ಮಾಡಿದ್ದ ಎಂದು ಎನ್​ಐಎ ತಿಳಿಸಿದೆ. ಜೊತೆಗೆ ಡಿಜಿಟಲ್ ಡಿವೈಸ್​​ಗಳು, ಒಂದಷ್ಟು ಹಣ ಸೀಜ್ ಮಾಡಲಾಗಿದೆ.

ಬಂಧಿತನು ಸುಧಾರಿತ ಸ್ಫೋಟಕ ಸಾಧನವನ್ನು ಸರಬರಾಜು ಮಾಡುತ್ತಿದ್ದ. ದಾಳಿ ವೇಳೆ ದೊಡ್ಡ ಮಟ್ಟದಲ್ಲಿ ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಶಂಕಿತನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಎನ್ಐಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬೆಂಗಳೂರು, ಶಿವಮೊಗ್ಗ, ಚೆನ್ನೈನಲ್ಲಿ ಎನ್​ಐಎ ಶೋಧ - NIA Raid

Last Updated : Mar 28, 2024, 8:31 PM IST

ABOUT THE AUTHOR

...view details