ಕರ್ನಾಟಕ

karnataka

ETV Bharat / state

ಮಂಡ್ಯ: ಕಾರು-ಬಸ್​ ಅಪಘಾತ; ರಾಷ್ಟ್ರಪ್ರಶಸ್ತಿ ವಿಜೇತ ಬಾಲನಟ ರೋಹಿತ್​ಗೆ ಗಂಭೀರ ಗಾಯ - CHILD ARTIST ROHIT INJURED

ಮಂಡ್ಯದಲ್ಲಿ ಆಯೋಜಿಸಲಾದ ಕಾರ್ಯಕ್ರಮವೊಂದಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಸಂಭವಿಸಿದ ರಸ್ತೆ​ ಅಪಘಾತದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಬಾಲನಟ ರೋಹಿತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ರೋಹಿತ್​ ಅವರ ತಾಯಿ ಹಾಗೂ ಇನ್ನೂ ಮೂವರು ಗಾಯಗೊಂಡಿದ್ದಾರೆ.

ಬಸ್​ ಕಾರು ಅಪಘಾತದಲ್ಲಿ ಕಾಟೇರ ಬಾಲ ನಟ ರೋಹಿತ್​ಗೆ ಗಂಭೀರ ಗಾಯ
ರಸ್ತೆ ಅಪಘಾತದಲ್ಲಿಬಾಲನಟ ರೋಹಿತ್​ಗೆ ಗಂಭೀರ ಗಾಯ (ETV Bharat)

By ETV Bharat Karnataka Team

Published : Nov 17, 2024, 10:07 AM IST

ಮಂಡ್ಯ:ಬಸ್​ ಮತ್ತು ಕಾರ್ ಡಿಕ್ಕಿಯಾಗಿ ಬಾಲನಟ ರೋಹಿತ್ (14) ಗಂಭೀರವಾಗಿ ಗಾಯಗೊಂಡಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಮತ್ತು ಹೊಸಹಳ್ಳಿ ನಡುವೆ ಶನಿವಾರ ಸಂಜೆ ಈ ಘಟನೆ ನಡೆದಿದೆ.

ಅಪಘಾತದಲ್ಲಿ ರೋಹಿತ್ ಅವರ ತಾಯಿ ಛಾಯಾಲಕ್ಷ್ಮಿ ಅವರ ಒಂದು‌ ಕೈ ಮತ್ತು ಒಂದು ಕಾಲು ಮುರಿದಿದೆ. ಇದೇ ಕಾರಿನಲ್ಲಿದ್ದ ಸ್ನೇಹಿತ ಯಶಸ್, ಆರಾಧನಾ ಕಾಲೇಜಿನ ಉಪನ್ಯಾಸಕ ಕೇಶವ್​ ಮತ್ತು ಶ್ರೀಕಾಂತ್​ ಗಾಯಗೊಂಡಿದ್ದಾರೆ. ಶ್ರೀಕಾಂತ್ ಕಾರು ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೊಸಹಳ್ಳಿ ಸಮೀಪದ ಆರಾಧನಾ ಕಾಲೇಜಿನಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ರೋಹಿತ್, ತಾಯಿ ಮತ್ತು ಸ್ನೇಹಿತರನ್ನು‌ ಕಾಲೇಜು ಮುಖ್ಯಸ್ಥ ಯೋಗಣ್ಣ ಅವರ ಕಾರಿನಲ್ಲಿ ಪಾಂಡವಪುರದಿಂದ ಕರೆತರುತ್ತಿದ್ದಾಗ ಅವಘಡ ಸಂಭವಿಸಿದೆ. ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪಾಂಡವಪುರ ನಿವಾಸಿಯಾಗಿರುವ ರೋಹಿತ್ ಅವರಿಗೆ 'ಒಂದಲ್ಲಾ ಎರಡಲ್ಲಾ' ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಬಂದಿತ್ತು. 'ಕಾಟೇರಾ' ಚಿತ್ರದಲ್ಲೂ ಇವರು ನಟಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಕಾರಿಗೆ ಬೆಂಕಿ ತಗುಲಿ ವ್ಯಕ್ತಿ ಸಜೀವ ದಹನ

ABOUT THE AUTHOR

...view details