ಮೈಸೂರು: ದೀಪಾವಳಿ ಹಿನ್ನೆಲೆಯಲ್ಲಿ ಮೈಸೂರು ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಸ್ಥಳಗಳನ್ನು ನಿಶಬ್ಧ ವಲಯ ಎಂದು ಘೋಷಿಸಲಾಗಿದೆ. ಇಲ್ಲಿ ಪಟಾಕಿ ಸಿಡಿಸುವುದು ನಿಷೇಧ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.
ಮೈಸೂರಿನ ಈ ಸ್ಥಳಗಳು 'ನಿಶಬ್ಧ ವಲಯ': ಇಲ್ಲಿ ಪಟಾಕಿ ಸಿಡಿಸುವಂತಿಲ್ಲ
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮೈಸೂರು ನಗರದ ಕಮಿಷನರೇಟ್ ವ್ಯಾಪ್ತಿಯ ಸ್ಥಳಗಳನ್ನು ನಿಶಬ್ದ ವಲಯ ಎಂದು ಘೋಷಿಸಲಾಗಿದೆ.
Published : 4 hours ago
ದೀಪಾವಳಿ ಹಬ್ಬದಂದು ಶಬ್ಧ ಹಾಗೂ ವಾಯುಮಾಲಿನ್ಯದಿಂದ ಹಿರಿಯ ನಾಗರಿಕರು, ಅನಾರೋಗ್ಯಪೀಡಿತರು ಮತ್ತು ಪ್ರಾಣಿ-ಪಕ್ಷಿಗಳ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಪ್ಪಿಸಲು, ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯ, ಕುಕ್ಕರಹಳ್ಳಿ ಕೆರೆ, ಕಾರಂಜಿ ಕೆರೆ, ಲಿಂಗಾಬುದಿ ಕೆರೆ, ಸಾರ್ವಜನಿಕ ಉದ್ಯಾನವನಗಳು, ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂಗಳು, ಶೈಕ್ಷಣಿಕ ಸಂಸ್ಥೆಗಳು, ನ್ಯಾಯಾಲಯ, ಧಾರ್ಮಿಕ ಸ್ಥಳಗಳಲ್ಲಿ 100 ಮೀಟರ್ ಸುತ್ತಳತೆಯ ಪ್ರದೇಶದಲ್ಲಿ ಅ.30ರಿಂದ ನವೆಂಬರ್ 2ರ ಮಧ್ಯರಾತ್ರಿ 12 ಗಂಟೆವರೆಗೆ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ:ಮೈಸೂರು ಅರಮನೆ ಪ್ರವೇಶ ಶುಲ್ಕ ಹೆಚ್ಚಳಕ್ಕೆ ಸಾರ್ವಜನಿಕರ ಅಸಮಾಧಾನ: ಯಾರು, ಏನಂದ್ರು?