ಕರ್ನಾಟಕ

karnataka

ETV Bharat / state

ಮೈಸೂರು ದಸರಾ: 2ನೇ ತಂಡದ 5 ಆನೆಗಳ ತೂಕ ಪರೀಕ್ಷೆ, 5,190 ಕೆಜಿ ತೂಗಿದ ಸುಗ್ರೀವ - Dasara Elephants Weight Test

ಗುರುವಾರ ಅರಮನೆಗೆ ಆಗಮಿಸಿರುವ 2ನೇ ತಂಡದ ಐದು ದಸರಾ ಆನೆಗಳಿಗೆ ಇಂದು ತೂಕ ಪರೀಕ್ಷೆ ನಡೆಸಲಾಯಿತು.

2ನೇ ತಂಡದ ಗಜಪಡೆಯ ತೂಕ ಪರೀಕ್ಷೆ
ದಸರಾ ಗಜಪಡೆಯ ತೂಕ ಪರೀಕ್ಷೆ (ETV Bharat)

By ETV Bharat Karnataka Team

Published : Sep 6, 2024, 9:59 AM IST

ದಸರಾ ಆನೆಗಳ ತೂಕ ಪರೀಕ್ಷೆ (ETV Bharat)

ಮೈಸೂರು:ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಗಜಪಡೆಯ 2ನೇ ತಂಡದ ಐದು ಆನೆಗಳನ್ನು ಇಂದು ತೂಕ ಹಾಕಲಾಯಿತು. ಸುಗ್ರೀವ 14 ಆನೆಗಳ ಪೈಕಿ ಎರಡನೇ ಅತೀ ಹೆಚ್ಚು ತೂಕ ಇರುವ ಆನೆಯಾಗಿದೆ. ಈ ಕ್ಯಾಂಪ್​ನ ಅತ್ಯಂತ ಹಿರಿಯ ಆನೆ ವರಲಕ್ಷ್ಮೀ.

ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಗೆ ಗಜಪಡೆಯ ತಾಲೀಮು ನಡೆಯುತ್ತಿದೆ. ಗುರುವಾರ ಸಂಜೆ ಆನೆಗಳ 2ನೇ ತಂಡ ಕಾಡಿನ ಆನೆ ಶಿಬಿರಗಳಿಂದ ಆಗಮಿಸಿದ್ದವು. ಅರಮನೆ ಮುಂಭಾಗ ಸರಳ, ಸಾಂಪ್ರದಾಯಿಕ ಸ್ವಾಗತ ಕೋರಲಾಗಿತ್ತು. ಇಂದು ಬೆಳಗ್ಗೆ ಈ ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಯಿತು.

5 ಆನೆಗಳ ತೂಕ ವಿವರ ಹೀಗಿದೆ:

ಸುಗ್ರೀವ 5,190 ಕೆ.ಜಿ.
ಪ್ರಶಾಂತ 4,875 ಕೆ.ಜಿ.
ಮಹೇಂದ್ರ 4,910 ಕೆ.ಜಿ.
ದೊಡ್ಡ ಹರವೆ ಲಕ್ಷ್ಮಿ 3,485 ಕೆ.ಜಿ.
ಹಿರಣ್ಯ 2,930 ಕೆ.ಜಿ.

ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್‌ ಅಭಿಮನ್ಯುವಿನ ನಂತರ ಸುಗ್ರೀವ ಅತಿ ಹೆಚ್ಚು ತೂಕ ಹೊಂದಿದೆ.

ಡಿಸಿಎಫ್‌ ಪ್ರಭುಗೌಡ ಪ್ರತಿಕ್ರಿಯೆ:"ಇಂದು ದಸರಾ ಗಜಪಡೆಯ 2ನೇ ತಂಡದ ಐದು ಆನೆಗಳ ತೂಕ ಪರೀಕ್ಷೆ ಮಾಡಲಾಯಿತು. ಅಭಿಮನ್ಯುವಿನ ನಂತರ 2ನೇ ತಂಡದಲ್ಲಿ ಬಂದ ಸುಗ್ರೀವ 2ನೇ ಅತಿ ಹೆಚ್ಚು ತೂಕ ಇರುವ ಆನೆಯಾಗಿದೆ. ಶುಕ್ರವಾರ ಸಂಜೆ ಎಲ್ಲಾ ಆನೆಗಳು ತಾಲೀಮಿನಲ್ಲಿ ಭಾಗವಹಿಸಲಿವೆ. ಕಾಡಿನ ಆನೆ ಶಿಬಿರಗಳಿಂದ ಆಗಮಿಸಿರುವ ಪ್ರಶಾಂತ ಆನೆಯನ್ನು ಬಿಟ್ಟು ಎಲ್ಲಾ ಆನೆಗಳು ಆರೋಗ್ಯವಾಗಿವೆ. ಪ್ರಶಾಂತ ಆನೆಗೆ ಭೇದಿ ಕಾಣಿಸಿಕೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಸೆಪ್ಟೆಂಬರ್‌ 15ರ ಬಳಿಕ ಮರದ ತಾಲೀಮು ನಡೆಸಲಾಗುವುದು. ಮೊದಲ ಗಜಪಡೆಯ ತಂಡದಲ್ಲಿ ಆಗಮಿಸಿರುವ ವರಲಕ್ಷ್ಮೀ ದಸರಾ ಗಜಪಡೆ ಕ್ಯಾಂಪ್​ನಲ್ಲಿ ಹಿರಿಯ ಆನೆ. ಹೀಗಾಗಿ ಅಗತ್ಯವಿದ್ದರೆ ಮಾತ್ರ ವರಲಕ್ಷ್ಮೀಯನ್ನು ತಾಲೀಮಿಗೆ ಕರೆ ತರಲಾಗುವುದು" ಎಂದು ಡಿಸಿಎಫ್‌ ಡಾ.ಪ್ರಭುಗೌಡ ತಿಳಿಸಿದರು.

ಇದನ್ನೂ ಓದಿ:ಅರಮನೆಗೆ ಆಗಮಿಸಿದ ದಸರಾ ಗಜಪಡೆಯ 2ನೇ ತಂಡಕ್ಕೆ ಸರಳ ಸಾಂಪ್ರದಾಯಿಕ ಸ್ವಾಗತ - Traditional welcome to elephant

ABOUT THE AUTHOR

...view details