ಕರ್ನಾಟಕ

karnataka

ETV Bharat / state

ರಾಹುಲ್​, ಮಲ್ಲಿಕಾರ್ಜುನ ಖರ್ಗೆ ಬೆಳಗಾವಿಗೆ ಆಗಮನ: ಸೆಲ್ಫಿಗೆ ಮುಗಿಬಿದ್ದ ಜನರು - GANDHI BHARAT

ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಆಗಮಿಸಿದ್ದು ಡಿಸಿಎಂ ಡಿಕೆಶಿ ಅವರಿಗೆ ಸ್ವಾಗತ ಕೋರಿದರು.

BELAGAVI  NATIONAL CONGRESS SESSION  CENTENARY PROGRAM  ಸಂಸದ ರಾಹುಲ್​ ಗಾಂಧಿ
ಬೆಳಗಾವಿ: ಸಂಸದ ರಾಹುಲ್​ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಆಗಮನ (ETV Bharat)

By ETV Bharat Karnataka Team

Published : Dec 26, 2024, 1:52 PM IST

ಬೆಳಗಾವಿ:ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಹಿನ್ನೆಲೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಂಸದ ರಾಹುಲ್ ಗಾಂಧಿ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಆಗಮಿಸಿದ್ದು, ಅವರನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರ ಸ್ವಾಗತಿಸಿದರು.

ದೇಶದ ಮೂಲೆ ಮೂಲೆಗಳಿಂದ ಬೆಳಗಾವಿಗೆ ಆಗಮಿಸುತ್ತಿರುವ ಕಾಂಗ್ರೆಸ್ ನಾಯಕರು:ಸಾಂಬ್ರಾ ವಿಮಾನ ನಿಲ್ದಾಣಕ್ಕೆ ದೇಶದ ವಿವಿಧ ಭಾಗಗಳಿಂದ ಬರುತ್ತಿರುವ ಗಣ್ಯರಿಗೆ ಸ್ಥಳೀಯ ಕಾಂಗ್ರೆಸ್ ಮಹಿಳಾಮಣಿಗಳು ಆರತಿ ಬೆಳಗಿ ಹಣೆಗೆ ಕುಂಕುಮ ಹಚ್ಚಿ ಸ್ವಾಗತಿಸಿದರು. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ 120ಕ್ಕೂ ಅಧಿಕ ಗಣ್ಯರಿಗೆ ಆದರದ ಸ್ವಾಗತ ಕೋರಲಾಗಿದೆ. ಸಮಾವೇಶದಲ್ಲಿ ಭಾಗಿಯಾಗಲು ಕನ್ಹಯ್ಯಾ ಕುಮಾರ್ ಆಗಮಿಸಿದ್ದಾರೆ. ಅವರನ್ನು ದಾವಣಗೆರೆ ಬಂಜಾರಾ ತಂಡದಿಂದ ಬಂಜಾರಾ ನೃತ್ಯದ ಮೂಲಕ ಸ್ವಾಗತ ಮಾಡಲಾಯಿತು.

ರಾಹುಲ್​, ಮಲ್ಲಿಕಾರ್ಜುನ ಖರ್ಗೆ ಬೆಳಗಾವಿಗೆ ಆಗಮನ: ಸೆಲ್ಫಿಗೆ ಮುಗಿಬಿದ್ದ ಜನರು (ETV Bharat)

ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಗಣ್ಯರ ಸ್ವಾಗತಕ್ಕೆ ಸಿಎಂ, ಡಿಸಿಎಂ ಆಗಮಿಸಿದ್ದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಜೊತೆ ಮಹಿಳಾ ಕಾರ್ಯಕರ್ತರು ಸೆಲ್ಫಿಗೆ ಮುಗಿಬಿದ್ದರು. ಈ ವೇಳೆ ಡಿ. ಕೆ. ಶಿವಕುಮಾರ್ ಮಹಿಳಾ ಕಾರ್ಯಕರ್ತರನ್ನು ಪಕ್ಕಕ್ಕೆ ಸರಿಸಿ ಸಿಎಂ ಕಾರಿಗೆ ತೆರಳಲು ದಾರಿಯನ್ನು ಸುಗಮಗೊಳಿಸಿದರು.

ಬೆಳಗಾವಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಕ್ಷಣಗಣನೆ: ಸಭೆಗೂ‌ ಮೊದಲು ಡಿಸಿಎಂ ಡಿಕೆಶಿ ಮಾಹಿತಿ

ಬೆಳಗಾವಿ ವೀರಸೌಧದಲ್ಲಿ ನಡೆಯಲಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಕ್ಷಗಣಗಣನೆ ಶುರುವಾಗಿದೆ. ಸಭೆಗೂ ಮೊದಲು ಡಿಸಿಎಂ ಡಿ.ಕೆ.ಶಿವಕುಮಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸೆಲ್ಫಿಗೆ ಮುಗಿಬಿದ್ದ ಮಹಿಳಾ ಕಾರ್ಯಕರ್ತರು (ETV Bharat)

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರು 100 ಮೀಟರ್ ಹಿಂದಿನಿಂದ ಪಥಸಂಚಲನದ ಮೂಲಕ ಬರಲಿದ್ದಾರೆ. ಅವರ ಮುಂದೆ ಸಂಪ್ರದಾಯದಂತೆ ಭಾರತ್ ಸೇವಾದಳದ ಕಾರ್ಯಕರ್ತರು ಬರಲಿದ್ದಾರೆ ಎಂದರು.

ವೀರಸೌಧ ಆವರಣ ಪ್ರವೇಶಿಸಿದ ಬಳಿಕ ಒಳಗೆ ಕಾಂಗ್ರೆಸ್ ಧ್ವಜಾರೋಹಣವನ್ನು ಮಲ್ಲಿಕಾರ್ಜುನ ಖರ್ಗೆ ನೆರವೇರಿಸಲಿದ್ದಾರೆ. ಬಳಿಕ ಖರ್ಗೆ, ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮೂವರು ಒಂದೊಂದು ಸಸಿ ನೆಡಲಿದ್ದಾರೆ. ಒಳಗೆ ಹೋದ ತಕ್ಷಣ ಪ್ರತಿಯೊಬ್ಬರಿಗೂ ನಾನು ವಿಶೇಷ ರೇಷ್ಮೆ ಶಾಲು ಹಾಕಿ ಸ್ವಾಗತಿಸಲಿದ್ದೇನೆ. ಕರ್ನಾಟಕದ ಪರವಾಗಿ ಎಲ್ಲರಿಗೂ ಗಾಂಧಿ ಭಾರತ ಇತಿಹಾಸದ ಪುಸ್ತಕ ಕೊಡುತ್ತೇವೆ. ಸ್ಥಳೀಯ ಮಹತ್ವಕ್ಕಾಗಿ ಕುಂದಾ, ಕರದಂಟು ಮತ್ತು ಮೈಸೂರು ಶ್ರೀಗಂಧದ ಮಾದರಿ ಕಾಣಿಕೆ ನೀಡುತ್ತೇವೆ ಎಂದು ಡಿಸಿಎಂ ತಿಳಿಸಿದರು.

ಮಧ್ಯಾಹ್ನ 3ಕ್ಕೆ ಆರಂಭವಾಗುವ ಕಾರ್ಯಕಾರಿ ಸಮಿತಿ ಸಭೆ ಸತತ 4 ಗಂಟೆಗಳ ಕಾಲ ನಡೆಯಲಿದೆ. ರಾತ್ರಿ ಮಲ್ಲಿಕಾರ್ಜುನ ಖರ್ಗೆ ಅವರು ಬೆಲಗಾಮ್ ಕ್ಲಬ್​​ನಲ್ಲಿ ಎಲ್ಲ ನಾಯಕರಿಗೂ ಔತಣಕೂಟ ಏರ್ಪಡಿಸಿದ್ದಾರೆ ಎಂದರು.

ನಾಳೆ ಬೆಳಗ್ಗೆ ಸುವರ್ಣ ವಿಧಾನಸೌಧ ಮುಂದೆ ಗಾಂಧೀಜಿ ಪುತ್ಥಳಿ ಅನಾವರಣ ಆಗಲಿದೆ. ಇದಕ್ಕೆ ಎಲ್ಲ‌ ಪಕ್ಷಗಳ ಸಂಸದರು, ಶಾಸಕರನ್ನು ಆಹ್ವಾನಿಸಲಾಗಿದೆ. ಮಧ್ಯಾಹ್ನ ಅಲ್ಲಿನ ಸೌಧ ಬ್ಯಾಂಕ್ವೆಂಟ್ ಹಾಲ್​​ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ ತಿಳಿಸಿದರು.

ಕಾಂಗ್ರೆಸ್ ಶಾಸಕರು ಭಾರತ ಬಾವುಟವನ್ನು ತಿರುಚಿ ಭಾರತದ ನಕ್ಷೆಗೆ ಅಪಮಾನ ಮಾಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಮಾಹಿತಿ ಕೊರತೆಯಿಂದ ಯಾರೋ ಹಾಗೆ ಮಾಡಿದ್ದಾರೆ. ಈಗ ಅದನ್ನು ತೆರವುಗೊಳಿಸಿದ್ದೇವೆ. ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಬಿಜೆಪಿ ಮಾಡಬಾರದು. ಬಿಜೆಪಿ‌ ನಾಯಕರ ಹೊಟ್ಟೆಕಿಚ್ಚಿಗೆ ನಮ್ಮಲ್ಲಿ ಮದ್ದಿಲ್ಲ ಎಂದು ಡಿಕೆಶಿ ತಿರುಗೇಟು ಕೊಟ್ಟರು.

ಇದನ್ನೂ ಓದಿ:ವೀರಸೌಧದಲ್ಲಿ ಗಾಂಧೀಜಿ ಪ್ರತಿಮೆ ಅನಾವರಣ: ವಿಶೇಷ ಸರಸ್ ಮೇಳ, ಖಾದಿ ಉತ್ಸವಕ್ಕೆ ಚಾಲನೆ

ABOUT THE AUTHOR

...view details