ಕರ್ನಾಟಕ

karnataka

ETV Bharat / state

ರಾಜ್ಯದ ಜನರ ದಿಕ್ಕು ತಪ್ಪಿಸಲು ಕಾಂಗ್ರೆಸ್ಸಿನವರು ಪ್ರತಿಭಟನೆಗೆ ಮುಂದಾಗಿದ್ದಾರೆ: ಸಂಸದ ಪ್ರತಾಪ್​ ಸಿಂಹ - ಎಚ್‌ಎಎಲ್

ಉತ್ತರ ಭಾರತದಲ್ಲಿ ಪಾಕಿಸ್ತಾನ, ಚೀನಾದ ಭಯದಿಂದಾಗಿ ಎಚ್‌ಎಎಲ್, ಇಸ್ರೋ, ಡಿಆರ್‌ಡಿಒ ಅಂಥ ಪ್ರತಿಷ್ಠಿತ ಕಂಪನಿಗಳು ಅಂದು ದಕ್ಷಿಣ ಭಾರತಕ್ಕೆ ಬಂದವು. ಇದರಿಂದ ದಕ್ಷಿಣದಲ್ಲಿ ಕೈಗಾರಿಕೆಗಳು ಬೆಳೆದವು, ಹಿಂದೆ ಉತ್ತರ ಭಾರತದವರಿಂದ ನಾವು ಲಾಭ ಪಡೆದುಕೊಂಡಿದ್ದೇವೆ ಎಂದು ಸಂಸದ ಪ್ರತಾಪ್​ ಸಿಂಹ ತಿಳಿಸಿದರು.

MP Pratap Singh spoke to the media. ​
ಸಂಸದ ಪ್ರತಾಪ್​ ಸಿಂಹ ಮಾಧ್ಯಮದವರ ಜೊತೆ ಮಾತನಾಡಿದರು.

By ETV Bharat Karnataka Team

Published : Feb 4, 2024, 6:57 PM IST

Updated : Feb 4, 2024, 7:37 PM IST

ಸಂಸದ ಪ್ರತಾಪ್​ ಸಿಂಹ ಮಾಧ್ಯಮದವರ ಜೊತೆ ಮಾತನಾಡಿದರು.

ಮೈಸೂರು: ಕುಣಿಯಲಾರದವಳು ನೆಲ ಡೊಂಕು ಎಂಬಂತಾಗಿದೆ ರಾಜ್ಯ ಸರಕಾರದ ಸ್ಥಿತಿ ಎಂದು ಸಂಸದ ಪ್ರತಾಪ್ ಸಿಂಹ ಹರಿಹಾಯ್ದರು.

ಫೆ.7ರಂದು ದೆಹಲಿಯಲ್ಲಿ ಕೇಂದ್ರ ಸರಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ಸಿಗರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರಿಗೆ ಅಭಿವೃದ್ಧಿ ಮಾಡುವುದು ಗೊತ್ತಿಲ್ಲ, ಲೂಟಿ ಮಾಡುವುದು ಮಾತ್ರ ಗೊತ್ತು. ಕರ್ನಾಟಕ ಶ್ರೀಮಂತ ರಾಜ್ಯ, ಆದ್ರೆ ಇಲ್ಲಿ ಆಡಳಿತ ಮಾಡುತ್ತಿರುವುದು ಕಾಂಗ್ರೆಸ್. ಗ್ಯಾರಂಟಿ ಯೋಜನೆಗಳಿಗೆ ಹಣ ಬಳಸುತ್ತಿರುವುದರಿಂದ ಅಭಿವೃದ್ಧಿ ಕೆಲಸಗಳಿಗೆ ಹಣ ಇಲ್ಲದಂತಾಗಿದೆ. ಹಾಗಾಗಿ ರಾಜ್ಯದ ಜನರ ದಿಕ್ಕು ತಪ್ಪಿಸಲು ಕಾಂಗ್ರೆಸ್ಸಿನವರು ಈ ರೀತಿ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು.

ನೆಹರು ಅವರು ಪ್ರಧಾನಿಯಾಗಿದ್ದ ವೇಳೆ ತಂದ ಕಾಯ್ದೆಯ ಪ್ರಕಾರ ಮೈನ್ಸ್​​ ನಮ್ಮಲ್ಲಿ ಸಿಗುತ್ತದೆ ಮತ್ತು ಜಾರ್ಖಂಡ್, ಒಡಿಶಾ, ಛತ್ತಿಸ್‌ಗಡ್​ನಲ್ಲೂ ಸಿಗುತ್ತದೆ. ಅಲ್ಲಿ ಒಂದು ಟನ್​ಗೆ 1 ಸಾವಿರ ರೂ. ಇದ್ದರೆ, ರಾಜ್ಯಕ್ಕೆ ಬರುವಾಗ 5 ಸಾವಿರ ರೂ., ಆಗುತ್ತದೆ, ಕಾರಣ ಸಾರಿಗೆ ವೆಚ್ಚವಾಗಲಿದೆ. ಆದ್ದರಿಂದ ನೆಹರು ಅವರು ಕಲ್ಲಿದ್ದಲು ನಮ್ಮ ರಾಜ್ಯದಲ್ಲಿಯೂ ಒಂದು ಸಾವಿರಕ್ಕೆ ಸಿಗುವಂತೆ ಮಾಡಿದರು. ಬೇರೆ ರಾಜ್ಯಗಳು ಬೆಳೆಯುವಂತೆ ಮಾಡುವುದು ಅದರ ಉದ್ದೇಶವಾಗಿತ್ತು ಎಂದು ತಿಳಿಸಿದರು.

ಎಚ್‌ಎಎಲ್, ಇಸ್ರೋ, ಡಿಆರ್‌ಡಿಒ ದಕ್ಷಿಣ ಭಾರತದಲ್ಲಿವೆ:ಮೈನ್ಸ್​​ ನಿಂದ ದಕ್ಷಿಣ ಭಾರತ ರಾಜ್ಯಗಳು ಉದ್ಧಾರವಾದವು. ಉತ್ತರ ಭಾರತದಲ್ಲಿ ಪಾಕಿಸ್ತಾನ, ಚೀನಾದ ಬೆದರಿಕೆ ಇದ್ದಿದ್ದರಿಂದ ಎಚ್‌ಎಎಲ್, ಇಸ್ರೋ, ಡಿಆರ್‌ಡಿಒ ಸೇರಿ ಇತರೆ ಪ್ರತಿಷ್ಠಿತ ಕಂಪನಿಗಳು ದಕ್ಷಿಣ ಭಾರತದಲ್ಲಿವೆ, ನಾವೇನು ದುಡಿದು ಉದ್ಧಾರ ಮಾಡಿದ್ದಲ್ಲ. ಆಗಿನ ಸಂದರ್ಭದಲ್ಲಿ ಪ್ರಮುಖ ಸಂಸ್ಥೆಗಳು ದಕ್ಷಿಣ ಭಾರತಕ್ಕೆ ಬಂದವು. ಇದರಿಂದ ಕೈಗಾರಿಕೆಗಳು ಬೆಳೆದವು, ಉತ್ತರ ಭಾರತದವರಿಂದ ನಾವು ಲಾಭ ಪಡೆದುಕೊಂಡಿದ್ದೇವೆ ಎಂದು ಸಂಸದ ಪ್ರತಾಪ​ ಸಿಂಹ ಹೇಳಿದರು.

ಜನಸಂಖ್ಯೆ ಆಧಾರದ ಮೇಲೆ ಆದಾಯ ಹಂಚಿಕೆ:ಜನಸಂಖ್ಯೆ ಆಧಾರದ ಮೇಲೆ ಆದಾಯವನ್ನು ಕೇಂದ್ರ ಸರಕಾರ ವಿಭಜನೆ ಮಾಡಿ ಹಂಚುತ್ತದೆ. ಅದರ ಸಾಮಾನ್ಯ ಜ್ಞಾನ 14 ಬಾರಿ ಬಜೆಟ್ ಮಂಡಿಸಿದವರಿಗೆ ಇರಬೇಕು. ಇದನ್ನು ನಾನು ಹೇಳಿಕೊಡುವ ಅಗತ್ಯವಿಲ್ಲ. ಒಂದು ರಾಜ್ಯದ ಬಜೆಟ್ ಮಂಡಿಸುವವರಿಗೆ ಇದರ ಬಗ್ಗೆ ಕನಿಷ್ಠ ಜ್ಞಾನ ಇರಬೇಕು. ಅವರಿಗೆ ಜ್ಞಾನ ಇದೆ. ಆದರೆ ಜ್ಞಾನ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಉತ್ತರ ಭಾರತ ಅಂದು ಬೆಳೆಯದಿರಲು ಮಾಜಿ ಪ್ರಧಾನಿ ನೆಹರು ಕಾರಣ ಎಂದು ಸಂಸದ ಪ್ರತಾಪ ಸಿಂಹ ಆರೋಪಿಸಿದರು.

ಇದನ್ನೂ ಓದಿ :ನಮಗೀಗ ಬೇರೆ ವಿಧಿನೇ ಇಲ್ಲ, ರಾಜ್ಯದ ಪರ ದನಿ ಎತ್ತಲೇಬೇಕು: ಡಿಸಿಎಂ ಡಿಕೆಶಿ

Last Updated : Feb 4, 2024, 7:37 PM IST

ABOUT THE AUTHOR

...view details