ಕರ್ನಾಟಕ

karnataka

ETV Bharat / state

ಶೆಡ್​ಗೆ ಬೆಂಕಿ ಹೆಚ್ಚಿದ ದುಷ್ಕರ್ಮಿಗಳು: ತಾಯಿ - ಮಗಳು ಸಜೀವ ದಹನ - Fire Incident - FIRE INCIDENT

ಬಾಗಲಕೋಟೆ ಜಿಲ್ಲೆಯ ಬೆಳಗಲಿ ಗ್ರಾಮದಲ್ಲಿ ಬೆಂಕಿಯಿಂದ ತಾಯಿ - ಮಗಳು ಸಜೀವ ದಹನವಾಗಿರುವ ಘಟನೆ ನಡೆದಿದೆ.

FIRE INCIDENT
ಸುಟ್ಟು ಕರಕಲಾದ ಗುಡಿಸಲು (ETV Bharat)

By ETV Bharat Karnataka Team

Published : Jul 16, 2024, 11:48 AM IST

Updated : Jul 16, 2024, 12:40 PM IST

ಬಾಗಲಕೋಟೆ:ಸಿಂಟೆಕ್ಸ್​​ನಲ್ಲಿ ಪೆಟ್ರೋಲ್ ಹಾಕಿ ಬಳಿಕ ಗುಡಿಸಲಿಗೆ ಸುರಿದು ಬೆಂಕಿ ಹಚ್ಚಿದ ಪರಿಣಾಮ ತಾಯಿ - ಮಗಳು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ‌ ಜಿಲ್ಲೆಯ ಮುಧೋಳ ತಾಲೂಕಿನ ಬೆಳಗಲಿ ಗ್ರಾಮದಲ್ಲಿ ನಡೆದಿದೆ. ಜೈಬಾನ ಪೆಂಡಾರಿ (60) ಮತ್ತು ಶಬಾನ ಪೆಂಡಾರಿ (20) ಸಜೀವ ದಹನಗೊಂಡ ತಾಯಿ - ಮಗಳು.

ಪರಿಶೀಲನೆಯಲ್ಲಿ ಪೊಲೀಸ್​ ಸಿಬ್ಬಂದಿ (ETV Bharat)

ಅವಘಡದಲ್ಲಿ ಸಿದ್ದಿಕ್ಕಿ ಎಂಬಾತ ಬಚಾವಾಗಿದ್ದು, ದಸ್ತಗಿರಿಸಾಬ್ ಪೆಂಡಾರಿ ಎಂಬಾತ ಗಾಯಗೊಂಡಿದ್ದಾನೆ. ಚಿಕಿತ್ಸೆಗಾಗಿ ಮಹಾಲಿಂಗಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿ ವೇಳೆ‌ ದಸ್ತಗಿರಸಾಬ್​ ಪೆಂಡಾರಿ ಅವರ ಕುಟುಂಬಸ್ಥರು ತೋಟದ ಶೆಡ್​​ನಲ್ಲಿ ಮಲಗಿದ್ದಾಗ ಯಾರೋ ದುಷ್ಕರ್ಮಿಗಳು ಸಿಂಟೆಕ್ಸ್​​ನಲ್ಲಿ‌ ಪೆಟ್ರೋಲ್‌ ತುಂಬಿ ಅದನ್ನು ಎರಡು ಹೆಚ್​​ಪಿ ಮೋಟಾರ್ ಸಹಾಯದಿಂದ ಶೆಡ್ಡಿಗೆ ಸಿಂಪಡಿಸಿ‌ ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚುವ ಮುನ್ನ ಶೆಡ್ಡಿನ ಬಾಗಿಲನ್ನು ಲಾಕ್ ಮಾಡಿದ್ದಾರೆ.

ಸುಟ್ಟು ಕರಕಲಾದ ಗುಡಿಸಲು (ETV Bharat)

ಪೆಟ್ರೋಲ್ ವಾಸನೆ ಬರುತ್ತಿದ್ದಂತೆ ಸಿದ್ದಿಕ್ಕಿ ಹೊರ ಬಂದು ಪ್ರಾಣಾಪಾಯದಿಂದ ಬಚಾವ್ ಆದರೆ, ತಾಯಿ - ಮಗಳು ಸಜೀವ ದಹನವಾಗಿದ್ದಾರೆ. ಸ್ಥಳಕ್ಕೆ ಮಹಾಲಿಂಗಪುರ ಪೊಲೀಸರು ಭೇಟಿ ನೀಡಿ‌ ಪರಿಶೀಲಿಸಿದ್ದಾರೆ. ಎಸ್ಪಿ ಅಮರಮಾಥರೆಡ್ಡಿ ಭೇಟಿ‌ ನೀಡಿ ಘಟನೆ ವಿವರಣೆ ಪಡೆದುಕೊಂಡಿದ್ದಾರೆ. ಶ್ವಾನದಳದ ನೆರವು ಪಡೆದು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ಇದನ್ನೂ ಓದಿ:ಶಿವಮೊಗ್ಗ: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ, 8ಕ್ಕೂ ಹೆಚ್ಚು ಅಂಗಡಿಗಳಿಗೆ ಹಾನಿ - Fire Accident

Last Updated : Jul 16, 2024, 12:40 PM IST

ABOUT THE AUTHOR

...view details