ಕರ್ನಾಟಕ

karnataka

ETV Bharat / state

ಸಿಡಿಲು ಬಡಿದು 25ಕ್ಕೂ ಹೆಚ್ಚು ಮೇಕೆಗಳು ಸಾವು; ಮುಗಿಲು ಮುಟ್ಟಿದ‌ ರೈತನ ಆಕ್ರಂದನ - Death of goats - DEATH OF GOATS

ದಾವಣಗೆರೆಯ ಈಚಗಟ್ಟ ಗ್ರಾಮದಲ್ಲಿ ಸಿಡಿಲು ಬಡಿದು 25ಕ್ಕೂ ಹೆಚ್ಚು ಮೇಕೆಗಳು ಮೃತಪಟ್ಟ ಘಟನೆ ನಡೆದಿದೆ.

ಸಿಡಿಲು ಬಡಿದು 25ಕ್ಕೂ ಹೆಚ್ಚು ಮೇಕೆಗಳು ಸಾವು
ಸಿಡಿಲು ಬಡಿದು 25ಕ್ಕೂ ಹೆಚ್ಚು ಮೇಕೆಗಳು ಸಾವು

By ETV Bharat Karnataka Team

Published : Apr 19, 2024, 1:07 PM IST

ದಾವಣಗೆರೆ: ದಾವಣಗೆರೆ ಗ್ರಾಮಾಂತರ ಭಾಗದಲ್ಲಿ ಗುರುವಾರ ಸಂಜೆ ಸುರಿದ ಸಾಧಾರಣ ಮಳೆ ಕೆಲವು ಅವಾಂತರ ಸೃಷ್ಟಿಸಿದೆ. ದಾವಣಗೆರೆ ತಾಲೂಕಿನ ಹೆಬ್ಬಾಳ, ಹಾಲವರ್ತಿ, ಹೆಬ್ಬಾಳ ಬಡಾವಣೆ, ಹುಣೆಸೆಕಟ್ಟೆ, ಈಚಗಟ್ಟ ಸೇರಿದಂತೆ ಹಲವೆಡೆ ಸಿಡಿಲು ಸಹಿತ ಮಳೆ ಆಗಿದೆ. ಈಚಗಟ್ಟ ಗ್ರಾಮದಲ್ಲಿ ಸಿಡಿಲು ಬಡಿದು 25ಕ್ಕೂ ಹೆಚ್ಚು ಮೇಕೆಗಳು ಮೃತಪಟ್ಟಿವೆ.

ಈಚಘಟ್ಟ ಗ್ರಾಮದ ರೈತ ಪಾಪ್ಯಾನಾಯ್ಕ ತಮ್ಮ ಮೇಕೆಗಳನ್ನು ಮೇಯಿಸಲು ಗುರುವಾರ ಸಂಜೆ ಜಮೀನಿಗೆ ತೆರಳಿದ್ದರು. ಈ ವೇಳೆ ಧಿಡೀರ್ ಎಂಬಂತೆ ಗುಡುಗು ಸಹಿತ ಆರಂಭವಾದ ಮಳೆಗೆ ಮೇಕೆಗಳು ಬಲಿಯಾಗಿವೆ. ಮರದ ಆಸರೆ ಪಡೆದಿದ್ದ ಮೇಕೆಗಳಿಗೆ ಸಿಡಿಲು ಬಡಿದು ಮೃತಪಟ್ಟಿವೆ. ಅಲ್ಲೆ ಇದ್ದ ರೈತ ಪಾಪ್ಯಾನಾಯ್ಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ವಿಚಾರ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಮಾಯಕೊಂಡ ಶಾಸಕ ಕೆ.ಎಸ್‌.ಬಸವಂತಪ್ಪ ಮೇಕೆ ಕಳೆದುಕೊಂಡ ಕುಟುಂಬಕ್ಕೆ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಮಾಯಕೊಂಡ ಹೋಬಳಿಯ ಸುತ್ತಮುತ್ತಲೂ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ.

ನಗರ ಹಾಗೂ ಗ್ರಾಮೀಣ ಭಾಗದಲ್ಲಿಯೂ ಗಾಳಿ ಸಮೇತ ಸುರಿದ ಭಾರಿ ಮಳೆ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ಗಾಳಿ ರಭಸಕ್ಕೆ ಮನೆಗಳ ಶೀಟ್​ಗಳು ಹಾರಿ ಹೋಗಿರುವ ಘಟನೆ ನಗರದ ನಾಗಮ್ಮ ಕೇಶವಮೂರ್ತಿ ಬಡಾವಣೆಯಲ್ಲಿ ನಡೆದಿದೆ. ಶೀಟ್​ಗಳ ಹಾರಿಹೋದ ಪರಿಣಾಮ ಮನೆ ತುಂಬಾ ನೀರು ತುಂಬಿಕೊಂಡಿತ್ತು. ಮಳೆಯಿಂದ ನಗರದ ಹಳೇ ಐಬಿ ಬಳಿ ಗಾಳಿಯ ರಭಸಕ್ಕೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಭಾರೀ ದುರಂತ ತಪ್ಪಿದೆ. ಇನ್ನು ಕೆಲ ಕಡೆ ಮರಗಳು ಧರೆಗುರುಳಿವೆ.‌

ಇದನ್ನೂ ಓದಿ:ಶಿವಮೊಗ್ಗ: ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಸವಾರ ಸಾವು - Biker Died

ABOUT THE AUTHOR

...view details