ದಾವಣಗೆರೆ:ಬರಗಾಲದಿಂದ ತತ್ತರಿಸಿರುವ ರೈತ ಅಳಿದುಳಿದ ನೀರಿನಲ್ಲಿ ಬೆಳೆದ ಬೆಳೆಯೂ ಕೂಡ ಕೈ ಸೇರದಂತಾಗಿದೆ. ಇದಕ್ಕೆ ಕಾರಣ ಮುಸಿಯಾಗಳ ಉಪಟಳ. ದಾವಣಗೆರೆಯಲ್ಲಿ ಹಿಂಡು ಹಿಂಡಾಗಿ ತೋಟ, ಹೊಲಗಳಿಗೆ ನುಗ್ಗುತ್ತಿರುವ ಇವುಗಳು ಬೆಳೆ ನಾಶಪಡಿಸುತ್ತಿವೆ. ಬೆಳೆ ರಕ್ಷಿಸಿಕೊಳ್ಳಲು ರೈತರು ಹಗಲಿರುಳು ಜಮೀನು ಕಾಯುವಂತಾಗಿದೆ.
ಜಿಲ್ಲೆಯ ಹರಿಹರ ತಾಲೂಕಿನ ಕೊಂಡಜ್ಜಿ ಮತ್ತಿತರೆ ಹಲವು ಗ್ರಾಮದ ಸುತ್ತಮುತ್ತಲಿನ ಜಮೀನುಗಳ ಮೇಲೆ ಮುಸಿಯಾಗಳು ದಾಂಗುಡಿ ಇಡುತ್ತಿವೆ. ಭತ್ತ, ಅಡಿಕೆ, ಬೆಂಡಿ, ಮುಸುಕಿನ ಜೋಳ ಮುಂತಾದ ಬೆಳೆಗಳನ್ನು ನಾಶಪಡಿಸುತ್ತಿವೆ.
"ಮುಸಿಯಾಗಳು ಬೆಳೆ ತಿನ್ನುವ ಬದಲು ಹಾಳು ಮಾಡುವುದೇ ಜಾಸ್ತಿ. ಅಡಿಕೆಗೆ ಸಮಸ್ಯೆ ಇಲ್ಲ. ಆದರೆ ಚಿಕ್ಕ ಗಿಡ ಇದ್ದರೆ ಅವುಗಳನ್ನೂ ಕಿತ್ತು ಹಾಕುತ್ತವೆ" ಎಂದು ರೈತ ಸಿದ್ದಣ್ಣ ಹೇಳಿದರು.
ಮನೆಗಳಿಗೂ ನುಗ್ಗುತ್ತಿವೆ:ಮುಸಿಯಾಗಳು ಆಹಾರ ಅರಸಿ ಮನೆಗಳಿಗೂ ನುಗ್ಗುತ್ತಿವೆ. ಇವುಗಳ ಉಪಟಳ ನಿಯಂತ್ರಿಸುವಂತೆ ರೈತರು ಅರಣ್ಯ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಜನರು. "ಮನೆಯ ಹೆಂಚು, ತಗಡುಗಳ ಮೇಲೆ ಹತ್ತಿ ತೊಂದರೆ ನೀಡುತ್ತಿವೆ. ಕೊಂಡಜ್ಜಿ ಗ್ರಾಮದ ನಿಂಗತ್ತರಹಟ್ಟಿ, ಮಾದರ ಹಟ್ಟಿಯ ಜನರು ಹೈರಾಣಾಗಿದ್ದಾರೆ" ಎಂದು ರೈತ ನಾಗರಾಜ್ ತಿಳಿಸಿದರು.
ಇದನ್ನೂ ಓದಿ:ಹಾವೇರಿ: ಗೋಲ್ಡನ್ ಹ್ಯಾಚರೀಸ್ ಕಾರ್ಖಾನೆ ವಿರುದ್ಧ ಪರಿಸರ ಮಾಲಿನ್ಯ ಆರೋಪ - River Pollution