ಕರ್ನಾಟಕ

karnataka

ETV Bharat / state

ದರ್ಶನ್ ಬೆನ್ನಿಗೆ ಸಚಿವರು ನಿಂತರೆ ಅವರು ಅಪರಾಧಿಗಳೇ: ಛಲವಾದಿ ನಾರಾಯಣಸ್ವಾಮಿ - Renukaswamy Murder Case - RENUKASWAMY MURDER CASE

ನಟರಾಗಲಿ, ರಾಜಕಾರಣಿ ಅಗಲಿ, ಸಾಮಾನ್ಯ ಜನರೇ ಆಗಲಿ. ಇಂತಹ ಕೆಟ್ಟ ಕೆಲಸ ಮಾಡಬಾರದು. ಈ ವಿಷಯದಲ್ಲಿ ಯಾವುದೇ ಸಚಿವರು ಅವರ ಬೆನ್ನಿಗೆ ನಿಂತರೆ ಅವರು ಸಹ ಅಪರಾಧಿಗಳೇ ಎಂದು ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

CHALAVADI NARAYANASWAMY PRESS MEET
ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (ETV Bharat)

By ETV Bharat Karnataka Team

Published : Sep 5, 2024, 3:39 PM IST

ಬೆಂಗಳೂರು : ಸಿನಿಮಾ ನಟರು, ರಾಜಕಾರಣಿಗಳು ಸೇರಿದಂತೆ ಜನಸಾಮಾನ್ಯರು ಯಾರೇ ಆಗಲಿ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದು. ಕೊಲೆಯಂತಹ ಕೆಟ್ಟ ದಾರಿಗೆ ನಟ ದರ್ಶನ್ ಇಳಿಯಬಾರದಿತ್ತು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಜೆಪಿ ಕಚೇರಿಯಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಎಲ್ಲಾ ಮಾಧ್ಯಮದಲ್ಲೂ ದರ್ಶನ್ ವಿಷಯವೇ ಚರ್ಚೆಯಾಗುತ್ತಿದೆ. ಈ ವಿಷಯದಲ್ಲಿ ಜನರಿಗೆ ಬಹಳ ಕುತೂಹಲವಿದೆ. ರೇಣುಕಾಸ್ವಾಮಿಯನ್ನ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಇದು ಸರಿಯಾದ ಕ್ರಮ‌ವಲ್ಲ. ಕರೆದು ಬುದ್ಧಿ ಹೇಳಬಹುದಿತ್ತು. ಆದರೆ, ಹತ್ಯೆಯಂತಹ ಹೀನ ಕೃತ್ಯಕ್ಕೆ ಇಳಿದಿದ್ದು ಅಕ್ಷಮ್ಯ ಅಪರಾಧ ಎಂದರು.

ತನಿಖೆ ಮುಕ್ತಾಯಗೊಳಿಸಿದ ಪೊಲೀಸರು ಶಿಕ್ಷೆ ಆಗಲೇಬೇಕೆಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಯಾರೂ ಕೂಡ ಇಂತ ಕ್ರೂರ ಕೃತ್ಯಕ್ಕೆ ಕೈ ಹಾಕಬಾರದು. ಸಣ್ಣ ಪುಟ್ಟ ಸಮಸ್ಯೆ, ತಪ್ಪು ಆಗುತ್ತವೆ. ಅದಕ್ಕೆ ನ್ಯಾಯಾಲಯ ಇದೆ. ಪೊಲೀಸ್ ಇಲಾಖೆಯನ್ನ ಬಳಕೆ ಮಾಡಿಕೊಳ್ಳಬೇಕು. ಇಂತಹ ಕೆಟ್ಟ ದಾರಿ ಹಿಡಿಯಬಾರದಿತ್ತು. ನನ್ನನ್ನ ಯಾರೂ ಏನೂ ಮಾಡಲ್ಲ ಅನ್ನೋ ರೀತಿ ವರ್ತಿಸಿದ್ದು ಸರಿಯಲ್ಲ. ಸಿನಿಮಾ ಸ್ಟಾರ್ ಆಗಲಿ, ರಾಜಕಾರಣಿ ಅಗಲಿ, ಸಾಮಾನ್ಯ ಜನರೇ ಆಗಲಿ. ಇಂತಹ ಕೆಟ್ಟ ಕೆಲಸ ಮಾಡಬಾರದು. ಈ ವಿಷಯದಲ್ಲಿ ಯಾವುದೇ ಸಚಿವರು ಅವರ ಬೆನ್ನಿಗೆ ನಿಂತರೆ ಅವರು ಸಹ ಅಪರಾಧಿಗಳೇ ಎಂದರು.

ಕಾಂಗ್ರೆಸ್​ಗೆ ಕೋವಿಡ್ ಬಂದಿದೆ:ಕ್ಯಾಬಿನೆಟ್‌ನಲ್ಲಿ ಕೋವಿಡ್ ವರದಿ ಮಂಡನೆ ವಿಚಾರ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಛಲವಾದಿ, ಈಗ ಯಾವುದೇ ಕಾಯಿಲೆ ಇಲ್ಲ. ಕೋವಿಡ್ ಇರೋದು ಕಾಂಗ್ರೆಸ್‌ಗೆ ಮಾತ್ರ. ಅದಕ್ಕೆ ಔಷಧಿ ತಗೋಳೋದು ನೋಡಬೇಕು. ಕೋವಿಡ್ ಸಾಂಕ್ರಮಿಕ ಇಡೀ ಪ್ರಪಂಚವನ್ನೇ ನಡುಗಿಸಿತ್ತು. ಅಂತಹ ಸಂದರ್ಭದಲ್ಲಿ ನಮ್ಮ‌ ಜನರ ಪ್ರಾಣ ಕಾಪಾಡಿದರೆ ಸಾಕು ಎಂಬ ಪರಿಸ್ಥಿತಿಯಿತ್ತು. ಈ ಹಿಂದೆ ಆರೋಗ್ಯ ಸಚಿವ ಸುಧಾಕರ್, ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಎಷ್ಟು ಶ್ರಮ ವಹಿಸಿ ಕೆಲಸ‌ ಮಾಡಿದ್ದರು. ಅವರನ್ನ ಅಭಿನಂದಿಸದೆ ನಮ್ಮ ಮೇಲೆ ಸರ್ಕಾರ ಆಪಾದಿಸಿದೆ. ಬಿಜೆಪಿ ನಾಯಕರನ್ನ ಸಿಲುಕಿಸಬೇಕೆಂದು ಮುಯ್ಯಿಗೆ ಮುಯ್ಯಿ ಅಂತ ಕೆಲಸ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಉಡುಪಿ ಜಿಲ್ಲೆಯ ಉತ್ತಮ ಶಿಕ್ಷಕನ ಆಯ್ಕೆ ಮಾಡಿ, ಬಳಿಕ ರದ್ದು ಮಾಡಿದ ವಿಚಾರ ಸಂಬಂಧ ರಾಜ್ಯ ಸರ್ಕಾರ ಡಬಲ್ ಸ್ಟ್ಯಾಂಡ್ ತೆಗೆದುಕೊಂಡಿದೆ. ಎಸ್​ಡಿಪಿಐ ಸಂಘಟನೆ ದೂರು ನೀಡಿದ ಮೇರೆಗೆ ಪ್ರಶಸ್ತಿ ರದ್ದು ಮಾಡಿರುವುದು ಸರಿಯಲ್ಲ. ಹಿಜಾಬ್ ವಿಚಾರದಲ್ಲಿ ಇದ್ದರು ಎಂಬ ಕಾರಣಕ್ಕಾಗಿ ರದ್ದು ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಪ್ರಶ್ನಿಶಿಸಿದ ಛಲವಾದಿ, ನೀವೇ (ಸರ್ಕಾರ) ಉತ್ತಮ ಅಂತ ಮಾಡಿ, ದೂರು ಬಂದ ತಕ್ಷಣ ರದ್ದು ಮಾಡಿರುವುದು ತರವಲ್ಲ ಎಂದು ಸರ್ಕಾರಕ್ಕ ಚಾಟಿ ಬೀಸಿದರು.

ಇದನ್ನೂ ಓದಿ;ಮಹಾರಾಜರ ಶಾಲೆಗೆ ಬೆಳಕಾದ ಶಿಕ್ಷಕ 'ರವಿ': ಜ್ಞಾನ ದೇಗುಲಕ್ಕೆ 1 ಕೋಟಿಗೂ ಅಧಿಕ ದೇಣಿಗೆ ನೀಡಿದ ಹಳೆ ವಿದ್ಯಾರ್ಥಿ - Krishnaraja Wadiyars govt school

ABOUT THE AUTHOR

...view details