ಕೆ.ಎಸ್ ಈಶ್ವರಪ್ಪ ವಿರುದ್ಧ ಪ್ರದೀಪ್ ಈಶ್ವರ್ ವಾಗ್ಧಾಳಿ ಬೆಂಗಳೂರು : ಇಡೀ ಬಿಜೆಪಿ ಒಂದಾದರೂ ಡಿ.ಕೆ ಶಿವಕುಮಾರ್ ಅನ್ನೋ ಬಂಡೆನಾ ಏನೂ ಮಾಡೋಕಾಗಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಸವಾಲು ಹಾಕಿದರು.
ಈಶ್ವರಪ್ಪ ಅವರಿಗೆ ಸೆಟ್ಲಮೆಂಟ್ ಮಾಡ್ತೇನಿ ಎಂಬ ಡಿ ಕೆ ಶಿವಕುಮಾರ್ ಹೇಳಿಕೆ ಬಗ್ಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ. ಕಳೆದ ಹತ್ತು ವರ್ಷದಲ್ಲಿ ಸುಮಾರು 5,233 ಸಾವಿರ ಐಟಿ ಮತ್ತು ಇಡಿ ರೇಡ್ ಆಗಿದ್ದು, ಕೇವಲ 22 ಮಾತ್ರ ಪ್ರೂವ್ ಆಗಿವೆ. ಮೂರು ಸಾವಿರ ಜನ ಕಾಂಗ್ರೆಸ್ ಅವರನ್ನೇ ಟಾರ್ಗೆಟ್ ಮಾಡಿದ್ದಾರೆ ಎಂದು ಪ್ರದೀಪ್ ಈಶ್ವರ್ ಕಿಡಿಕಾರಿದರು.
ಈಶ್ವರಪ್ಪ ಅವರು ಹಿರಿಯ ರಾಜಕಾರಣಿ ಅಧಿಕಾರ ಹೋಗಿದೆ. ಅವರು ಬಾಯಿ ಮುಚ್ಚಿಕೊಂಡು ತೆಪ್ಪಗೆ ಇರಬೇಕು. ಡಿ.ಕೆ ಶಿವಕುಮಾರ್ ಕನಕಪುರದ ಬಂಡೆ ಮಾತ್ರವಲ್ಲ, ಕರ್ನಾಟಕದ ಬಂಡೆ. ಅವರನ್ನು ಟಚ್ ಕೂಡ ಮಾಡಲಾಗಲ್ಲ. ಹಾಗೆಯೇ ಸಿಎಂ ಸಿದ್ದರಾಮಯ್ಯ ಅವರನ್ನು ಕೂಡ ಟಚ್ ಮಾಡಕ್ಕಾಗಲ್ಲ. ಈಶ್ವರಪ್ಪ ಅವರನ್ನೇ ಸೆಟ್ಲುಮೆಂಟ್ ಮಾಡುತ್ತಾರೆ ಎಂಬ ಭರವಸೆ ನನಗೆ ಇದೆ. ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ತಾಕತ್ತು ಬಿಜೆಪಿಯವರಿಗೆ ಗೊತ್ತಿಲ್ಲ. ಭಾನುವಾರ ಸಭೆ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಗೆಲ್ಲಬೇಕು ಎಂದು ರಾಜ್ಯ ಬಿಜೆಪಿ ನಾಯಕರಿಗೆ ಹೇಳಿದ್ದಾರೆ. ಇದರ ಅರ್ಥ ಚುನಾವಣೆಯಲ್ಲಿ ಸೋಲುವ ಭಯವೇ? ಎಂದು ಪ್ರದೀಪ್ ಈಶ್ವರ್ ಪ್ರಶ್ನಿಸಿದರು.
ಔಟ್ ಡೇಟೆಡ್ ಬಗ್ಗೆ ಮಾತನಾಡಲ್ಲ:ಸುಧಾಕರ್ ಮತ್ತೆ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಇಲ್ಲ ಬಿಡಿ ಸಾರ್. ಔಟ್ ಡೇಟೆಡ್ ಬಗ್ಗೆ ನಾನು ಮಾತನಾಡಲ್ಲ ಎಂದು ಮಾಜಿ ಸಚಿವ ಸುಧಾಕರ್ ಔಟ್ ಡೇಟೆಡ್ ಎಂದು ಟೀಕಿಸಿದರು.
ಇದನ್ನೂ ಓದಿ :ವಿಧಾನ ಮಂಡಲ ಜಂಟಿ ಅಧಿವೇಶನ: ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಣ್ಣಿಸಿದ ರಾಜ್ಯಪಾಲರು