ಹಾವೇರಿ :ರಾಜ್ಯದಲ್ಲಿ ಸಿಎಂ, ಡಿಸಿಎಂ ಸ್ಥಾನಗಳ ಬಗ್ಗೆ ಕೆಲವರು ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅದರ ಬಗ್ಗೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವೆಲ್ಲ ಆಗುವುದಾ, ಹೋಗುವುದಾ?. ಅವರ ಹೇಳಿಕೆಗೆ ನಾವ್ಯಾಕೆ ಪ್ರತಿಕ್ರಿಯೆ ನೀಡಬೇಕು. ಒಬ್ಬ ಸ್ವಾಮೀಜಿ ಮಾತನಾಡಿದ್ದು ರಾಜಕಾರಣ ಆಗುತ್ತಾ? ಎಂದು ಪ್ರಶ್ನಿಸಿದರು.
ಸ್ವಾಮೀಜಿಗಳ ಮಾತನ್ನ ಅಲ್ಲಿಯೇ ಕೇಳಬೇಕು, ಅಲ್ಲಿಯೇ ಬಿಡಬೇಕು. ಸ್ವಾಮೀಜಿಗಳನ್ನ ಬಳಸಿಕೊಂಡು ಸಿಎಂ ಕುರ್ಚಿ ಪಡೆಯಲು ಯಾರು ಪ್ರಯತ್ನಿಸುತ್ತಿದ್ದಾರೆ ಎಂಬುದು ತಮಗೆ ಗೊತ್ತಿಲ್ಲ. ಆದರೆ ಸ್ವಾಮೀಜಿಗಳು ರಾಜಕಾರಣ ಮಾತನಾಡಬಾರದು ಎಂದು ತಿಳಿಸಿದರು.
ರಾಜಕೀಯವನ್ನ ರಾಜಕಾರಣಿಗಳು ಮಾತನಾಡಿದರೆ ಅದಕ್ಕೆ ಒಂದು ಬೆಲೆ ಇದೆ. ಆದರೆ ಅದೇ ಮಾತನ್ನ ಸ್ವಾಮೀಜಿಗಳು ಮಾತನಾಡಬಾರದು. ಬಿಜೆಪಿಯವರು ಹೇಳಿದಂತೆ ಲೋಕಸಭೆ ಫಲಿತಾಂಶದ ನಂತರ ರಾಜ್ಯದಲ್ಲಿ ಸರ್ಕಾರ ಪತನವಾಗುತ್ತದೆ ಎಂಬುದು ತಪ್ಪು. ಈಗ ಸಿಎಂ, ಡಿಸಿಎಂ ಸ್ಥಾನಕ್ಕೆ ಚರ್ಚೆ ನಡೆದಿರುವುದು ಅದರ ಮುನ್ನುಡಿ ಎನ್ನುವುದು ತಪ್ಪು ಎಂದು ಸಚಿವ ಶಿವಾನಂದ ಪಾಟೀಲ್.