ಕರ್ನಾಟಕ

karnataka

ETV Bharat / state

ನಕಲಿ ಕಟ್ಟಡ ಕಾರ್ಮಿಕ ಕಾರ್ಡ್​ಗಳನ್ನು ಪತ್ತೆ ಹಚ್ಚಿ ರದ್ದು ಮಾಡುತ್ತೇವೆ: ಸಚಿವ ಲಾಡ್ - SANTOSH LAD

ಮುಂದಿನ ನಾಲ್ಕೈದು ತಿಂಗಳಲ್ಲಿ ಶೇ.70ರಿಂದ 80ರಷ್ಟು ನಕಲಿ ಕಟ್ಟಡ ಕಾರ್ಮಿಕ ಕಾರ್ಡ್​ಗಳನ್ನು ರದ್ದು ಮಾಡುತ್ತೇವೆ ಎಂದು ಸಚಿವ ಸಂತೋಷ್​ ಲಾಡ್ ತಿಳಿಸಿದರು.

ಕಾರ್ಮಿಕ ಇಲಾಖೆ ಸಚಿವ ಸಂತೋಷ್​ ಲಾಡ್​
ಕಾರ್ಮಿಕ ಸಚಿವ ಸಂತೋಷ್​ ಲಾಡ್​ (ETV Bharat)

By ETV Bharat Karnataka Team

Published : Dec 9, 2024, 3:37 PM IST

ಬೆಳಗಾವಿ: "ಕಾರ್ಮಿಕ ಇಲಾಖೆಯಿಂದ 'ಅಂಬೇಡ್ಕರ್ ಸೇವಾ ಕೇಂದ್ರ' ಎಂಬ ನೂತನ ಕಾರ್ಯಕ್ರಮಕ್ಕೆ ಜನವರಿ ಅಥವಾ ಫೆಬ್ರವರಿಯಲ್ಲಿ ಚಾಲನೆ ಸಿಗಲಿದೆ. ಈಗಾಗಲೇ 58 ಲಕ್ಷ ಇದ್ದ ಕಟ್ಟಡ ಕಾರ್ಮಿಕ ಕಾರ್ಡ್​ಗಳನ್ನು 38 ಲಕ್ಷಕ್ಕೆ ತಂದಿದ್ದೇವೆ" ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್​ ಲಾಡ್​ ತಿಳಿಸಿದ್ದಾರೆ. ನಗರದಲ್ಲಿಂದು ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

"43 ವಿಭಾಗಗಳಲ್ಲಿ 43 ವಾಹನಗಳು ಸಂಚರಿಸಲಿವೆ. ಇಲಾಖೆಯ ಪ್ರತಿನಿಧಿಗಳು ನಮ್ಮ ಇಲಾಖೆಯಿಂದ ಲಾಭ ಪಡೆದ ಫಲಾನುಭವಿಗಳನ್ನು ಭೇಟಿಯಾಗಿ ಮಾಹಿತಿ ಕಲೆ ಹಾಕಲಿದ್ದಾರೆ. ಜೊತೆಗೆ, ನಕಲಿ ಕಾರ್ಮಿಕ ಕಾರ್ಡ್​ಗಳನ್ನು ಪತ್ತೆ ಹಚ್ಚಿ ಅವುಗಳನ್ನು ರದ್ದು ಮಾಡುತ್ತೇವೆ. ನಾಲ್ಕೈದು ತಿಂಗಳಲ್ಲಿ ಶೇ.70 ರಿಂದ 80ರಷ್ಟು ನಕಲಿ ಕಟ್ಟಡ ಕಾರ್ಮಿಕ ಕಾರ್ಡ್​ಗಳನ್ನು ರದ್ದು ಮಾಡುತ್ತೇವೆ" ಎಂದರು.

ಸಚಿವ ಸಂತೋಷ್​ ಲಾಡ್ (ETV Bharat)

"ಈ ಬಾರಿಯ ಅಧಿವೇಶನದಲ್ಲಿ ಪ್ರತಿಪಕ್ಷಗಳಿಗೆ ಸರ್ಕಾರ ಸಮರ್ಪಕ ಉತ್ತರ ನೀಡುತ್ತದೆ. ಬಿಜೆಪಿಯವರಿಗೆ ನಾವು ಸದನದಲ್ಲಿ ಮಾತನಾಡಲು ಹೆಚ್ಚು ಅವಕಾಶ ನೀಡಿದ್ದೇವೆ. ಬಿಜೆಪಿ ನಾಯಕರು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಬಗ್ಗೆ ಚರ್ಚೆಗೆ ಆಸಕ್ತಿ ತೋರಿಸಲಿ. ಅಭಿವೃದ್ಧಿ ಬಿಟ್ಟು ಬಿಜೆಪಿಯವರು ಕೇವಲ ವಿವಾದಾತ್ಮಕ ಹಾಗೂ ರಾಜಕೀಯ ವಿಷಯಗಳ ಕುರಿತು ಚರ್ಚೆಗೆ ಹೋಗ್ತಾರೆ" ಎಂದು ಹೇಳಿದರು.

"ಕಾಂಗ್ರೆಸ್ ಸರ್ಕಾರ ಪಂಚಮಸಾಲಿ ಸೇರಿದಂತೆ ಯಾವುದೇ ಹೋರಾಟಕ್ಕೆ ಅಡ್ಡಿಪಡಿಸುತ್ತಿಲ್ಲ. ಯಾರೇ ಆಗಲಿ ಅಧಿಕಾರದಲ್ಲಿ ಇದ್ದಾಗ ಪ್ರತಿಭಟನೆಗಳು ನಡೆಯುವುದು ಸಹಜ ಪ್ರಕ್ರಿಯೆ. ಆ ಪ್ರತಿಭಟನೆಗಳು ಪ್ರಜಾಪ್ರಭುತ್ವದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತವೆ" ಎಂದು ತಿಳಿಸಿದರು.

ಇದನ್ನೂ ಓದಿ:ಆರೋಗ್ಯ ಇಲಾಖೆ ಯಾವುದೇ ಮಾಫಿಯಾದಲ್ಲಿ ಸಿಲುಕಲು ಸಾಧ್ಯವಿಲ್ಲ: ವಿಪಕ್ಷ ನಾಯಕನಿಗೆ ದಿನೇಶ್ ಗುಂಡೂರಾವ್ ತಿರುಗೇಟು

ABOUT THE AUTHOR

...view details