ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ರಾಜಕೀಯ ಬಿಡಲ್ಲ, ಮುಂದಿನ ಚುನಾವಣೆ ಅವರ ನೇತೃತ್ವದಲ್ಲೇ ನಡೆಯುತ್ತೆ: ಸಚಿವ ಬೋಸರಾಜು - MINISTER N S BOSARAJU REACTION

ಚಾಮರಾಜನಗರದಲ್ಲಿ ಶನಿವಾರ ಹೈಟೆಕ್​ ಸರ್ಕಾರಿ ಶಾಲೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ನಾನು ಈಗ ನನ್ನ ರಾಜಕೀಯದ ಕೊನೆಗಾಲದಲ್ಲಿದ್ದೇನೆ ಎಂದು ಹೇಳಿದ್ದರು.

Minister N S Bosaraju
ಸಚಿವ ಎನ್​.ಎಸ್​ ಬೋಸರಾಜು (ETV Bharat)

By ETV Bharat Karnataka Team

Published : Dec 8, 2024, 1:55 PM IST

Updated : Dec 8, 2024, 2:56 PM IST

ರಾಯಚೂರು: "ಸಿದ್ದರಾಮಯ್ಯ ಅವರು ರಾಜಕೀಯ ಬಿಡಲ್ಲ. 78 ವರ್ಷ ವಯಸ್ಸಾಗುತ್ತಿದೆ ಎನ್ನುವ ಕಾರಣಕ್ಕೆ ರಾಜಕೀಯ ಕೊನೇ ಹಂತ ತಲುಪಿದ್ದೇನೆ ಎಂದು ಹೇಳಿದ್ದಾರೆ ಅಷ್ಟೇ" ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್. ಬೋಸರಾಜು ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಪವರ್ ಶೇರಿಂಗ್ ವಿಚಾರ ಆವತ್ತು ಇಲ್ಲ, ಇವತ್ತೂ ಬಂದಿಲ್ಲ. ಮುಂದಿನ ಚುನಾವಣೆ ಅವರ ನೇತೃತ್ವದಲ್ಲೇ ನಡೆಯುತ್ತದೆ. ಯಾರು ರಾಜಕಾರಣದಲ್ಲಿ ಜನರ ಪ್ರೀತಿ ವಿಶ್ವಾಸ ಹೊಂದಿರುತ್ತಾರೋ, ಪಕ್ಷ, ಜನರ ಅಭಿಪ್ರಾಯದ ಮೇಲೆ ಹಾಗೂ ಸರ್ವೇ ಮೇಲೆ ನಡೆಯುತ್ತದೆ. ಸಿಎಂ ಬದಲಾಗಲ್ಲ, ಎಲ್ಲರೂ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಅಂತಹ ಯಾವುದೇ ಪ್ರಸಂಗ ಬಂದಿಲ್ಲ. ಯಾವುದೇ ಸಮಸ್ಯೆಯಿಲ್ಲ, ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ" ಎಂದರು.

ಸಚಿವ ಎನ್.ಎಸ್. ಬೋಸರಾಜು (ETV Bharat)

ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆದಿದೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಅವರು, "ಅವರ ಅಧ್ಯಕ್ಷರ ಸ್ಥಾನವನ್ನು ಮೊದಲು ಸರಿ ಮಾಡಿಕೊಳ್ಳಲಿ. ನಾಲಾಯಕ್ ವಿಜಯೇಂದ್ರ ಅಂತ ರಮೇಶ್ ಜಾರಕಿಹೊಳಿ, ಯತ್ನಾಳ್​ ಹೇಳುತ್ತಿದ್ದಾರೆ. ಮೊದಲು ತಮ್ಮ ಸಮಸ್ಯೆಗಳನ್ನು ಸರಿಮಾಡಿಕೊಳ್ಳಲಿ. ಸಿಎಂ ಬಗ್ಗೆ, ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಲು ನಾಚಿಕೆ ಆಗಬೇಕು. ಅಧ್ಯಕ್ಷನಾಗಲು ವಿಜಯೇಂದ್ರ ನಾಲಾಯಕ್ ಅಂತ ಅವರ ಪಕ್ಷದವರೇ ಹೇಳುತ್ತಿದ್ದಾರೆ. ಸಿಎಂ ಸ್ಥಾನಕ್ಕೆ ನಮ್ಮ ಪಕ್ಷದಲ್ಲಿ ಯಾವುದೇ ಪೈಪೋಟಿ ನಡೆಯುತ್ತಿಲ್ಲ" ಎಂದು ಹೇಳಿದರು.

"ಬಿಜೆಪಿಯವರಿಗೆ ವಕ್ಫ್​, ಉಪಚುನಾವಣೆ ಎಲ್ಲವೂ ಮುಗಿದಿದೆ. ಅವರ ಪಕ್ಷದ ಗೊಂದಲವೇ ಬಗೆಹರಿದಿಲ್ಲ. ಆರು ಬಾಗಿಲು ಮಾಡಿಕೊಂಡಿದ್ದಾರೆ. ಅಧಿವೇಶನದಲ್ಲಿ ರಾಜ್ಯದ, ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆ ನಡೆಯುತ್ತವೆ. ಇಷ್ಟು ದಿನ ಮಾಡಿದ ಸುಳ್ಳು ಆರೋಪಗಳನ್ನೇ ಮಾಡುತ್ತಿದ್ದರೆ ಸುಮ್ಮನೆ ಕಾಲಹರಣ ಆಗುತ್ತದೆ. ಅವರು ಸಹಕಾರ ನೀಡಿದರೆ ಕಲಾಪ ಸುಗಮವಾಗಿ ನಡೆಯುತ್ತೆ" ಎಂದು ಸಚಿವರು ತಿಳಿಸಿದರು.

"ಮುಡಾ ಪ್ರಕರಣ ನ್ಯಾಯಾಂಗ ತನಿಖೆಯಲ್ಲಿದ್ದು, ಅದು ತೀರ್ಮಾನ ಮಾಡುತ್ತದೆ. ವರದಿಯನ್ನ ಸಿಬಿಐ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಯಾರಿಗೆ ಬೇಕಾದರೂ ಕೊಡಲಿ. ಅವರು ವರದಿ ಸೋರಿಕೆ ಮಾಡುತ್ತಿದ್ದಾರೆ. ಸಿಬಿಐ, ಇಡಿಯನ್ನು 75 ವರ್ಷದ ಇತಿಹಾಸದಲ್ಲಿ ಯಾರೂ ಈ ರೀತಿ ದುರ್ಬಳಕೆ ಮಾಡಿಕೊಂಡಿಲ್ಲ. ಬೇಕು ಅಂತಲೇ ಕುತಂತ್ರ ಮಾಡುತ್ತಿದ್ದಾರೆ" ಎಂದು ದೂರಿದರು.

ಇದನ್ನೂ ಓದಿ:ಅಧಿಕಾರ ಹಂಚಿಕೆ ಸೂತ್ರವೂ ಇಲ್ಲ ಏನೂ ಇಲ್ಲ, ಯಾರೂ ಈ ಬಗ್ಗೆ ಮಾತನಾಡಬಾರದು: ಡಿಸಿಎಂ ಎಚ್ಚರಿಕೆ

Last Updated : Dec 8, 2024, 2:56 PM IST

ABOUT THE AUTHOR

...view details