ಕರ್ನಾಟಕ

karnataka

ETV Bharat / state

ಸಂಕ್ರಾಂತಿಗೆ ಬೆಂಗಳೂರಿನಿಂದ ಕಲಬುರಗಿ, ಕಾರವಾರಕ್ಕೆ ವಿಶೇಷ ರೈಲು; ಸಂಚಾರ ದಟ್ಟಣೆಗೆ ಕ್ರಮ - MAKARA SANKRANTI SPECIAL TRAINS

ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಿಲ್ದಾಣದ ನಡುವೆ ಜನವರಿ 10, 11 ಮತ್ತು 12ರಂದು ಈ ವಿಶೇಷ ರೈಲು ಸೇವೆ ಒದಗಿಸಲಾಗಿದೆ.

Makara Sankranti Special Train to karwar and Kalburagi from bengaluru
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : 19 hours ago

ಹುಬ್ಬಳ್ಳಿ: ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಊರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಪ್ರಯಾಣ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ಬೆಂಗಳೂರಿನಿಂದ ಕಲಬುರಗಿ ನಡುವೆ ಮೂರು ಟ್ರಿಪ್​ ವಿಶೇಷ ಎಕ್ಸ್​ಪ್ರೆಸ್​ ರೈಲು ಸೇವೆಯನ್ನು ಒದಗಿಸಿದೆ.

ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಿಲ್ದಾಣದ ನಡುವೆ ಜನವರಿ 10, 11 ಮತ್ತು 12ರಂದು ಈ ವಿಶೇಷ ರೈಲು ಸೇವೆ ಒದಗಿಸಲಾಗಿದೆ. ರೈಲು ಸಂಖ್ಯೆ 06519 ಎಸ್ಎಂವಿಟಿ ಬೆಂಗಳೂರು-ಕಲಬುರಗಿ ವಿಶೇಷ ಎಕ್ಸ್‌ಪ್ರೆಸ್ ಸಂಚಾರ ನಡೆಸಲಿದೆ. ಬೆಂಗಳೂರಿನ ಎಸ್​ಎಂವಿಟಿಯಿಂದ ಬೆಳಗ್ಗೆ 7.40ಕ್ಕೆ ಹೊರಟು, ಮರುದಿನ ಬೆಳಗ್ಗೆ 7.40ಕ್ಕೆ ಕಲಬುರಗಿ ತಲುಪಲಿದೆ.

ರೈಲು ಸಂಖ್ಯೆ 06520 ಕಲಬುರಗಿ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು ಜನವರಿ 11, 12 ಮತ್ತು 13ರಂದು ಬೆಳಿಗ್ಗೆ 9:35ಕ್ಕೆ ಕಲಬುರಗಿಯಿಂದ ಹೊರಟು ಅದೇ ದಿನ ರಾತ್ರಿ 8:00 ಗಂಟೆಗೆ ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ.

ಎಲ್ಲಿಲ್ಲಿ ನಿಲ್ದಾಣ?: ಈ ರೈಲು ಎರಡೂ ಮಾರ್ಗದಲ್ಲಿ ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣ, ಯಾದಗಿರಿ ಮತ್ತು ಶಹಾಬಾದ್ ನಿಲ್ದಾಣಗಳಲ್ಲಿ ನಿಲ್ಲಲಿವೆ. ಈ ವಿಶೇಷ ರೈಲು 16 ಸೆಕೆಂಡ್ ಕ್ಲಾಸ್ ಸ್ಲೀಪರ್ ಬೋಗಿಗಳು ಮತ್ತು 2 ಎಸ್ಎಲ್ಆರ್/ಡಿ ಸೇರಿದಂತೆ 18 ಬೋಗಿಗಳನ್ನು ಒಳಗೊಂಡಿರುತ್ತದೆ.

ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ, ನಿರ್ಗಮನ ಸಮಯಕ್ಕಾಗಿ, ಪ್ರಯಾಣಿಕರು ಭಾರತೀಯ ರೈಲ್ವೆ ಜಾಲತಾಣ www.enquiry.indianrail.gov.inಗೆ ಭೇಟಿ ನೀಡಿ ಅಥವಾ ಸಹಾಯವಾಣಿ 139ಕ್ಕೆ ಕರೆ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದು.

ಕಾರವಾರಕ್ಕೂ ವಿಶೇಷ ರೈಲುಗಳು:ಬೆಂಗಳೂರಿನ ಎಸ್​ಎಂವಿಟಿಯಿಂದ ಕಾರವಾರಕ್ಕೂ ಪ್ರತಿ ಕಡೆಯಿಂದ ಒಂದು ಟ್ರಿಪ್​ನಂತೆ ವಿಶೇಷ ರೈಲು ವ್ಯವಸ್ಥೆಯನ್ನು ಪ್ರಯಾಣಿಕರಿಗೆ ಹಬ್ಬದ ಪ್ರಯುಕ್ತ ಒದಗಿಸಲಿದೆ.

ರೈಲು ಸಂಖ್ಯೆ 06597 ಎಸ್.ಎಂ.ವಿ.ಟಿ ಬೆಂಗಳೂರಿನಿಂದ ಜನವರಿ 10ರಿಂದ ಶುಕ್ರವಾರ ಮಧ್ಯಾಹ್ನ 1.00 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 6.10 ಗಂಟೆಗೆ ಕಾರವಾರ ತಲುಪಲಿದೆ.

ರೈಲು ಸಂಖ್ಯೆ 06598 ಕಾರವಾರ-ಎಸ್.ಎಂ.ವಿ.ಟಿಯಿಂದ ಹೊರಟು ಕಾರವಾರ ದಿಂದ ಜನವರಿ 11 ಶನಿವಾರ ಮಧ್ಯಾಹ್ನ 12.00 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 4.00 ಗಂಟೆಗೆ ಎಸ್.ಎಂ.ವಿ.ಟಿ ಬೆಂಗಳೂರು ತಲುಪುತ್ತದೆ.

ಎಲ್ಲೆಲ್ಲಿ ನಿಲ್ದಾಣ?:ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್‌, ಕಬಕ ಪುತ್ತೂರು, ಬಂಟವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು ಮೂಕಾಂಬಿಕಾ ರಸ್ತೆ, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್‌, ಮತ್ತು ಅಂಕೋಲಾ.

ಈ ರೈಲುಗಳು 07 ಸ್ಲೀಪರ್ ಕೋಚ್‌ಗಳು, 13 ತ್ರೀ ಟಯರ್ ಎಸಿ ಕೋಚ್‌ಗಳು ಮತ್ತು 2 ಲಗೇಜ್ ಕಮ್ ಬ್ರೇಕ್ ವ್ಯಾನ್ ಕೋಚ್‌ಗಳನ್ನು ಒಳಗೊಂಡಿರುತ್ತವೆ.

ಇದನ್ನೂ ಓದಿ: 2ನೇ ಮಗು ಪಡೆಯಲು ಅಡ್ಡಿಯಾದ ಬಾಡಿಗೆ ತಾಯ್ತನ ಕಾಯಿದೆಯ ಸೆಕ್ಷನ್‌ಗಳ​ ರದ್ದತಿಗೆ ಅರ್ಜಿ: ಸರ್ಕಾರಕ್ಕೆ ನೋಟಿಸ್

ABOUT THE AUTHOR

...view details