ಶಿವಮೊಗ್ಗ:ಕ್ಯಾಸನೂರು ಫಾರೆಸ್ಟ್ ಡಿಸೀಸ್ ಬಗ್ಗೆ ಕಾಡಂಚಿನ ಜನರು ಭಯಪಡದೇ, ಮುನ್ನಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಆರೋಗ್ಯ ಇಲಾಖೆಯೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ತುರ್ತು ಕೆಎಫ್‌ಡಿ ಜ್ವರದ ಬಗ್ಗೆ ಸಭೆ ನಡೆಸಲಾಯಿತು. 1960 ರಿಂದ ಕೆಎಫ್‌ಡಿ ಜ್ವರ ನಮ್ಮಲ್ಲಿದೆ. ನಮ್ಮ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಒಂದೊಂದು ಸಾವು ಆಗಿದೆ. ಸಾಗರ, ಹೊಸನಗರ, ಸೊರಬ ಭಾಗದಲ್ಲಿ ಇದು ಹೆಚ್ಚಾಗಿ ಕಂಡು ಬಂದಿದೆ. ಈ ಕುರಿತು ಆರೋಗ್ಯ ಸಚಿವರಲ್ಲಿ ಮಾತನಾಡಿರುವೆ. ಶನಿವಾರ ಆರೋಗ್ಯ ಸಚಿವರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು ಎಂದರು.
ಕೆಎಫ್‌ಡಿ ನಿವಾರಿಸಲು ಸಾರ್ವಜನಿಕರು ಸಹಕಾರ ಅತಿ ಮುಖ್ಯ. ಜ್ವರ ಬಂದಾಗ ಆರೋಗ್ಯ ಇಲಾಖೆಯವರ ಜೊತೆ ಸಹಕರಿಸಬೇಕು. ಈ ಜ್ವರಕ್ಕೆ ಇದುವರೆಗೂ ಲಸಿಕೆ ಕಂಡು ಹಿಡಿದಿಲ್ಲ. ಕಂಡು ಹಿಡಿಯುವ ಕುರಿತು ಪ್ರಯೋಗ ನಡೆಸಲಾಗುತ್ತಿದೆ. ಯಾವುದೇ ಸಮಯದಲ್ಲಿ ಜ್ವರ ಬಂದರೂ ಸಹ ಅವರು ಮುನ್ನಚ್ಚರಿಕೆ ತೆಗೆದುಕೊಳ್ಳಬೇಕಿದೆ. ಕಾಡಿನಲ್ಲಿ ಓಡಾಡುವುದರಿಂದ ಉಣ್ಣೆಯಿಂದ ಜ್ವರ ಬರುತ್ತದೆ ಎಂಬ ಮಾಹಿತಿ ಇದೆ. ಜ್ವರ ಬಂದವರಿಗೆ ಚಿಕಿತ್ಸೆ ಕೊಡಿಸುವಲ್ಲಿ ಜನಪ್ರತಿನಿಧಿಗಳು ಸಹ ಸಹಕರಿಸಬೇಕಿದೆ. ಸಾರ್ವಜನಿಕ ಸ್ಥಳದಲ್ಲಿ ಕೆಎಫ್‌ಡಿ ಬಗ್ಗೆ ಮಾಹಿತಿ ಒದಗಿಸುವ ಕುರಿತು ಸೂಚಿಸಲಾಗಿದೆ. ಜನರು ಗಾಬರಿಯಾಗದೇ ಚಿಕಿತ್ಸೆ ಪಡೆಯಬೇಕಿದೆ. ಸದನ ಫೆ.12 ರಿಂದ ಪ್ರಾರಂಭವಾಗಲಿದೆ. ಕೆಎಫ್‌ಡಿ ಕುರಿತು ಸದನದಲ್ಲಿ ಚರ್ಚೆ ನಡೆಸಲಾಗುತ್ತದೆ. ಕೇವಲ ಆರೋಗ್ಯ ಇಲಾಖೆ ಜೊತೆ ಅಲ್ಲದೆ, ಇತರ ಇಲಾಖೆರವರು ಸಹ ಸಹಕಾರ ನೀಡಬೇಕು ಎಂದರು
ಕೆಎಫ್‌ಡಿ ಚಿಕಿತ್ಸೆಗಾಗಿ ಹೆಲ್ಪ್ಲೈನ್:ಕೆಎಫ್ಡಿಯಿಂದ ಉಂಟಾದ ಸಾವಿನ ಕುರಿತು ತನಿಖೆಗೆ ನಡೆಸಲಾಗುವುದು. ಸಾರ್ವಜನಿಕರಿಗಾಗಿ 222382 ಹೆಲ್ಪ್ಲೈನ್ ತೆಗೆಯಲಾಗಿದೆ. ಇದು ಶನಿವಾರ(ಫೆ. 10)ದಿಂದ ಕಾರ್ಯಾರಂಭ ಮಾಡಲಾಗುವುದು. ಲಸಿಕೆ ತಯಾರಿಸಲು ಯಾವ ಕಂಪನಿಗಳು ಬಾರದ ಕಾರಣಕ್ಕೆ ಸರ್ಕಾರ ಪ್ರಯೋಗಾಲಯಕ್ಕೆ ಸೂಚನೆ ನೀಡಲಾಗಿದೆ. ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ಈ ಹೆಲ್ಪ್ಲೈನ್ ಬಳಸಬಹುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.