ತುಮಕೂರು:ನಗರದ ಆರ್ಟಿಓ ಕಚೇರಿಯ ಮೇಲೆ 10ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದೆ. ಬುಧವಾರ ಬೆಳಗ್ಗೆ ಸುಮಾರು 11 ಗಂಟೆ ಸುಮಾರಿಗೆ ನಗರದ ಬಿ ಹೆಚ್ ರಸ್ತೆಯಲ್ಲಿರುವ ಆರ್ಟಿಓ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಆಗಮಿಸಿದ್ದರು.
ಆರ್ಟಿಓ ಕಚೇರಿಗೆ ಬರುತ್ತಿದ್ದ ಪ್ರತಿಯೊಬ್ಬರು ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಲೋಕಾಯುಕ್ತ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದರು. ಬೆಳಗ್ಗೆಯಿಂದಲೂ ಆರ್ಟಿಓ ಕಚೇರಿ ಆವರಣದಲ್ಲಿ ಇದ್ದವರಿಗೆ ಯಾವ ಕೆಲಸದ ನಿಮಿತ್ತ ಆಗಮಿಸಿದ್ದಾಗಿ ತೀವ್ರ ವಿಚಾರಣೆ ನಡೆಸಿದರು.