ಶಾಸಕ ಲಕ್ಷ್ಮಣ್ ಸವದಿ (ETV Bharat) ಚಿಕ್ಕೋಡಿ: 'ನನಗೆ ಮತ ಹಾಕಿರುವ ಅಥಣಿ ಜನರಿಗೆ ಹೂ ತರುವೆ, ಹೊರತಾಗಿ ಹುಲ್ಲು ತರುವ ಕೆಲಸ ಮಾಡಲಾರೆ. ನನಗೆ ಯಾವುದೇ ಮಂತ್ರಿ ಪದವಿಯ ಅವಶ್ಯಕತೆ ಇಲ್ಲ. ನಾನು ಎಲ್ಲವನ್ನೂ ನೋಡಿರುವೆ' ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ವಿರೋಧಿಗಳಿಗೆ ಟಾಂಗ್ ನೀಡಿದರು.
ಸಿದ್ದರಾಮಯ್ಯ ಸಂಪುಟದಲ್ಲಿ ಸವದಿಗೆ ಸಚಿವ ಸ್ಥಾನ ಸಿಗುತ್ತಾ? ಎಂಬ ಚರ್ಚೆಯ ಮಧ್ಯೆ ಲಕ್ಷ್ಮಣ್ ಸವದಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಲೋಕಸಭಾ ಚುನಾವಣೆಯಲ್ಲಿ ಅಥಣಿಯಲ್ಲಿ ಕಾಂಗ್ರೆಸ್ಗೆ ಹಿನ್ನಡೆ ಕುರಿತು ಸಚಿವ ಸತೀಶ್ ಜಾರಕಿಹೊಳಿ ಅವರು ಸವದಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ಶನಿವಾರ ಅಥಣಿ ಪಟ್ಟಣದಲ್ಲಿ ಮಾತಮಾಡಿದ ಅವರು, ಅಧಿಕಾರ ಎಂದಿಗೂ ಶಾಶ್ವತವಲ್ಲ. ನಾವು ಮಾಡುವ ಒಳ್ಳೆಯ ಕೆಲಸ ನಮ್ಮನ್ನು ಗುರುತಿಸುತ್ತದೆ. ನಾನು ಸಚಿವನಾಗಬೇಕು ಎಂಬ ಆಸೆ ಹೊಂದಿಲ್ಲ. ಉಪಮುಖ್ಯಮಂತ್ರಿಯಿಂದ ಹಿಡಿದು ಎಲ್ಲಾ ಖಾತೆಯನ್ನೂ ನೋಡಿರುವೆ. ನನಗೆ ಸಿಕ್ಕ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿರುವೆ. ನಾನು ಯಾವುದನ್ನು ಮಾಡಬಾರದೆಂದು ಹೇಳಿದ್ದೆನೋ, ಅದನ್ನೇ ಮಾಡಿ ಈಗ ಕೆಲವರು ಜೈಲಿಗೆ ಹೋಗಿದ್ದಾರೆ ಎಂದರು.
ಇದನ್ನೂ ಓದಿ:ಮುಂಗಾರು ಅಧಿವೇಶನ: ರಾಜ್ಯ ಸರ್ಕಾರಕ್ಕೆ ಚಳಿ ಬಿಡಿಸಲು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ತಯಾರಿ - Karnataka Legislature Session