ಕರ್ನಾಟಕ

karnataka

ETV Bharat / state

ಹಟ್ಟಿ‌ ಚಿನ್ನದ ಗಣಿಯಲ್ಲಿ ದುರಂತ: ಓರ್ವ ಕಾರ್ಮಿಕ ಸಾವು, ನಾಲ್ವರಿಗೆ ಗಂಭೀರ ಗಾಯ - Hatti Gold Mine Soil Collapse - HATTI GOLD MINE SOIL COLLAPSE

ಮಣ್ಣು ಕುಸಿದು ಓರ್ವ ಕಾರ್ಮಿಕ ಮೃತಪಟ್ಟ ಘಟನೆ ಹಟ್ಟಿ ಚಿನ್ನದ ಗಣಿಯಲ್ಲಿ ನಡೆದಿದೆ.

hatti gold mine
ಮೃತ ಕಾರ್ಮಿಕ (ETV Bharat)

By ETV Bharat Karnataka Team

Published : Jul 12, 2024, 9:08 AM IST

ರಾಯಚೂರು:ಮಣ್ಣು ಕುಸಿದು ಓರ್ವ ಕಾರ್ಮಿಕ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಲ್ಲಿ ಸಂಭವಿಸಿದೆ. ಲಿಂಗಸುಗೂರು ತಾಲೂಕಿನ ಹಟ್ಟಿ‌ ಚಿನ್ನದ ಗಣಿ ಮಲ್ಲಪ್ಪ ಶಾಫ್ಟ್‌ನ 2800 ಅಡಿಯೊಳಗೆ ಮುಂಜಾನೆ 3.30ರ ಸುಮಾರಿಗೆ ಈ ದುರ್ಘಟನೆ ಜರುಗಿದೆ.

ಮೌನೇಶ ಎಂಬ ಕಾರ್ಮಿಕ ಮೃತಪಟ್ಟಿದ್ದಾರೆ. ಇನ್ನುಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಲ್ಲಿ ಹನುಮಂತ್ರಯ, ಬೂದೆಪ್ಪ ಹಾಗೂ ರಂಗಸ್ವಾಮಿಗೆ ತೀವ್ರ ಗಾಯಗಳಾಗಿದೆ. ಗಾಯಾಳು ಹನುಮಂತ್ರಯ ಎನ್ನುವರನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ, ಬೂದೆಪ್ಪ ಹಾಗೂ ರಂಗಸ್ವಾಮಿ ಎಂಬವರಿಗೆ ಬೆಂಗಳೂರಿನ ಕಾವೇರಿ‌ ಆಸ್ಪತ್ರೆ ಹಾಗೂ ಶಿವರಾಜ್ ಎಂಬವರನ್ನು ಹಟ್ಟಿ ಗಣಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಗುರುವಾರ ರಾತ್ರಿ ಪಾಳಿಯಲ್ಲಿ ಕಾರ್ಮಿಕರು ಕೆಲಸಕ್ಕೆ ತೆರಳಿದ್ದರು. ಭೂಮಿಯೊಳಗಿನ 2800 ಅಡಿಯೊಳಗೆ ಕಾರ್ಯ ನಿರ್ವಹಿಸುವಾಗ ಮಣ್ಣು ಕುಸಿದು ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಗಣಿ ಇಲಾಖೆ ಅಧಿಕಾರಿಗಳು ಹಾಗೂ ಹಟ್ಟಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮಂಡ್ಯ: ಕಾರಿಗೆ ಗುದ್ದಿದ ಲಾರಿ, ಸ್ಥಳದಲ್ಲೇ ಮೂವರು ಸಾವು

ABOUT THE AUTHOR

...view details