ಕರ್ನಾಟಕ

karnataka

ETV Bharat / state

ಚಾಲಕರೇ ಎಚ್ಚರ: ಇಂದಿನಿಂದ 130 ಕೀ.ಮೀ.ಗಿಂತ ವೇಗವಾಗಿ ಚಲಾಯಿಸಿದ್ರೆ ಎಫ್ಐಆರ್, ಲೈಸೆನ್ಸ್ ರದ್ದು - FIR Against Speed Driving - FIR AGAINST SPEED DRIVING

ನಿಗದಿಗಿಂತ ಹೆಚ್ಚು ವೇಗವಾಗಿ ವಾಹನ ಚಲಾಯಿಸಿದರೆ ಎಫ್ಐಆರ್ ದಾಖಲಾಗುವ ಜೊತೆಗೆ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡಲಾಗುತ್ತಿದೆ. ಇಂದಿನಿಂದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

police
ಸಂಗ್ರಹ ಚಿತ್ರ (ETV Bharat)

By ETV Bharat Karnataka Team

Published : Aug 1, 2024, 5:41 PM IST

ಬೆಂಗಳೂರು: ‌ರಾಜ್ಯದಲ್ಲಿ ನಿಗದಿಗಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ಇಂದಿನಿಂದ ಚಾಲಕ / ಮಾಲೀಕರ ವಿರುದ್ಧ ಎಫ್ಐಆರ್ ದಾಖಲಾಗಲಿದೆ.‌‌ ಜೊತೆಗೆ, ಅಂತಹ ವಾಹನ ಸವಾರರ ಚಾಲನಾ ಪರವಾನಗಿ (ಡ್ರೈವಿಂಗ್ ಲೆಸೆನ್ಸ್) ರದ್ದು ಕೋರಿ ಆರ್​​ಟಿಒ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಸೇರಿದಂತೆ ರಾಜ್ಯದಲ್ಲಿ ಪ್ರತಿ ಗಂಟೆಗೆ 130 ಕೀ.ಮೀ.ಗಿಂತ ಹೆಚ್ಚಿನ ವೇಗವಾಗಿ ವಾಹನ ಚಲಾಯಿಸಿದರೆ ಅಂತಹ ಚಾಲಕರ ವಿರುದ್ಧ ಇಂದಿನಿಂದ ಎಫ್ಐಆರ್ ದಾಖಲಿಸಲಾಗುವುದು ಎಂದು ರಸ್ತೆ ಸಾರಿಗೆ ಹಾಗೂ ಸುರಕ್ಷತೆ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದ್ದರು.

ವೇಗದ ಚಾಲನೆಯಿಂದಾಗಿ ಹೈವೇಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿರುವುದು ಕಂಡುಬಂದಿತ್ತು. ಹೀಗಾಗಿ, ಅಪಘಾತ ಪ್ರಮಾಣ ತಗ್ಗಿಸಲು ವೇಗದ ಮಿತಿ 130 ಕಿ.ಮೀ ದಾಟದಂತೆ ಸೂಚಿಸಲಾಗಿತ್ತು‌‌.‌ ಇಂದಿನಿಂದ ರಾಜ್ಯದಲ್ಲಿ ನಿಗದಿಪಡಿಸಿದಕ್ಕಿಂತ ವೇಗವಾಗಿ ಚಲಾಯಿಸಿದರೆ ಪ್ರಕರಣ ದಾಖಲಾಗಿದೆ.

'ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ನಿಗದಿಪಡಿಸಿದ ವೇಗದ ಮಿತಿ ಮೀರಿ 130 ಕೀ.ಮಿಗಳಿಗಿಂತ ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುವ ವಾಹನ ಚಾಲಕರ ವಿರುದ್ಧ ಬಿಎನ್​ಎಸ್ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಳ್ಳುವುದಲ್ಲದೆ, ಅಂತಹ ವಾಹನ ಚಾಲಕರ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಲು ಸಕ್ಷಮ ಅಧಿಕಾರಿಗಳಿಗೆ ಶಿಫಾರಸು ಸಲ್ಲಿಸಲಾಗುವುದು' ಎಂದು ಪೊಲೀಸರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ:ಬೆಂಗಳೂರಲ್ಲಿ ವ್ಹೀಲಿಂಗ್​ ಪುಂಡರಿಗೆ ಪೊಲೀಸರ ಶಾಕ್​: ವರ್ಷದಲ್ಲಿ ದಾಖಲಾಗಬೇಕಿದ್ದ ಪ್ರಕರಣ ಆರೇ ತಿಂಗಳಲ್ಲಿ ದಾಖಲು - CASE AGAINST WHEELING

ABOUT THE AUTHOR

...view details