ಹಸೆ ಚಿತ್ತಾರ ಕಲಾವಿದ ಚಂದ್ರಶೇಖರ್ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. | Read More
Breaking News Karnataka Live: Sat Wed Oct 30 2024 ಕರ್ನಾಟಕ ಇತ್ತೀಚಿನ ವರದಿ
Published : Oct 30, 2024, 7:15 AM IST
|Updated : 18 hours ago
ಹಸೆ ಚಿತ್ತಾರ ಕಲಾವಿದ ಚಂದ್ರಶೇಖರ್‌ಗೆ ರಾಜ್ಯೋತ್ಸವ ಪ್ರಶಸ್ತಿ
ಹಿರಿಯ ಸಾಹಿತಿ ಬಾಳಾಸಾಹೇಬ ಲೋಕಾಪುರಗೆ ರಾಜ್ಯೋತ್ಸವ ಪ್ರಶಸ್ತಿ ಗರಿ
ಹಿರಿಯ ಸಾಹಿತಿ ಬಾಳಾಸಾಹೇಬ ಲೋಕಾಪುರ ಅವರು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. | Read More
ಉಪಚುನಾವಣೆ: ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಜಿ.ಟಿ.ದೇವೇಗೌಡಗೆ ಕೊಕ್
ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಗೆ 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಹೆಚ್.ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ. | Read More
ರಾಜ್ಯೋತ್ಸವದಂದು ಕರಾಳ ದಿನಾಚರಣೆ ಪ್ರಶ್ನಿಸಿ ಅರ್ಜಿ: ಸರ್ಕಾರ, ಎಂಇಎಸ್‌ಗೆ ಹೈಕೋರ್ಟ್ ನೋಟಿಸ್
ಕನ್ನಡ ರಾಜ್ಯೋತ್ಸವ ವಿರೋಧಿಸಿ ಎಂಇಎಸ್ ಉದ್ದೇಶಿಸಿರುವ ಕರಾಳ ದಿನ ಪ್ರತಿಭಟನೆಗೆ ಮಧ್ಯಂತರ ಪ್ರತಿಬಂಧಕಾದೇಶ ಕೋರಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಎಂಇಎಸ್‌ಗೆ ಇಂದು ನೋಟಿಸ್ ಜಾರಿ ಮಾಡಿದೆ. | Read More
ಹುಬ್ಬಳ್ಳಿ ಟೆಕ್ಕಿ 24 ಗಂಟೆ ಡಿಜಿಟಲ್ ಅರೆಸ್ಟ್: ₹ 81 ಲಕ್ಷ ದೋಚಿದ ವಂಚಕರು!
ಹುಬ್ಬಳ್ಳಿ ನಗರದ ಸಾಫ್ಟ್‌ವೇರ್ ಇಂಜಿನಿಯರ್ವೊಬ್ಬರು ಸೈಬರ್ ವಂಚಕರ ಡಿಜಿಟಲ್ ಅರೆಸ್ಟ್ ಬಲೆಗೆ ಸಿಲುಕಿ 81 ಲಕ್ಷ ಹಣ ಕಳೆದುಕೊಂಡಿದ್ದಾರೆ. | Read More
ಚಿಕ್ಕಮಗಳೂರು: ದೇವರ ದರ್ಶನಕ್ಕೆ ತೆರಳುತ್ತಿದ್ದ ದಂಪತಿ ಕಾರು ಅಪಘಾತ, ಮಹಿಳೆ ಸ್ಥಳದಲ್ಲೇ ಸಾವು
ದೇವರ ದರ್ಶನಕ್ಕೆ ಹೋಗುತ್ತಿದ್ದ ಕಾರೊಂದು ಪಲ್ಟಿಯಾಗಿ ಕೆರೆಗೆ ಬಿದ್ದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. | Read More
ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕಿರಲಿಲ್ಲ, ಅದರೂ ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ: ಅರುಣ್ ಯೋಗಿರಾಜ್
ನಾನು ಪ್ರಶಸ್ತಿಗೆ ಅರ್ಜಿ ಹಾಕಿರಲಿಲ್ಲ. ಅದರೂ, ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತೋಷ ನೀಡಿದೆ ಎಂದು ಖ್ಯಾತ ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ತಿಳಿಸಿದರು. | Read More
ಬಳ್ಳಾರಿ ಜೈಲಿನಿಂದ ದರ್ಶನ್ ಬಿಡುಗಡೆ: ಬೆಂಗಳೂರಿನತ್ತ ಪ್ರಯಾಣ
ಹೈಕೋರ್ಟ್ 6 ವಾರಗಳ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ನಟ ದರ್ಶನ್ ಬಳ್ಳಾರಿ ಜೈಲಿನಿಂದ ಬಿಡುಗಡೆಯಾದರು. | Read More
ಶಕ್ತಿ ಯೋಜನೆ ಮರುಚಿಂತನೆಗೆ ಮಹಿಳೆಯರಿಂದಲೇ ಒತ್ತಡ: ಡಿ.ಕೆ.ಶಿವಕುಮಾರ್
ಕರ್ನಾಟಕ ಸಾರಿಗೆ ಸಂಸ್ಥೆಯನ್ನು ವ್ಯವಹಾರಕ್ಕಾಗಿ ಹುಟ್ಟುಹಾಕಿಲ್ಲ, ನಾಗರಿಕರ ಸೇವೆಗಾಗಿ ಮೀಸಲಿಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. | Read More
ದರ್ಶನ್‌ಗೆ ಜಾಮೀನು ಸಿಕ್ಕಿರುವುದು ಖುಷಿ ನೀಡಿದೆ, ಹೋಗಿ ಆರೋಗ್ಯ ವಿಚಾರಿಸುವೆ: ಸಚಿವ ಜಮೀರ್ ಅಹ್ಮದ್
ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಕೋರ್ಟ್ ಮಧ್ಯಂತರ ಜಾಮೀನು ನೀಡಿರುವ ಬಗ್ಗೆ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯಿಸಿದ್ದಾರೆ. | Read More
ಮೈಸೂರಿನ ಈ ಸ್ಥಳಗಳು 'ನಿಶಬ್ಧ ವಲಯ': ಇಲ್ಲಿ ಪಟಾಕಿ ಸಿಡಿಸುವಂತಿಲ್ಲ
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮೈಸೂರು ನಗರದ ಕಮಿಷನರೇಟ್ ವ್ಯಾಪ್ತಿಯ ಸ್ಥಳಗಳನ್ನು ನಿಶಬ್ದ ವಲಯ ಎಂದು ಘೋಷಿಸಲಾಗಿದೆ. | Read More
ಅರಣ್ಯ ಇಲಾಖೆಯೊಂದಿಗಿನ ಗೊಂದಲ ನಿವಾರಿಸಿ, ರಾಜಸ್ವ ಸಂಗ್ರಹಣೆಗೆ ತ್ವರಿತ ಕ್ರಮ ಕೈಗೊಳ್ಳಿ: ಸಿಎಂ ಸಿದ್ದರಾಮಯ್ಯ ಸೂಚನೆ
ರಾಜ್ಯದ ಹಿತಾಸಕ್ತಿ, ಅಭಿವೃದ್ಧಿಗೆ ಧಕ್ಕೆಯಾದರೆ ಸಹಿಸಲ್ಲ. ನಿಯಮ ಉಲ್ಲಂಘಿಸದೆ ಕ್ರಿಯಾಶೀಲತೆ ತೋರಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು. | Read More
ರಾಜ್ಯದಲ್ಲಿ ಹಿಂಗಾರು ಮಳೆ ಮತ್ತೆ ಚುರುಕು; ಐದು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ರಾಜ್ಯದಲ್ಲಿ ಹಿಂಗಾರು ಮಳೆ ಮತ್ತೆ ಚುರುಕು ಪಡೆಯಲಿದ್ದು, ಐದು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. | Read More
ಸಿಎಂ ಆಗಿದ್ದಾಗ್ಲೇ ಚನ್ನಪಟ್ಟಣಕ್ಕೆ ಏನೂ ಮಾಡದ ಕುಮಾರಣ್ಣ ಈಗೇನು ಮಾಡ್ತಾರೆ?: ಡಿ.ಕೆ.ಶಿವಕುಮಾರ್
ಆ ಕ್ಷೇತ್ರದಲ್ಲಿ ಅವರು ಎರಡು ಬಾರಿ ನಿಂತರು. ಅವರ ಧರ್ಮಪತ್ನಿಯನ್ನೂ ನಿಲ್ಲಿಸಿದರು. ಈಗ ನಿರೀಕ್ಷೆಯಂತೆ ತಮ್ಮ ಪುತ್ರನನ್ನೂ ನಿಲ್ಲಿಸಿದ್ದಾರೆ. ಸಿಎಂ ಆಗಿದ್ದಾಗಲೇ ಚನ್ನಪಟ್ಟಣಕ್ಕೆ ಏನೂ ಮಾಡದ ಕುಮಾರಣ್ಣ ಈಗೇನು ಮಾಡುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. | Read More
ಅರುಣ್ ಯೋಗಿರಾಜ್, ಹುಲಿಕಲ್ ನಟರಾಜ್ ಸೇರಿ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ
2024ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿದೆ. | Read More
ಜಾಮೀನಿನ ಷರತ್ತು ಪೂರೈಸಿದ ದರ್ಶನ್ ಪರ ವಕೀಲರು: ಸಂಜೆಯೊಳಗೆ ದರ್ಶನ್ ಬಿಡುಗಡೆ ಸಾಧ್ಯತೆ
ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಗುತ್ತಿದ್ದಂತೆ ಹರ್ಷದಲ್ಲಿರುವ ಅವರ ಅಭಿಮಾನಿಗಳು ಸಂಭ್ರಮಾಚರಣೆಗೆ ಮುಂದಾಗಿದ್ದಾರೆ. ಜೈಲಾಧಿಕಾರಿಗಳಿಗೆ ಜಾಮೀನು ಆದೇಶ ಪ್ರತಿ ಇಂದೇ ಲಭ್ಯವಾಗಲಿದ್ದು, ಬಿಡುಗಡೆಯ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಂಜೆಯೊಳಗೆ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ. | Read More
ಐರಾವತ 2.0 ಗೆ ಸಿಎಂ ಚಾಲನೆ: ಬಸ್ನ ವಿಶೇಷತೆಗಳೇನು ಗೊತ್ತಾ?
ಐಷಾರಾಮಿ ಸಾರಿಗೆ ಸೇವೆ ಒದಗಿಸುತ್ತಿರುವ ರಾಜ್ಯ ರಸ್ತೆ ಸಾರಿಗೆ ನಿಗಮ ಇದೀಗ ಮತ್ತಷ್ಟು ಹೈಟೆಕ್ ಸೇವೆಗೆ ಮುಂದಾಗಿದ್ದು, ವೋಲ್ವೋ ಕ್ಲಬ್ ಕ್ಲಾಸ್ 2.0 ಬಸ್ಗಳನ್ನ ರಸ್ತೆಗಿಳಿಸುತ್ತಿದೆ. ಅದರ ವೈಶಿಷ್ಟ್ಯಗಳು ಹೀಗಿವೆ. | Read More
ವಕ್ಫ್ ವಿವಾದ ಬಿಜೆಪಿಯವರ ರಾಜಕಾರಣ: ಸಿಎಂ, ಗೃಹ ಸಚಿವರ ಟೀಕೆ
ವಕ್ಫ್ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಸಿಎಂ, ಗೃಹ ಸಚಿವರು ಇಂದು ಮತ್ತೆ ಕಿಡಿಕಾರಿದರು. | Read More
ದರ್ಶನ್ ಇಂದೇ ಬಿಡುಗಡೆ ಸಾಧ್ಯತೆ: ನೆಚ್ಚಿನ ನಟನ ಕಾಣಲು ಕಾರಾಗೃಹದ ಮುಂದೆ ಅಭಿಮಾನಿಗಳ ಜಮಾವಣೆ
ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಮಂಜೂರಾಗಿದ್ದು, ಪತ್ನಿ ವಿಜಯಲಕ್ಷ್ಮಿ ಈಗಾಗಲೇ ಬಳ್ಳಾರಿಗೆ ಆಗಮಿಸಿ, ದರ್ಶನ್ ಭೇಟಿ ಮಾಡಿದ್ದಾರೆ. | Read More
ಅತಿಕ್ರಮಣ ತೆರವಿಗೆ ಕ್ರಮ ಅಷ್ಟೇ, ಇದರಲ್ಲಿ ರಾಜಕಾರಣ ಬೇಡ: ಜೋಶಿಗೆ ಜಮೀರ್ ತಿರುಗೇಟು
ನಾನು ಹೇಳಿದ ತಕ್ಷಣ, ಸೂಚನೆ ಕೊಟ್ಟಾಕ್ಷಣ ಅಧಿಕಾರಿಗಳು ನಿಮ್ಮ ಆಸ್ತಿಯನ್ನು ವಕ್ಫ್ ಹೆಸರಲ್ಲಿ ಮಾಡಲು ಸಾಧ್ಯವಾ? ಅದಕ್ಕೆ ಎಂದು ಕಾನೂನು ಇಲ್ಲವಾ ಎಂದು ಸಚಿವ ಜಮೀರ್ ಅಹ್ಮದ್ ಅವರು ವಕ್ಫ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. | Read More
ಮದುವೆಗೆ ವಧು ಸಿಕ್ತಿಲ್ಲವೆಂದು ಮಾದಪ್ಪನ ಬೆಟ್ಟಕ್ಕೆ ಹೊರಟ ಯುವಕರ ದಂಡು
ಪ್ರತಿ ವರ್ಷ ಮದುವೆಗೆ ವಧು ಸಿಗದ ಯುವಕರು ತಂಡವಾಗಿ ಮಲೆ ಮಹದೇಶ್ವರನ ಬೆಟ್ಟಕ್ಕೆ ಹೋಗಿ ತಮಗೆ ಮದುವೆಗೆ ವಧು ಕರುಣಿಸುವಂತೆ ಬೇಡಿಕೊಳ್ಳುತ್ತಾರೆ. ಅದು ಈ ವರ್ಷವೂ ಮುಂದುವರೆದಿದೆ. | Read More
ನಾಮಪತ್ರ ವಾಪಸ್ ಪಡೆದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ
ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ತಮ್ಮ ನಾಮಪತ್ರ ವಾಪಸ್ ಪಡೆದರು. | Read More
ಮುಡಾ ಪ್ರಕರಣ: ರಾಕೇಶ್ ಪಾಪಣ್ಣ ಮನೆ ಮೇಲಿನ 32 ಗಂಟೆಗಳ ಇಡಿ ದಾಳಿ ಅಂತ್ಯ
32 ಗಂಟೆಗಳ ಕಾಲ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿರುವ ಇಡಿ ಅಧಿಕಾರಿಗಳು ರಾಕೇಶ್ ಪಾಪಣ್ಣ ಅವರ ಮನೆಯಿಂದ ಕೆಲವು ಪ್ರಮುಖ ದಾಲೆಗಳನ್ನು ಸಂಗ್ರಹಿಸಿದ್ದಾರೆ. | Read More
ನಟ ದರ್ಶನ್‌ಗೆ ಬಿಗ್ ರಿಲೀಫ್: ಆರು ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಆದೇಶ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಹೈಕೋರ್ಟ್ ಆರು ವಾರಗಳ ಕಾಲ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ. | Read More
ಬೆಂಗಳೂರಿನಲ್ಲಿ ಬ್ರಿಟನ್ ರಾಜ: ವೈಟ್ಫೀಲ್ಡ್ಗೆ ಭೇಟಿ ನೀಡುತ್ತಿರುವ ಉದ್ದೇಶವಿದು!
ಕಳೆದ ವರ್ಷ ಮೇ 6ರಂದು ಬ್ರಿಟನ್ ರಾಜನಾಗಿ ಪಟ್ಟಾಭಿಷೇಕ ಮಾಡಿಕೊಂಡ ಬಳಿಕ ಬ್ರಿಟನ್ ರಾಜ ಚಾರ್ಲ್ಸ್ ಬೆಂಗಳೂರಿಗೆ ಇದೇ ಮೊದಲ ಬಾರಿ ಭೇಟಿ ನೀಡುತ್ತಿದ್ದಾರೆ. | Read More
"ಬೇಲಿನೇ ಎದ್ದು ಹೊಲ ಮೇಯ್ದಂತೆ": ವಕ್ಫ್ ಬೋರ್ಡ್ಗೆ ಜಮೀರ್ ಅಹಮದ್ ಕುಮ್ಮಕ್ಕು - ಬಿ.ವೈ. ವಿಜಯೇಂದ್ರ
ರೈತರ ಭೂಮಿಯನ್ನು ವಕ್ಫ್ ಬೋರ್ಡ್ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದು, ಇದಕ್ಕೆ ಜಮೀರ್ ಅಹ್ಮದ್ ಅವರು ಕುಮ್ಮಕ್ಕು ಕೊಡುತ್ತಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪಿಸಿದ್ದಾರೆ. | Read More
ಶಿಗ್ಗಾಂವಿ ಉಪ ಚುನಾವಣೆ: ಸಚಿವ ಜಮೀರ್ ಮಾತಿಗೆ ಮಣಿದು ನಾಮಪತ್ರ ವಾಪಸ್ ಪಡೆಯುತ್ತಾರಾ ಖಾದ್ರಿ?
ಇತ್ತ ಖಾದ್ರಿ ಬೆಂಬಲಿಗರು ನಾಮಪತ್ರ ವಾಪಸ್ ಪಡೆಯದಂತೆ ಪಟ್ಟು ಹಿಡಿದಿದ್ದು, ಯಾರ ಮಾತಿಗೆ ಅಜ್ಜಂಪೀರ್ ಖಾದ್ರಿ ಮಣಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. | Read More
ಹೊಗೇನಕಲ್ನಲ್ಲಿ ತೆಪ್ಪ ಓಡಿಸಲು ತಮಿಳುನಾಡು ಖ್ಯಾತೆ: ದಿಢೀರ್ ಸಭೆ ಬಳಿಕ ಪ್ರಕರಣ ಸುಖಾಂತ್ಯ
ಹೊಗೇನಕಲ್ ಜಲಪಾತ ವೀಕ್ಷಣೆಗೆ ಪ್ರವಾಸಿಗರನ್ನು ತೆಪ್ಪ ನಡೆಸುವ ಕನ್ನಡಿಗರು ಕರೆದುಕೊಂಡು ಹೋಗಿದ್ದಾಗ ತಮಿಳುನಾಡು ಪೊಲೀಸರು ಮೊಬೈಲ್ ಹಾಗೂ ಹುಟ್ಟು ಕಿತ್ತುಕೊಂಡಿದ್ದರು. ಈ ವರ್ತನೆಗೆ ಕನ್ನಡಿಗರು ಆಕ್ರೋಶ ಹೊರಹಾಕಿದ್ದರು. | Read More
ನಾನೇ ಜಯನಗರಕ್ಕೆ ಅನುದಾನ ಕೊಟ್ಟಿಲ್ಲ, ಸರ್ಕಾರದ ಮೇಲಿನ ಆರೋಪ ಸಾಬೀತುಪಡಿಸಲಿ: ಡಿಸಿಎಂ ಡಿಕೆಶಿ
ನಾನೇ ಜಯನಗರಕ್ಕೆ ಅನುದಾನ ಕೊಟ್ಟಿಲ್ಲ, ಸರ್ಕಾರದ ಮೇಲಿನ ಆರೋಪ ಸಾಬೀತುಪಡಿಸಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. | Read More
ರಾತ್ರಿ ರಾಜಕಾರಣ ಪರಿಚಯಿಸಿ, ಕರಗತ ಮಾಡಿದೋರೇ ಕಾಂಗ್ರೆಸ್ನವರು: ಬಸವರಾಜ ಬೊಮ್ಮಾಯಿ
ತಮ್ಮ ಭ್ರಷ್ಟಾಚಾರ ಮುಚ್ಚಿಹಾಕಲು ಕಾಂಗ್ರೆಸ್ನವರು ತಾವು ಮಾಡುತ್ತಿರುವ ತಪ್ಪುಗಳು, ಲೋಪಗಳೆನ್ನೆಲ್ಲ ನಮ್ಮ ಮೇಲೆ ಹಾಕುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. | Read More
ಕೆಆರ್ಪುರ ಸಂತೆ ಮೈದಾನದಲ್ಲಿ ಮೂಲ ಸೌಲಭ್ಯಕಲ್ಪಿಸಲು ಕೋರಿ ಅರ್ಜಿ: ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್
ಬೆಂಗಳೂರಿನ ಕೆ.ಆರ್.ಪುರ ಸಂತೆ ಮೈದಾನದಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಕೋರಿ ಅರ್ಜಿ ಸಲ್ಲಿಸಲಾಗಿದ್ದು, ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಬಿಬಿಎಂಪಿಗೆ ನೋಟಿಸ್ ನೀಡಿದೆ. | Read More
ಮುಂದಿನ ಮಾರ್ಚ್ ವರೆಗೆ ಪ್ರತಿ ತಿಂಗಳು ರೂ. 2400 ಕೋಟಿ ರಾಜಸ್ವ ಸಂಗ್ರಹ ಗುರಿ ಸಾಧಿಸಲೇಬೇಕು: ಸಿಎಂ ಸೂಚನೆ
ಮುಂದಿನ ಮಾರ್ಚ್ವರೆಗೆ ಪ್ರತಿ ತಿಂಗಳು ರೂ.2400 ಕೋಟಿ ರಾಜಸ್ವ ಸಂಗ್ರಹ ಗುರಿ ಸಾಧಿಸಲೇಬೇಕು ಎಂದು ರಾಜಸ್ವ ಸಂಗ್ರಹಣೆ ಪರಿಶೀಲನಾ ಸಭೆಯಲ್ಲಿ ಸಿಎಂ ಸೂಚನೆ ನೀಡಿದರು. | Read More