ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಬೆಂಗಳೂರು:ಮಾಲೀಕನ ಮನೆಯಲ್ಲಿ ಚಿನ್ನಾಭರಣ ದೋಚಿ ರಾಬರಿ ಕಥೆ ಕಟ್ಟಿದ ಖತರ್ ನಾಕ್ ಮನೆೆಗೆಲಸದ ಮಹಿಳೆಯನ್ನ ಬಂಧಿಸಿರುವ ಸದಾಶಿವನಗರ ಠಾಣೆ ಪೊಲೀಸರು, 30 ಲಕ್ಷ ರೂ. ಮೌಲ್ಯದ 523 ಗ್ರಾಂ ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ.
ಬಳ್ಳಾರಿ ಮೂಲದ 34 ವರ್ಷದ ಶಾಂತಾ ಬಂಧಿತ ಮಹಿಳೆ. ಕಳೆದ ಮೂರು ವರ್ಷಗಳಿಂದ ಮಾರುತಿ ಪ್ರಸನ್ನ ಎಂಬುವರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಗಂಡ ಮೃತಪಟ್ಟಿದ್ದ. ಮಾಲೀಕನ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಇರುವುದನ್ನ ಖಾತ್ರಿಪಡಿಸಿಕೊಂಡಿದ್ದಳು.
ಇದೇ ವೇಳೆ, ಮಾಲೀಕರ ಕುಟುಂಬ ವಿದೇಶಕ್ಕೆ ತೆರಳಿತ್ತು. ಇದೇ ಒಳ್ಳೆಯ ಸಮಯ ಎಂದು ಅರಿತು ಪೂರ್ವ ಸಂಚಿನಂತೆ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ವೈರ್ ಕಟ್ ಮಾಡಿ, ದರೋಡೆ ಮಾಡಲು ಬೇಕಾಗಿದ್ದ ಗ್ಯಾಸ್ ಲೈಟ್, ಸುತ್ತಿಗೆ ಸೇರಿದಂತೆ ಇನ್ನಿತರ ವಸ್ತುಗಳನ್ನ ಖರೀದಿಸಿದ್ದಳು. ಕಬೋರ್ಡ್ನಲ್ಲಿ ಬೀಗದ ಕೀಯನ್ನು ಗ್ಯಾಸ್ ಲೈಟ್ ಮೂಲಕ ಸುಟ್ಟು ಅಪರಿಚಿತರೇ ಮನೆಗೆ ನುಗ್ಗಿ ದರೋಡೆ ಮಾಡಿರುವ ಹಾಗೇ ಸೀನ್ ಕ್ರಿಯೇಟ್ ಮಾಡಿದ್ದರು. ಜನವರಿ 25 ರಂದು ರಾತ್ರಿ ಅಪರಿಚಿತರು ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದಾರೆ ಎಂದು ಮನೆ ಮಾಲೀಕರನ್ನು ನಂಬಿಸಿದ್ದಳು. ಇದರಂತೆ ಮಾಲೀಕರು ದೂರು ನೀಡಿದ ಮೇರೆಗೆ ಇನ್ಸ್ಪೆಕ್ಟರ್ ಗಿರೀಶ್ ನೇತೃತ್ವದ ತಂಡ ತನಿಖೆ ನಡೆಸಿದಾಗ ಅಪರಿಚಿತರು ಮನೆಗೆ ಬಂದು ರಾಬರಿ ಮಾಡದಿರುವುದನ್ನು ಖಚಿತಪಡಿಸಿಕೊಂಡಿದ್ದರು. ಬಳಿಕ ಮನೆ ಕೆಲಸದಾಕೆಯನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ಸತ್ಯ ಸಂಗತಿ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದಾಶಿವನಗರ ಠಾಣೆ ಪೊಲೀಸರಿಂದ ಚಿನ್ನಾಭರಣ ವಶ ಚಿನ್ನ ಕದ್ದು ಸಂಬಂಧಿಕರ ಮನೆಗೆ ಸಾಗಿಸಿದ್ದ ಮಹಿಳೆ:ಮೂರು ವರ್ಷಗಳಿಂದ ಮನೆ ಕೆಲಸ ಮಾಡುತ್ತಿದ್ದ ಶಾಂತಾ ಮನೆ ಮಾಲೀಕರ ಮನೆಯಲ್ಲಿರುವ ಎಲ್ಲ ವಸ್ತುಗಳ ಬಗ್ಗೆ ಅರಿತಿದ್ದಳು. ಕೊಂಚ ಪ್ರಮಾಣದಲ್ಲಿ ಚಿನ್ನ ದೋಚಿ ರಾಬರಿ ಕಥೆ ಕಟ್ಟಿದ್ದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ಭಾವಿಸಿದ್ದಳು. ಹೀಗಾಗಿ ದರೋಡೆಗೆ ಬೇಕಾದ ಎಲ್ಲ ವಸ್ತುಗಳನ್ನು ಖರೀದಿಸಿ ಒಂದು ವಾರದ ಹಿಂದೆ ಮನೆಯಲ್ಲಿದ್ದ 523 ಗ್ರಾಂ ಚಿನ್ನ ದೋಚಿ, ಅಪರಿಚಿತ ದರೋಡೆಕೋರರೇ ಮನೆಗೆ ನುಗ್ಗಿ ಕೃತ್ಯ ಎಸಗಿರುವುದಾಗಿ ಮಾಲೀಕರನ್ನ ನಂಬಿಸಿದ್ದಳು. ವಿಚಾರಣೆ ವೇಳೆ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡ ಆರೋಪಿತೆ ಸಂಬಂಧಿಕರ ಮನೆಯಲ್ಲಿ ಇಟ್ಟಿರುವ ಬಗ್ಗೆ ಹೇಳಿಕೆ ನೀಡಿದ ಮೇರೆಗೆ ಪೊಲೀಸರು, 30 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಪ್ರೀತಿಸಿ ಮದುವೆಯಾದ ಪತ್ನಿಯ ಸಾವಿಗೆ ಕಾರಣನಾದ ಪತಿಗೆ 6 ವರ್ಷ ಜೈಲು ಶಿಕ್ಷೆ