ಕರ್ನಾಟಕ

karnataka

ETV Bharat / state

ಲೋಕಸಮರದಲ್ಲಿ ನೋಟಾದ ಆಟ; ರಾಜ್ಯದಲ್ಲಿ ಚಲಾವಣೆಯಾದ ನೋಟಾದ ಮೇಲೊಂದು ನೋಟ! - Nota votes information

2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಮತಗಳಲ್ಲಿ ನೋಟಾ ಪ್ರಮಾಣವೇ ಹೆಚ್ಚಿದೆ. 2014ಕ್ಕೆ ಹೋಲಿಸಿದರೆ 2019ರಲ್ಲಿ ಚಲಾವಣೆಯಾದ ನೋಟಾ ಪ್ರಮಾಣ ಇಳಿಕೆ ಕಂಡಿತ್ತು.

Information about NOTA votes cast in the 2019 Lok Sabha elections in the state
Information about NOTA votes cast in the 2019 Lok Sabha elections in the state

By ETV Bharat Karnataka Team

Published : Mar 30, 2024, 2:24 PM IST

Updated : Mar 30, 2024, 3:41 PM IST

ಬೆಂಗಳೂರು: ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಿರುವ ಯಾವುದೇ ಅಭ್ಯರ್ಥಿಗೆ ಮತದಾರರು ಮತ ಹಾಕಲು ಇಷ್ಟವಿಲ್ಲದಿದ್ದರೆ 'ನೋಟಾ' (Non Of The Above) ಗೆ ಮತ ಹಾಕಲು ಚುನಾವಣಾ ಆಯೋಗ ಅವಕಾಶ ನೀಡಿದೆ. ಕಳೆದ ಬಾರಿಯ ಲೋಕಸಮರ ಚುನಾವಣೆಯಲ್ಲಿ ಕೆಲವು ರಾಜಕೀಯ ಪಕ್ಷಗಳನ್ನೂ ಹಿಮ್ಮೆಟ್ಟಿಸಿ 'ನೋಟಾ' ಮುಂದೆ ಸಾಗಿರುವುದು ಗಮನಿಸಬಹುದು. ರಾಜ್ಯಾದ್ಯಂತ ಮತದಾರರು ನೋಟಾಗೆ ಮತ ಹಾಕಿ ತಮ್ಮ ಅಸಮಾಧಾನ ಹೊರಹಾಕಿದ್ದರು. ಆ ನೋಟಾ ಆಟದ ಸ್ವಾರಸ್ಯಕರ ವರದಿ ಇಲ್ಲಿದೆ..

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಲಕ್ಷಾಂತರ ಮಂದಿ ನೋಟಾಗೆ ಮತ ಹಾಕಿದ್ದರು. ಚುನಾವಣಾ ಆಯೋಗ ನೀಡಿರುವ ಮಾಹಿತಿಯಂತೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ 2,69,763 ಮತದಾರರು ನೋಟಾ ಚಲಾಯಿಸಿದ್ದರು. ಅಂದರೆ ಒಟ್ಟು ಮತದಾನದ ಸುಮಾರು 0.69% ಮತದಾರರು ನೋಟಾದತ್ತ ನೋಟ ಬೀರಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಒಟ್ಟು ಸುಮಾರು 3,22,381 ಮತದಾರರು ನೋಟಾ ಆಯ್ಕೆ ಮಾಡಿದ್ದರು. ಅಂದರೆ ಒಟ್ಟು ಮತದಾನದ 0.9% ನೋಟಾ ಚಲಾವಣೆ ಆಗಿತ್ತು. ಕಳೆದ ಬಾರಿಗೆ ಹೋಲಿಸದರೆ ಈ ಬಾರಿಯ ಚುನಾವಣೆಯಲ್ಲಿ ನೋಟಾದ ಪ್ರಮಾಣ ಕಡಿಮೆಯಾಗಿತ್ತು. ಆದರೂ ಹಲವೆಡೆ ನೋಟಾ ಸೋಲು-ಗೆಲುವಿನಲ್ಲಿ ಪರೋಕ್ಷವಾಗಿ ತನ್ನ ಕೊಡುಗೆ ನೀಡಿದೆ. ಅದೇ ರೀತಿ ಲೋಕಸಮರದಲ್ಲೂ ರಾಜ್ಯದ ಜನರು ನೋಟಾವನ್ನು ಆಯ್ಕೆ ಮಾಡಿದ್ದಾರೆ.

ಲೋಕಸಮರದಲ್ಲಿ ನೋಟಾದ ಆಟ

ಲೋಕಸಮರದಲ್ಲಿ ನೋಟಾದ ಆಟ ಹೇಗಿತ್ತು?:2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಸುಮಾರು 2,50,810 ಲಕ್ಷ ಮತದಾರರು ನೋಟಾ ಹಾಕಿದ್ದರು. ಸರಾಸರಿ ಲೆಕ್ಕ ಹಾಕಿದರೆ ಪ್ರತಿ 28 ಲೋಕಸಭೆ ಕ್ಷೇತ್ರಗಳಲ್ಲಿ ಸುಮಾರು 8,957 ಮತದಾರರು ನೋಟಾ ಆಯ್ಕೆ ಮಾಡಿದ್ದರು. ಅನೇಕ ಕಡೆ ಪ್ರಮುಖ ರಾಜಕೀಯ ಪಕ್ಷಗಳಿಗಿಂತ ನೋಟಾವೇ ಮುಂದಿದೆ. ಪ್ರಮುಖವಾಗಿ ಎಎಪಿ ಅಭ್ಯರ್ಥಿಗಳು, ಬಿಎಸ್​​ಪಿ, ಎನ್​​ಸಿಪಿ ಪಕ್ಷಗಳ ಅಭ್ಯರ್ಥಿಗಳಿಗೆ ಬಿದ್ದಿರುವ ಒಟ್ಟು ಮತಗಳಲ್ಲಿ ನೋಟಾ ಪ್ರಮಾಣವೇ ಹೆಚ್ಚಿದೆ. ಕರ್ನಾಟಕದಲ್ಲಿ ಒಟ್ಟು ಮತ ಚಲಾವಣೆಯಾದ ಪೈಕಿ 0.71% ನೋಟಾ ಆಯ್ಕೆ ಮಾಡಿದ್ದಾರೆ ಎಂದು ಚುನಾವಣಾ ಆಯೋಗ ನೀಡಿರುವ ಅಂಕಿಅಂಶದಲ್ಲಿದೆ.

ಎರಡು ರಾಷ್ಟ್ರೀಯ ಪಕ್ಷಗಳ ಬಳಿಕ ರಾಜ್ಯದ ಜನರು ಅತಿ ಹೆಚ್ಚು ಆಯ್ಕೆ ಮಾಡಿರುವುದು ನೋಟಾವನ್ನು! ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಮತದಾರರು ಬಿಜೆಪಿ, ಅಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಂತರ ಅತಿ ಹೆಚ್ಚು ನೋಟಾ ಮೊರೆ ಹೋಗಿದ್ದರು. ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ 2019ರಲ್ಲಿ ಅತಿ ಹೆಚ್ಚು ಅಂದರೆ 16,017 ನೋಟಾ ಮತಗಳು ಚಲಾವಣೆಯಾಗಿದ್ದವು. ಅಂದರೆ ಉ.ಕನ್ನಡ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತದಲ್ಲಿ 1.39% ನೋಟಾಗೆ ಬಿದ್ದಿದ್ದವು. ಇತ್ತ ಬೀದರ್ ಲೋಕಸಭೆ ಕ್ಷೇತ್ರದಲ್ಲಿ ಅತಿ ಕಡಿಮೆ 1,948 ನೋಟಾ ಮತಗಳು ಚಲಾವಣೆಯಾಗಿದ್ದವು.

ಕ್ಷೇತ್ರವಾರು ನೋಟಾದ ಆಟ:ಚಿಕ್ಕೋಡಿ ಕ್ಷೇತ್ರದಲ್ಲಿ ಕಳೆದ ಲೋಕಸಮರದ ವೇಳೆ ಒಟ್ಟು 10,362 ನೋಟಾ ಚಲಾವಣೆ ಆಗಿತ್ತು. ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ 3,233 ನೋಟಾ ಬಿದ್ದಿದ್ದರೆ, ಬಾಗಲಕೋಟೆ ಕ್ಷೇತ್ರದಲ್ಲಿ 11,328 ನೋಟಾ ಚಲಾವಣೆಯಾಗಿತ್ತು. ಬಿಜಾಪುರ (ಎಸ್‌ಸಿ) ಕ್ಷೇತ್ರದಲ್ಲಿ 12,286, ಕಲಬುರಗಿ (ಎಸ್‌ಸಿ) ಕ್ಷೇತ್ರದಲ್ಲಿ 10,487, ರಾಯಚೂರು (ಎಸ್‌ಟಿ) ಕ್ಷೇತ್ರದಲ್ಲಿ 14,921, ಬೀದರ್ ಕ್ಷೇತ್ರದಲ್ಲಿ 1,948, ಕೊಪ್ಪಳ ಕ್ಷೇತ್ರದಲ್ಲಿ 10,813, ಬಳ್ಳಾರಿ (ಎಸ್‌ಟಿ) ಕ್ಷೇತ್ರದಲ್ಲಿ 9,024, ಹಾವೇರಿ ಕ್ಷೇತ್ರದಲ್ಲಿ 7,412, ಧಾರವಾಡ ಕ್ಷೇತ್ರದಲ್ಲಿ 3,512, ಉತ್ತರ ಕನ್ನಡ ಕ್ಷತ್ರದಲ್ಲಿ 16,017, ದಾವಣಗೆರೆ ಕ್ಷೇತ್ರದಲ್ಲಿ 3,098 ಮತ್ತು ಶಿವಮೊಗ್ಗ ಕ್ಷೇತ್ರದಲ್ಲಿ 6,868 ನೋಟಾ ಚಲಾವಣೆ ಆಗಿತ್ತು. ಉಡುಪಿ - ಚಿಕ್ಕಮಗಳೂರು ಕ್ಷೇತ್ರದಲ್ಲಿ 7,510 ನೋಟಾ ಚಲಾವಣೆ ಆಗಿತ್ತು. ಹಾಸನ ಕ್ಷೇತ್ರದಲ್ಲಿ 11,662, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 7,380, ಚಿತ್ರದುರ್ಗ (ಎಸ್‌ಸಿ) ಕ್ಷೇತ್ರದಲ್ಲಿ 4,368, ತುಮಕೂರು ಕ್ಷೇತ್ರದಲ್ಲಿ 10,295, ಮಂಡ್ಯ ಕ್ಷೇತ್ರದಲ್ಲಿ 3,526, ಮೈಸೂರು ಕ್ಷೇತ್ರದಲ್ಲಿ 5,346, ಚಾಮರಾಜನಗರ (ಎಸ್‌ಸಿ) ಕ್ಷೇತ್ರದಲ್ಲಿ 12,716, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 12,454, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 11,632, ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ 10,760, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 9,938, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 8,025, ಕೋಲಾರ (ಎಸ್‌ಸಿ) ಕ್ಷೇತ್ರದಲ್ಲಿ 13,889 ನೋಟಾ ಆಯ್ಕೆ ಮಾಡಿದ್ದರು.

ಕ್ಷೇತ್ರ ನೋಟಾ ಮತ
ಚಿಕ್ಕೋಡಿ 10,362
ಬೆಳಗಾವಿ 3,233
ಬಾಗಲಕೋಟೆ 11,328
ಬಿಜಾಪುರ (ಎಸ್‌ಸಿ) 12,286
ಕಲಬುರಗಿ (ಎಸ್‌ಸಿ) 10,487
ರಾಯಚೂರು (ಎಸ್‌ಟಿ) 14,921
ಬೀದರ್ 1,948
ಕೊಪ್ಪಳ 10,813
ಬಳ್ಳಾರಿ (ಎಸ್‌ಟಿ) 9,024
ಹಾವೇರಿ 7,412
ಧಾರವಾಡ 3,512
ಉತ್ತರ ಕನ್ನಡ 16,017
ದಾವಣಗೆರೆ 3,098
ಶಿವಮೊಗ್ಗ 6,868
ಉಡುಪಿ - ಚಿಕ್ಕಮಗಳೂರು 7,510
ಹಾಸನ 11,662
ದಕ್ಷಿಣ ಕನ್ನಡ 7,380
ಚಿತ್ರದುರ್ಗ (ಎಸ್‌ಸಿ) 4,368
ತುಮಕೂರು 10,295
ಮಂಡ್ಯ 3,526
ಮೈಸೂರು 5,346
ಚಾಮರಾಜನಗರ (ಎಸ್‌ಸಿ) 12,716
ಬೆಂಗಳೂರು ಗ್ರಾಮಾಂತರ 12,454
ಬೆಂಗಳೂರು ಉತ್ತರ 11,632
ಬೆಂಗಳೂರು ಕೇಂದ್ರ 10,760
ಬೆಂಗಳೂರು ದಕ್ಷಿಣ 9,938
ಚಿಕ್ಕಬಳ್ಳಾಪುರ 8,025
ಕೋಲಾರ (ಎಸ್‌ಸಿ) 13,889

2014 ಲೋಕಸಮರದಲ್ಲಿ 2,57,881 ನೋಟಾ:2014ರಲ್ಲಿ ನಡೆದ ಲೋಕಸಭೆ ಚುನಾವಣೆ ವೇಳೆ ರಾಜ್ಯದ 28 ಕ್ಷೇತ್ರಗಳಲ್ಲಿ ಒಟ್ಟು 2,57,881 ನೋಟಾ ಮತಗಳು ಚಲಾವಣೆ ಆಗಿದ್ದವು. ಒಟ್ಟು ಮತದಾನ ಮುಂದೆ 0.83% ನೋಟಾ ಚಲಾವಣೆ ಆಗಿತ್ತು. ಅಂದು ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಗರಿಷ್ಠ 16,227 ನೋಟಾ ಚಲಾವಣೆಯಾಗಿದ್ದರೆ, ಬೀದರ್​​ನಲ್ಲಿ ಕನಿಷ್ಠ 2,817 ನೋಟಾ ಚಲಾವಣೆಯಾಗಿದ್ದವು.‌ 2014ಕ್ಕೆ ಹೋಲಿಸಿದರೆ 2019ರಲ್ಲಿ ಚಲಾವಣೆಯಾದ ನೋಟಾ ಪ್ರಮಾಣ ಇಳಿಕೆ ಕಂಡುಬಂದಿತ್ತು.

ದೇಶದಲ್ಲಿ 2019ರ ಲೋಕಸಭೆ ಚುನಾವಣೆಯಲ್ಲಿ ಒಟ್ಟು ಚಲಾವಣೆಯಾದ ಮತಗಳಲ್ಲಿ 1.04% ನೋಟಾ ಆಗಿದೆ. ಅದೇ 2014ರಲ್ಲಿ ದೇಶದಲ್ಲಿ ಚಲಾವಣೆಯಾದ ಒಟ್ಟು ಮತಗಳ ಪೈಕಿ 1.08% ನೋಟಾ ಮತಗಳು ಚಲಾವಣೆಯಾಗಿದ್ದವು.

ನೋಟಾ ಅರ್ಥ:None Of The Above ಎನ್ನುವುದರ ಸಂಕ್ಷಿಪ್ತ ರೂಪವೇ 'ನೋಟಾ'. ಈ ಮೇಲಿನ ಯಾರೂ ಅಲ್ಲ ಎನ್ನುವುದು ಇದರ ಅರ್ಥ. ಸ್ಪರ್ಧೆ ನಡೆಸಿರುವ ಯಾವುದೇ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಇಷ್ಟವಿಲ್ಲದವರು 'ನೋಟಾ' ಆಯ್ಕೆ ಮಾಡಿಕೊಳ್ಳಬಹುದು. ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳ ಹೆಸರಿನ ಬಳಿಕ ಕೊನೆ ಸಾಲಿನಲ್ಲಿ 'ನೋಟಾ' ಆಯ್ಕೆ ಇರಲಿದೆ. ಅಭ್ಯರ್ಥಿಯ ಬಗ್ಗೆ ಒಲವು ಇರದ ಮತದಾರರು ಈ 'ನೋಟಾ' ಗುಂಡಿ ಒತ್ತಬಹುದು. ಇವಿಎಂನಲ್ಲಿ ಇರುವ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸಲು ಮತದಾರರಿಗೆ ನೀಡುವ ಅವಕಾಶವೇ ಈ 'ನೋಟಾ'. ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಚುನಾವಣಾ ಆಯೋಗ ನೋಟಾವನ್ನು ಪರಿಚಯಿಸಿತ್ತು. 2013ರಲ್ಲಿ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಈ ಆಯ್ಕೆಯನ್ನು ಚುನಾವಣಾ ಆಯೋಗ ಪರಿಚಯಿಸಿತ್ತು. 2014ರ ಲೋಕಸಭೆ ಚುನಾವಣೆಯಲ್ಲೂ ಈ ನೋಟಾ ಆಯ್ಕೆ ಇತ್ತು.

ನೋಟಾ ಆಟ: 2018 ಚುನಾವಣೆಯಲ್ಲಿನ ನೋಟಾ ಮೇಲೊಂದು ನೋಟ; ಸೋಲು ಗೆಲುವಿನಲ್ಲಿ ನೋಟಾ ಆಟ!

ಈ ಬಾರಿಯೂ ವಿಧಾನಸಭೆ ಚುನಾವಣೆಯಲ್ಲಿ ನೋಟಾದ ಆಟ: 10 ಕ್ಷೇತ್ರಗಳಲ್ಲಿ ಸೋಲಿನ ಅಂತರಕ್ಕಿಂತ ನೋಟಾ ವೋಟ್​ ಹೆಚ್ಚು!

Last Updated : Mar 30, 2024, 3:41 PM IST

ABOUT THE AUTHOR

...view details