ಕರ್ನಾಟಕ

karnataka

ETV Bharat / state

ಭಾರತದಲ್ಲೇ ಮೊದಲ 3ಡಿ ಪ್ರಿಂಟಿಂಗ್‌ ಲ್ಯಾಬ್‌ ಬೆಂಗಳೂರಿನ ಸ್ಪರ್ಶ್​ ಆಸ್ಪತ್ರೆಯಲ್ಲಿ ಆರಂಭ

ದೇಶದಲ್ಲೇ ಮೊದಲ 3ಡಿ ಪ್ರಿಂಟಿಂಗ್‌ ಲ್ಯಾಬ್‌ ಬೆಂಗಳೂರಿನ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭಗೊಂಡಿದೆ. ಇದು ಶಸ್ತ್ರಚಿಕಿತ್ಸೆಯ ಸಮಯ ಕಡಿಮೆ ಮಾಡಲು ಮತ್ತು ಅಪಾಯಗಳನ್ನು ಕಡಿಮೆಗೊಳಿಸಲು ಅನುವು ಮಾಡಿಕೊಡಲಿದೆ.

By ETV Bharat Karnataka Team

Published : 5 hours ago

3D printing
3ಡಿ ಪ್ರಿಂಟಿಂಗ್‌ ಲ್ಯಾಬ್‌ (ETV Bharat)

ಬೆಂಗಳೂರು:ಭಾರತದ ಮೊದಲ ಸುಧಾರಿತ 3ಡಿ ಪ್ರಿಂಟಿಂಗ್‌ ಲ್ಯಾಬ್‌ ಅನ್ನು ಇನ್‌ಫೆಂಟ್ರಿ ರಸ್ತೆಯ ಸ್ಪರ್ಶ್‌ ಹಾಸ್ಪಿಟಲ್‌ನಲ್ಲಿ ಸ್ಥಾಪಿಸಲಾಗಿದೆ. ಈ ಪ್ರಯೋಗಾಲಯವು ಅತ್ಯಾಧುನಿಕ 3ಡಿ ಮುದ್ರಣ ತಂತ್ರಜ್ಞಾನವನ್ನು ಹೊಂದಿದೆ ಎಂದು ಸ್ಪರ್ಶ್‌ ಆಸ್ಪತ್ರೆಯ ಅಧ್ಯಕ್ಷ ಡಾ.ಶರಣ್‌ ಶಿವರಾಜ್‌ ಪಾಟೀಲ್‌ ಹೇಳಿದರು.

ಗುರುವಾರ ಪ್ರಯೋಗಾಲಯವನ್ನು ಉದ್ಘಾಟಿಸಿದ ಮಾತನಾಡಿದ ಅವರು, ಇದರಿಂದ ಒಂದೇ ಸೂರಿನಡಿ ಸ್ಕ್ಯಾ‌ನಿಂಗ್‌ನಿಂದ ಹಿಡಿದು ಅಗತ್ಯವಿರುವ ಎಲ್ಲ ಪೂರಕ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇಲ್ಲಿ ಸಮಗ್ರ ಪರಿಹಾರಗಳನ್ನು ನೀಡುವ ಮೂಲಕ ಮೂಳೆಗೆ ಸಂಬಂಧಿಸಿದ ಚಿಕಿತ್ಸೆಗಳು ಮತ್ತು ವೈಯಕ್ತಿಕ ಆರೈಕೆಯಲ್ಲಿ ಕ್ರಾಂತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸ್ಪರ್ಶ್​ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ (ETV Bharat)

ಅತ್ಯಾಧುನಿಕ ರೊಬೊಟಿಕ್ಸ್‌ ವ್ಯವಸ್ಥೆಗಳನ್ನು ಅಳವಡಿಸಿಕೊಂಡು ಆರೋಗ್ಯ ರಕ್ಷಣೆಯಲ್ಲಿ ನವೀನ ವಿಧಾನಗಳನ್ನು ಬಳಸಿ ಅದನ್ನು ಜಾರಿಗೆ ತಂದ ಮೊದಲ ಆಸ್ಪತ್ರೆ ಸ್ಪರ್ಶ್‌ ಆಗಿದೆ. ಸ್ಪರ್ಶ್ ಯಾವಾಗಲೂ ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿದೆ ಮತ್ತು ಮೂಳೆ ಚಿಕಿತ್ಸೆಯಲ್ಲಿ ಜಾಗತಿಕವಾಗಿ ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಅದನ್ನು ಜಾರಿಗೆ ತರಲು ಎಂದಿಗೂ ಬದ್ಧವಾಗಿದೆ. ಈಗ ಭಾರತದಲ್ಲೇ ಮೊದಲ ಬಾರಿಗೆ ಸುಧಾರಿತ 3ಡಿ ಪ್ರಿಂಟಿಂಗ್‌ ಲ್ಯಾಬ್‌ ನೊಂದಿಗೆ ಇನ್ನೊಂದು ದೊಡ್ಡ ಹೆಜ್ಜೆ ಇಟ್ಟಿದ್ದೇವೆ. ಈ ಕ್ರಮವು ನಮ್ಮ ತಂತ್ರಜ್ಞಾನ, ಪರಿಣತಿ ಮತ್ತು ಅನುಭವವನ್ನು ಇನ್ನಷ್ಟು ಸಬಲಗೊಳಿಸಲಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಅಧಿಕ ಕೊಲೆಸ್ಟ್ರಾಲ್ ಬೆಣ್ಣೆಯಂತೆ ಕರಗಿಸೋದು ಹೇಗೆ ಗೊತ್ತೆ? ನಿತ್ಯ ಈ ಆಹಾರಗಳನ್ನು ಸೇವಿಸಿದರೆ ಚಮತ್ಕಾರ!

ಆರೋಗ್ಯ ಸಮಸ್ಯೆಗಳಿಗೆ 3ಡಿ ಪ್ರಿಂಟಿಂಗ್‌ ಲ್ಯಾಬ್‌ ನಿಖರ ಫಲಿತಾಂಶವನ್ನು ನೀಡುತ್ತದೆ. ರೋಗಿಯ ಆರೈಕೆಯಲ್ಲಿ ಈಗಿರುವ ವಿಧಾನಗಳಲ್ಲಿಯೇ ಹೊಸ ಹೆಜ್ಜೆ ಇದಾಗಿದೆ. ಇದರಿಂದ ರೋಗಿಗಳು ಕ್ಷಿಪ್ರವಾಗಿ ಚೇತರಿಸಿಕೊಳ್ಳುತ್ತಾರೆ. ಆರೋಗ್ಯ ರಕ್ಷಣೆಯಲ್ಲಿ ಇದೊಂದು ಅಪೂರ್ವ ಉಪಕ್ರಮವಾಗಿದೆ. ಶಸ್ತ್ರಚಿಕಿತ್ಸೆಯ ಪೂರ್ವ ಯೋಜನೆಯನ್ನು ಉತ್ತಮಗೊಳಿಸುತ್ತದೆ. ಶಸ್ತ್ರಚಿಕಿತ್ಸೆಯ ಸಮಯವನ್ನು ಕಡಿಮೆ ಮಾಡಲು ಮತ್ತು ಅಪಾಯಗಳನ್ನು ಕಡಿಮೆಗೊಳಿಸಲು ಅನುವು ಮಾಡಿಕೊಡುತ್ತದೆ. ಸಾಟಿಯಿಲ್ಲದ ಕಲಿಕೆಯ ಅವಕಾಶಗಳನ್ನು ಈ 3ಡಿ ಪ್ರಿಂಟಿಂಗ್ ಲ್ಯಾಬ್ ಒದಗಿಸಲಿದೆ ಎಂದು ಡಾ.ಶರಣ್‌ ಶಿವರಾಜ್‌ ಪಾಟೀಲ್‌ ಹೇಳಿದರು.

ಇದನ್ನೂ ಓದಿ:ಮಹಿಳೆಯ ಹೊಟ್ಟೆಯಲ್ಲಿತ್ತು 3 ಕೆ.ಜಿ ತೂಕದ ಕೂದಲು: ಆಕೆಗಿತ್ತು ಕೇಶ ತಿನ್ನುವ ಕೆಟ್ಟ ಅಭ್ಯಾಸ!

ABOUT THE AUTHOR

...view details