ಕರ್ನಾಟಕ

karnataka

ಸಕ್ಕರೆ ನಾಡು ಮಂಡ್ಯದಲ್ಲಿ ಮಳೆಗಾಗಿ ಕತ್ತೆಗಳ ಮದುವೆ:ಬಡಗುಡಮ್ಮ ದೇವಿಗೆ ವಿಶೇಷ ಪೂಜೆ - Donkey Marriage

By ETV Bharat Karnataka Team

Published : May 17, 2024, 4:27 PM IST

ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಇಲ್ಲಿನ ಜನರು ಮಳೆಗಾಗಿ ಕತ್ತೆಗಳಿಗೆ ಮದುವೆ ಮಾಡಿಸಿ ಬಡಗುಡಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

SPECIAL WORSHIP  MANDYA  NO RAIN  MARRYING A DONKEY FOR RAIN
ಸಕ್ಕರೆ ನಾಡಲ್ಲಿ ಮಳೆಗಾಗಿ ಕತ್ತೆ ಮದುವೆ, ವಿಶೇಷ ಪೂಜೆ ಸಲ್ಲಿಸಿದ ಜನರು (ಕೃಪೆ: ETV Bharat)

ಸಕ್ಕರೆ ನಾಡಲ್ಲಿ ಮಳೆಗಾಗಿ ಕತ್ತೆ ಮದುವೆ, ವಿಶೇಷ ಪೂಜೆ ಸಲ್ಲಿಸಿದ ಜನರು (ಕೃಪೆ: ETV Bharat)

ಮಂಡ್ಯ: ನಾಡಿನ ವ್ಯಾಪ್ತಿಯಲ್ಲಿ ಅಬ್ಬರದ ಮಳೆಯಾಗುತ್ತಿದ್ದು, ಬರದ ನಾಡು ನಾಗಮಂಗಲಕ್ಕೆ ಮಳೆಯ ನಿರೀಕ್ಷೆ ಮರೀಚಿಕೆಯಾಗಿ ಉಳಿದಿದೆ. ನಾಗಮಂಗಲ ಪಟ್ಟಣದ ಜನತೆ ಮಳೆಗಾಗಿ ಪರಿತಪಿಸುತ್ತಿದ್ದು, ಎಲ್ಲ ಸಮುದಾಯಗಳಿಂದ ಇಂದು ಪಟ್ಟಣದ ಮೇಗಲಕೇರಿ ಬಡಗುಡಮ್ಮ ದೇವಾಲಯದ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶುಭ ಲಗ್ನದಲ್ಲಿ ಕತ್ತೆಗಳಿಗೆ ಮದುವೆ ಮಾಡಿಸಿದರು. ಈ ಮೂಲಕ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮೇಗಲಕೆರಿ ಬಡಗುಡುಮ್ಮ ದೇವಾಲಯದಲ್ಲಿ ಬ್ರಾಹ್ಮಣ ಸಮುದಾಯದವರು ವಿಶೇಷ ಪೂಜೆಯನ್ನು ಸಲ್ಲಿಸಿ ಶುಭ ಲಗ್ನದಲ್ಲಿ ಕತ್ತೆಗಳಿಗೆ ಮದುವೆ ಮಾಡಿಸಿದರು. ಮಳೆರಾಯನನ್ನು ಪ್ರತಿಷ್ಠಾಪನೆ ಮಾಡಿ ಹಿರಿಯ ನಾಗರಿಕ ರಾಮಕೃಷ್ಣ ಅವರ ಮೇಲೆ ಮಳೆರಾಯನನ್ನು ಕುಳ್ಳರಿಸಿ, ಪಟ್ಟಣದ ಪ್ರಮುಖ ಬೀದಿಯ ಪ್ರತಿ ಮನೆಗೆ ಹೋಗಿ ಮಳೆರಾಯನ ಪೂಜೆ ಸಲ್ಲಿಸಿ ಮಳೆಗಾಗಿ ಜೈಕಾರ ಕೂಗಿದರು.

ಸೌಮ್ಯಕೇಶವಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾದ ತೀರು ನಾರಾಯಣ್ ಮಾತನಾಡಿ, ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಮಳೆಯೇ ಬರದಂತಾಗಿದೆ. ಆದ್ದರಿಂದ ದೇವರಲ್ಲಿ ಪ್ರಾರ್ಥಿಸಿಕೊಂಡು ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದರು.

ಗ್ರಾಮದ ಮುಖಂಡ ರಂಗಸ್ವಾಮಿ ಮಾತನಾಡಿ, ನಾಡಿನ ಎಲ್ಲೆಡೆ ಮಳೆ ಹಾಗುತ್ತಿದ್ದು, ಪುರಸಭೆ ವ್ಯಾಪ್ತಿಯಲ್ಲಿ ಮಳೆಯ ಕೊರತೆ ಇದೆ. ಇದರಿಂದ ರೈತರು ಕಂಗಲಾಗಿದ್ದಾರೆ. ಆದ್ದರಿಂದ ಇಂದು ವಿಶೇಷ ಪೂಜೆಯನ್ನು ಸಲ್ಲಿಸಿ ಮಳೆರಾಯನನ್ನು ಪ್ರಾರ್ಥಿಸಿಕೊಂಡಿದ್ದೇವೆ ಎಂದರು.

ಓದಿ:ಮಾನ್ಸೂನ್‌ಗೂ ಮುನ್ನ ಸಿಡಿಲು ಬಡಿದು 12 ಸಾವು; ಹಲವು ಕಡೆ ಅಪಾರ ಹಾನಿ - LIGHTNING KILLS 12

ABOUT THE AUTHOR

...view details