ಹುಬ್ಬಳ್ಳಿ:ಹು-ಧಾ ಅವಳಿ ನಗರದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಖಾಕಿ ಪಡೆ ವಿಶೇಷ ಕಾರ್ಯಾಚರಣೆಗಿಳಿದಿದೆ. ಕಳೆದ ರಾತ್ರಿ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಸ್ವತಃ ಬೈಕ್ ಹತ್ತಿ ಫೀಲ್ಡ್ಗಿಳಿದು ಹುಬ್ಬಳ್ಳಿ ನಗರದ ವಿವಿಧೆಡೆ ಪರಿಶೀಲನೆ ನಡೆಸಿದರು.
ಈ ವೇಳೆ ಪೊಲೀಸರು ಮದ್ಯಪಾನ ಮಾಡಿ ಪುಂಡಾಟಿಕೆ ಮಾಡುವ, ಯಾವುದೇ ದಾಖಲೆಗಳಿಲ್ಲದೆ ಬೈಕ್ ಚಲಾಯಿಸುವ ಯುವಕರಿಗೆ ಬಿಸಿಮುಟ್ಟಿಸಿದರು. ಅನುಮಾನಾಸ್ಪದ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದರು. ಕೆಲವು ಬೈಕ್, ಕಾರುಗಳನ್ನು ಸೀಜ್ ಮಾಡಿದರು.