ಕರ್ನಾಟಕ

karnataka

ETV Bharat / state

ಪ್ರತಿ ತಿಂಗಳ 3ನೇ ಶನಿವಾರ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಕುಂದುಕೊರತೆ ಸಭೆ

ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಪ್ರತಿ ತಿಂಗಳ 3ನೇ ಶನಿವಾರದಂದು ಕುಂದುಕೊರತೆ ಸಭೆ ನಡೆಯಲಿದೆ.

meeting
ವಿಧಾನಸೌಧ (ETV Bharat)

By ETV Bharat Karnataka Team

Published : Nov 10, 2024, 10:33 PM IST

ಬೆಂಗಳೂರು:ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕುಂದು ಕೊರತೆಗಳ ಬಗ್ಗೆ ಚರ್ಚಿಸಲು ಪ್ರತಿ ತಿಂಗಳ ಮೂರನೇ ಶನಿವಾರದಂದು ಬೆಂಗಳೂರಿನಲ್ಲಿರುವ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಅಪರಾಹ್ನ ಸಭೆ ನಡೆಸಲಾಗುವುದು.

ಈ ಸಂಬಂಧ ಪ್ರಕಟಣೆ ಹೊರಡಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಕಳೆದ ತಿಂಗಳು 10ರಂದು ಬೆಂಗಳೂರಿನಲ್ಲಿ ನಡೆದ ಗ್ರಾಮ ಪಂಚಾಯತಿ ನೌಕರರ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ವೃಂದದ ಸಂಘಗಳ ಬೇಡಿಕೆಯಂತೆ ನಿಗದಿತವಾಗಿ ಪ್ರತಿ ತಿಂಗಳು ಕುಂದು ಕೊರತೆ ಸಭೆಯನ್ನು ನಡೆಸಲು ಕ್ರಮ ಕೈಗೊಳ್ಳುವುದಾಗಿ ಸಚಿವ ಪ್ರಿಯಾಂಕ್​ ಖರ್ಗೆ ಭರವಸೆ ನೀಡಿದ್ದರು.

ಅದರಂತೆ ಪ್ರತಿ ಮಾಹೆಯ ಮೂರನೇ ಶನಿವಾರದಂದು ಅಪರಾಹ್ನ 3 ಗಂಟೆಗೆ ಆಯುಕ್ತರು, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಕುಂದುಕೊರತೆ ಸಭೆ ಆಯೋಜಿಸಲು ನಿರ್ಧರಿಸಲಾಗಿದೆ. ನೌಕರರು ಸಭೆಗೆ ಹಾಜರಾಗಿ ತಮ್ಮ ಆಹವಾಲುಗಳ ಕುರಿತು ಚರ್ಚಿಸಬಹುದು ಎಂದು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಾದ ಡಾ.ಅರುಂಧತಿ ಚಂದ್ರಶೇಖರ್ ತಿಳಿಸಿದ್ದಾರೆ.

ಇದನ್ನೂ ಓದಿ:ವೆಂಕಟಪ್ಪ ಆರ್ಟ್ ಗ್ಯಾಲರಿ ನವೀಕರಣ: ಮುಂದಿನ ತಿಂಗಳು ಹೊಸ ರೂಪದಲ್ಲಿ ಕಾರ್ಯಾರಂಭ

ABOUT THE AUTHOR

...view details