ಮಂಗಳೂರು: ಲಾರಿ ಹರಿದು ಬಾಲಕಿ ಮೃತಪಟ್ಟ ಘಟನೆ ಸುರತ್ಕಲ್ ಸಮೀಪದ ಮುಕ್ಕ ಹೆದ್ದಾರಿಯಲ್ಲಿ ಇಂದು ನಡೆದಿದೆ. ಮುಕ್ಕ ಮಿತ್ರಪಟ್ಟದ ನಿವಾಸಿ ಮಾನ್ವಿ (12) ಮೃತಪಟ್ಟ ಬಾಲಕಿ.
ಆಗಿದ್ದೇನು?: ಲಾರಿ ಸ್ಕೂಟರ್ಗೆ ಡಿಕ್ಕಿಯಾಗಿದೆ. ಸ್ಕೂಟರ್ ತಾಗಿ ರಸ್ತೆಬದಿ ನಡೆದು ಹೋಗುತ್ತಿದ್ದ ಬಾಲಕಿ ಮಾನ್ವಿ ಹಾಗೂ ಆಕೆಯ ತಂದೆ ಯಶು ಕುಮಾರ್ ರಸ್ತೆಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಲಾರಿ ಬಾಲಕಿಯ ಮೈಮೇಲೆ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ತಂದೆ ಇನ್ನೊಂದು ಬದಿಗೆ ಬಿದ್ದುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.