ಬೆಂಗಳೂರು:ಪ್ರಿ-ಸ್ಕೂಲ್ ಮೂರನೇ ಮಹಡಿಯಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ 4 ವರ್ಷದ ಹೆಣ್ಣು ಮಗು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ಈ ಪುಟಾಣಿ 3 ದಿನಗಳ ಕಾಲ ಜೀವನ್ಮರಣದ ಹೋರಾಟ ನಡೆಸಿದೆ.
ಕಲ್ಯಾಣನಗರದ ಚೆಳ್ಳಿಕೆರೆಯಲ್ಲಿರುವ ಖಾಸಗಿ ಪ್ರಿ-ಸ್ಕೂಲ್ನಲ್ಲಿ ಕಲಿಯುತ್ತಿದ್ದ ಮಗು ಜನವರಿ 22ರ ಮಧ್ಯಾಹ್ನ ಶಾಲೆಯ ಮೂರನೇ ಮಹಡಿ ಮೇಲೆ ಆಡುತ್ತಿದ್ದಾಗ ಬಿದ್ದು ತಲೆಗೆ ತೀವ್ರ ಗಾಯವಾಗಿತ್ತು. ಕೂಡಲೇ ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪುಟ್ಟ ಮಕ್ಕಳಿರುವ ಶಾಲೆಯನ್ನು ಮೂರನೇ ಮಹಡಿಯಲ್ಲಿ ನಡೆಸುತ್ತಿದ್ದುದರ ಬಗ್ಗೆ ಹಾಗೂ ಮಕ್ಕಳು ಮಹಡಿಯಿಂದ ತಡೆ ಗೋಡೆ ಹತ್ತಿ ಹೊರಗೆ ಬಿದ್ದರೂ ಗಮನಿಸದೇ ಇರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ಬಳಿಕ ಪೋಷಕರಿಗೆ ಕರೆ ಮಾಡಿದ್ದ ಶಾಲೆಯವರು ನಿಜವಾದ ಕಾರಣವನ್ನು ಬಚ್ಚಿಟ್ಟು ಸುಳ್ಳು ಹೇಳಿರುವ ಆರೋಪ ಕೇಳಿ ಬಂದಿದೆ. ನಿರ್ಲಕ್ಷ್ಯತನ ವಹಿಸಿದ್ದ ಶಾಲೆಯ ವಿರುದ್ಧ ಹೆಣ್ಣೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ:ಬಾಗಲಕೋಟೆ: ಕಬ್ಬು ತುಂಬಿದ ಟ್ರ್ಯಾಕ್ಟರ್ಗೆ ಕಾರು ಡಿಕ್ಕಿ, ನಾಲ್ವರು ಸಾವು