ಕರ್ನಾಟಕ

karnataka

ETV Bharat / state

ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್​ ಕುಮಾರ್​ಗೆ ಗ್ಯಾಸ್ ಸಿಲಿಂಡರ್ ಗುರುತು: ಬೆಣ್ಣೆನಗರಿಯಲ್ಲಿ 30 ಅಭ್ಯರ್ಥಿಗಳು ಫೈನಲ್​ - GB Vinay Kumar

ಕಾಂಗ್ರೆಸ್​ ಬಂಡಾಯ ಅಭ್ಯರ್ಥಿ ಜಿ.ಬಿ. ವಿನಯ್​​​ ಕುಮಾರ್​​​ ಅವರು ಸೋಮವಾರ ನಾಮಪತ್ರ ಹಿಂಪಡೆಯದೇ ಇದ್ದುದರಿಂದ, ಚುನಾವಣಾ ಅಧಿಕಾರಿಗಳೇ ಅವರಿಗೆ ಗ್ಯಾಸ್​ ಸಿಲಿಂಡರ್​ ಚಿಹ್ನೆ ನೀಡಿದೆ.

ವಿನಯ್​ ಕುಮಾರ್​ಗೆ ಗ್ಯಾಸ್ ಸಿಲಿಂಡರ್ ಗುರುತು
ವಿನಯ್​ ಕುಮಾರ್​ಗೆ ಗ್ಯಾಸ್ ಸಿಲಿಂಡರ್ ಗುರುತು

By ETV Bharat Karnataka Team

Published : Apr 23, 2024, 7:15 AM IST

ದಾವಣಗೆರೆ: ಕಾಂಗ್ರೆಸ್​​ ಬಂಡಾಯ ಅಭ್ಯರ್ಥಿ ಜಿ.ಬಿ. ವಿನಯ್​​ ಕುಮಾರ್​​ ಅವರಿಗೆ ಚುನಾವಣಾ ಆಯೋಗದಿಂದ ಗ್ಯಾಸ್ ಸಿಲಿಂಡರ್​​ ಚಿಹ್ನೆಯನ್ನು ಕೊಡಲಾಗಿದೆ. ಸೋಮವಾರ ನಾಮಪತ್ರ ವಾಪಸ್​ ಪಡೆಯಲು ಕೊನೆ ದಿನ ಆಗಿದ್ದು, ವಿನಯ್ ಕುಮಾರ್ ಅವರು ನಾಮಪತ್ರ ಮಾತ್ರ ಹಿಂಪಡೆಯದ ಕಾರಣ, ಜಿಲ್ಲಾ ಚುನಾವಣ ಅಧಿಕಾರಿಗಳಾದ ಡಾ. ವೆಂಕಟೇಶ್ ಎಂ.ವಿ ಗ್ಯಾಸ್ ಸಿಲಿಂಡರ್ ಇರುವ ಚಿಹ್ನೆಯನ್ನು ಅವರಿಗೆ ನೀಡಿದ್ದಾರೆ.

ವಿನಯ್​ ಕುಮಾರ್​ಗೆ ಗ್ಯಾಸ್ ಸಿಲಿಂಡರ್ ಗುರುತು

ಜಿ.ಬಿ. ವಿನಯ್​​ ಕುಮಾರ್ ಫೋಟೋ ಸಮೇತ ಗ್ಯಾಸ್ ಸಿಲಿಂಡರ್ ಇರುವ ಚಿಹ್ನೆಯನ್ನು ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದಾರೆ. ಗ್ಯಾಸ್ ಸಿಲಿಂಡರ್ ಇರುವ ಗುರುತಿಗೆ ಮತ ಹಾಕಿ ಎಂದು ಈಗಾಗಲೇ ಕರಪತ್ರಗಳನ್ನು ಹಂಚಲಾಗುತ್ತಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಅಂತಿಮ ಕಣದಲ್ಲಿ 30 ಅಭ್ಯರ್ಥಿಗಳು: ಲೋಕಸಭಾ ಚುನಾವಣೆಯ ಅಂತಿಮ ಕಣದಲ್ಲಿ 30 ಅಭ್ಯರ್ಥಿಗಳಿದ್ದಾರೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ. ಲೋಕಸಭಾ ಚುನಾವಣೆಗೆ ಸಲ್ಲಿಸಿದ ನಾಮಪತ್ರಗಳನ್ನು 3 ಅಭ್ಯರ್ಥಿಗಳು ವಾಪಸು ಪಡೆದಿದ್ದಾರೆ. ಚುನಾವಣೆಯ ಅಂತಿಮ ಕಣದಲ್ಲಿ 30 ಅಭ್ಯರ್ಥಿಗಳಿದ್ದಾರೆ. ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಎ.19 ಕೊನೆಯ ದಿನವಾಗಿತ್ತು, ಒಟ್ಟು 40 ಅಭ್ಯರ್ಥಿಗಳಿಂದ 54 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಏ.20 ರಂದು ನಡೆದ ನಾಮಪತ್ರ ಪರಿಶೀಲನೆಯಲ್ಲಿ 7 ಅಭ್ಯರ್ಥಿಗಳ ನಾಮಪತ್ರ ತಿರಸ್ಕ್ರತವಾಗಿ 33 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ದವಾಗಿದ್ದವು.

ಏ.22 ರ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು. ಏ.22 ರಂದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಇರ್ಫಾನ್ ಮುಲ್ಲಾ, ಅಲ್ಲಾಭಕಾಷ್ ಬಿ ಹಾಗೂ ಕೆ.ಜಿ ಅಜ್ಜಪ್ಪ ಸೇರಿ 3 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸ್ ಪಡೆದಿದ್ದಾರೆ. ಚುನಾವಣಾ ಅಂತಿಮ ಕಣದಲ್ಲಿ ಎಲ್ಲ ಪಕ್ಷ, ಪಕ್ಷೇತರರು ಸೇರಿದಂತೆ ಕಣದಲ್ಲಿ 30 ಅಭ್ಯರ್ಥಿಗಳು ಉಳಿದಿದ್ದಾರೆ.

ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು:ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ತಿಪ್ಪೇಸ್ವಾಮಿ ಎ.ಕೆ., ಭಾರತೀಯ ಕಾಂಗ್ರೆಸ್ ಪಕ್ಷದ ಡಾ. ಪ್ರಭಾ ಮಲ್ಲಿಕಾರ್ಜುನ್, ಉತ್ತಮ ಪ್ರಜಾಕೀಯ ಪಕ್ಷದ ಈಶ್ವರ, ಭಾರತೀಯ ಜನತಾ ಪಾರ್ಟಿಯ ಜಿ.ಎಸ್. ಗಾಯಿತ್ರಿ, ಬಿ.ಎಸ್.ಪಿ ಹನುಮಂತಪ್ಪ, ಸಮಾಜ ವಿಕಾಸ ಕ್ರಾಂತಿ ರುದ್ರೇಶ್ ಕೆ.ಹೆಚ್, ರಾಣಿ ಚೆನ್ನಮ್ಮ ಪಾರ್ಟಿ ವೀರೇಶ್​ .ಎಸ್​., ಕಂಟ್ರಿ ಸಿಟಿಜನ್ ಪಾರ್ಟಿ ಎ.ಟಿ.ದಾದಾಖಲಂದರ್, ನವಭಾರತ ಸೇನಾ ಎಂ.ಜಿ.ಶ್ರೀಕಾಂತ್, ಜನಹಿತ ಪಕ್ಷ ದೊಡ್ಡೇಶ್ ಹೆಚ್.ಎಸ್, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ ಶ್ರೀನಿವಾಸ ಎಂ.ಸಿ, ಕೆ.ಆರ್.ಎಸ್.ನಿಂದ ಕೆ.ಎಸ್.ವೀರಭದ್ರಪ್ಪ.

ಪಕ್ಷೇತರರ ವಿವರ ಹೀಗಿದೆ:ವಿನಯ್ ಕುಮಾರ್ ಜಿ.ಬಿ, ಟಿ.ಜಬೀನ್ ತಾಜ್, ಎ.ಕೆ.ಗಣೇಶ್, ಬರ್ಕತ್ ಅಲಿ, ಮೊಹಮದ್ ಹಯಾತ್ ಎಂ, ಎಂ.ಟಿ.ಚಂದ್ರಣ್ಣ, ಸೈಯದ್ ಜಬೀವುಲ್ಲಾ.ಕೆ, ರವಿನಾಯ್ಕ್ ಬಿ, ತಸ್ಲಿಮ್ ಬಾನು, ಪರ್ವೇಜ್ ಹೆಚ್, ರಶೀದ್ ಖಾನ್, ಸಲೀಮ್ ಎಸ್, ಮಂಜುನಾಥ ಎ.ಕೆ, ಅಬ್ದುಲ್ ನಜೀರ್ ಅಹ್ಮದ್, ಪೆದ್ದಪ್ಪ ಎಸ್, ಮೆಹಬೂಬ್ ಬಾಷಾ, ಜಿ.ಎಂ.ಬರ್ಕತ್ ಅಲಿ ಬಾಷಾ, ಜಿ.ಎಂ.ಗಾಯಿತ್ರಿ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳಾಗಿದ್ದಾರೆ.

ಇದನ್ನೂ ಓದಿ:ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸುವೆ: ಡಿ.ಕೆ.ಶಿವಕುಮಾರ್ - D K Shivakumar

ABOUT THE AUTHOR

...view details