ಮಂಗಳೂರು (ದಕ್ಷಿಣ ಕನ್ನಡ):ಮಂಗಳೂರಿನ ಸುರತ್ಕಲ್ನ ನಾಲ್ವರು ವಿದ್ಯಾರ್ಥಿಗಳು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಯಶ್ವಿತ್ ಚಂದ್ರಕಾಂತ್, ನಿರೂಪ್, ಅನ್ವಿತ್ ಮತ್ತು ರಾಘವೇಂದ್ರ ಮೃತಪಟ್ಟವರು. ಹಳೆಯಂಗಡಿ ಬಳಿಯ ನದಿಯಲ್ಲಿ ನಾಲ್ವರು ವಿದ್ಯಾರ್ಥಿಗಳ ಶವ ಪತ್ತೆಯಾಗಿದೆ.
ನಾಲ್ವರು ಮೃತರು ನಿನ್ನೆ ಮಧ್ಯಾಹ್ನ 1:30ರ ಸುಮಾರಿಗೆ ನಾಪತ್ತೆಯಾಗಿದ್ದರು. ಶಾಲಾ ಪರೀಕ್ಷೆ ನಂತರ ನದಿಗೆ ಈಜಲು ಹೋಗಿ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಸುರತ್ಕಲ್ನ ವಿದ್ಯಾದಾಯಿನಿ ಫ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.