ಶಿವಮೊಗ್ಗ: ದಸರಾ, ವಿಜಯದಶಮಿ ಹಬ್ಬದ ವ್ಯಾಪಾರ ಶಿವಮೊಗ್ಗದ ಮಾರುಕಟ್ಟೆಗಳಲ್ಲಿ ಜೋರಾಗಿ ನಡೆಯುತ್ತಿದೆ. ಆಯುಧ ಪೂಜೆಗೆ ಹೂವು, ಹಣ್ಣುಗಳು ಪ್ರಮುಖವಾಗಿ ಬೇಕಾಗುತ್ತವೆ. ಈ ಬಾರಿ ಮಾರುಕಟ್ಟೆಗೆ ಕೇಸರಿ, ಹಳದಿ ಬಣ್ಣದ ಚೆಂಡಿನ ಹೂವು ಬಂದಿದ್ದು, ಸೇವಂತಿಗೆ ಹೂವಿಗೂ ಬೇಡಿಕೆ ಹೆಚ್ಚಿದೆ.
ಹೂವು, ಹಣ್ಣಿನ ದರಗಳು:ಚೆಂಡಿನ ಹೂವು ಕೆ.ಜಿಗೆ 100 ರೂ ಹಾಗೂ ಒಂದು ಮಾರು ಹೂವಿಗೆ 80 ರೂ ಇದೆ. ಹಣ್ಣುಗಳು, ಮಿಕ್ಸ್ ಹಣ್ಣಿಗೆ ಕೆ.ಜಿಗೆ 100 ರೂ ಹಾಗೂ ಸೇಬಿಗೆ 150 ರೂ. ಆರೆಂಜ್ 70 ರೂ., ಪೇರಲೆ- 50 ರೂ., ಮೂಸಂಬಿ- 120 ರೂ., ದ್ರಾಕ್ಷಿ -150 ರೂ., ದಾಳಿಂಬೆ- 200 ರೂ. ದರವಿದೆ. ಇದರ ಜೊತೆಗೆ ಬೂದಗುಂಬಲಕ್ಕೂ ಹೆಚ್ಚು ಬೇಡಿಕೆ ಇದೆ. ವೀಳ್ಯದೆಲೆ, ಅರಿಶಿನ, ಕುಂಕುಮ ಸೇರಿದಂತೆ ಪ್ಲಾಸ್ಟಿಕ್ ತೋರಣಗಳನ್ನು ಜನ ಕೊಂಡುಕೊಳ್ಳುತ್ತಿದ್ದರು.