ಬೆಂಗಳೂರು/ದೆಹಲಿ:ಭಾರೀ ಮಳೆಯಿಂದಾಗಿ ದೆಹಲಿ ಏರ್ಪೋರ್ಟ್ನ ಮೇಲ್ಛಾವಣಿ ಕುಸಿದು ಬಿದ್ದಿದ್ದು, ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ಬೆಂಗಳೂರು-ದೆಹಲಿ ಮಾರ್ಗದ 18 ವಿಮಾನಗಳ ಹಾರಾಟ ರದ್ದಾಗಿದೆ.
ದೆಹಲಿಯಲ್ಲಿ ಮುಂಗಾರು ಮಳೆ ಆರಂಭವಾಗಿದೆ. ವರ್ಷದ ಮೊದಲ ಮಳೆಯ ಆರ್ಭಟ ಜೋರಾಗಿಯೇ ಇದೆ. ದೆಹಲಿ ಏರ್ಪೋರ್ಟ್ನ ಟರ್ಮಿನಲ್-1ರ ಮೇಲ್ಛಾವಣಿ ಕುಸಿದು ಬಿದ್ದಿದೆ. ಮೇಲ್ಛಾವಣಿ ಕುಸಿದ ಪರಿಣಾಮ, ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದರೆ, 6 ಮಂದಿ ಗಾಯಗೊಂಡಿದ್ದಾರೆ.
ಹೀಗಾಗಿ, ಟರ್ಮಿನಲ್ -1ರಿಂದ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ. ಇದರ ಹೊಡೆತ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೂ ತಟ್ಟಿದೆ.
ದೆಹಲಿ ಏರ್ಪೋರ್ಟ್ನ ಟರ್ಮಿನಲ್-1ರಿಂದ ಬೆಂಗಳೂರಿಗೆ ಬರಬೇಕಿದ್ದ ಇಂಡಿಗೊ ವಿಮಾನಯಾನ ಸಂಸ್ಥೆಯ 9 ವಿಮಾನಗಳ ಹಾರಾಟ ರದ್ದಾಗಿದೆ. ಹಾಗೆಯೇ ಬೆಂಗಳೂರಿನಿಂದ ದೆಹಲಿಯ ಟರ್ಮಿನಲ್-1ಕ್ಕೆ ಹೊರಟಿದ್ದ ಇಂಡಿಗೊ ಸಂಸ್ಥೆಯ 9 ವಿಮಾನಗಳ ಹಾರಾಟ ಸ್ಥಗಿತಗೊಂಡಿರುವ ಬಗ್ಗೆ ಇಂಡಿಗೊ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಯಾಣಿಕರ ಸಹಾಯಕ್ಕಾಗಿ ಸಹಾಯವಾಣಿ ತೆರೆಯಲಾಗಿದೆ.
ಇದನ್ನೂ ಓದಿ:ಲಗೇಜ್ ಬಿಟ್ಟು ಬೆಳಗಾವಿಗೆ ಬಂದಿಳಿದ ವಿಮಾನ: ಪ್ರಯಾಣಿಕರ ಪರದಾಟ, ಪ್ರತಿಭಟನೆ - flight left passenger bags