ತುಮಕೂರು:ಕೌಟುಂಬಿಕ ಕಲಹಕ್ಕೆ ಬೇಸತ್ತು ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧುಗಿರಿ ತಾಲೂಕಿನ ಸಿದ್ದಪುರ ಕೆರೆಯಲ್ಲಿ ನಡೆದಿದೆ. 35 ವರ್ಷದ ಹಸೀನಾ ತಾಜ್ ತನ್ನ 8 ಮತ್ತು 4 ವರ್ಷದ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.
ತುಮಕೂರು: ಕೌಟುಂಬಿಕ ಕಲಹ, ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ - SUICIDE CASE - SUICIDE CASE
ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ (ETV Bharat)
Published : Sep 26, 2024, 3:52 PM IST
ಹಸೀನಾ ತಾಜ್ ಮಧುಗಿರಿ ಪಟ್ಟಣದಲ್ಲಿ ಗಂಡ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದರು. ಆದರೆ, ಇಂದು ಸಿದ್ದಪುರ ಕೆರೆಯಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಮಧುಗಿರಿ ಪೊಲೀಸರು, ಪರಿಶೀಲನೆ ನಡೆಸಿ ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಕಳ್ಳತನ ನೋಡಿದ ಮಹಿಳೆಯನ್ನೇ ಬಾವಿಗೆ ಎಸೆದು ಕೊಲೆ: ಬೆಳಗಾವಿಯಲ್ಲಿ ಅಮಾನವೀಯ ಕೃತ್ಯ - Woman Murder