ಮಂಗಳೂರು: ಇನ್‌ಸ್ಟಾಗ್ರಾಂನಲ್ಲಿ ಜಾಹೀರಾತು ನೋಡಿ ಸ್ಟಾಕ್ ಮಾರ್ಕೆಟ್ನಲ್ಲಿ ಶೇರು ಟ್ರೇಡಿಂಗ್‌ನಲ್ಲಿ ಹಣ ಹೂಡಿ 74,18,952 ರೂ. ವಂಚನೆಗೊಳಗಾದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು ಮಾ.15ರಂದು ಇನ್‌ಸ್ಟಾಗ್ರಾಂ ನೋಡುತ್ತಿದ್ದಾಗ ಅದರಲ್ಲಿ ಶೇರು ಟ್ರೇಡಿಂಗ್ ಜಾಹೀರಾತು ನೋಡಿದ್ದಾರೆ. ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದಾಗ ಅದರಲ್ಲಿ ಶೇರು ಟ್ರೇಡಿಂಗ್ ಬಗ್ಗೆ ಮಾಹಿತಿ ಸಿಕ್ಕಿದೆ. ಅದರಲ್ಲಿದ್ದ ಅಪರಿಚಿತ ವ್ಯಕ್ತಿಯ ಮೊಬೈಲ್‌ನಿಂದ ವಾಟ್ಸಾಪ್ ಲಿಂಕ್ ಬಂದಿದೆ. ಆ ಲಿಂಕ್ ಅನ್ನು ತೆರೆದು ನೋಡಿದಾಗ ಅದರಲ್ಲಿ ಗ್ರೂಪ್‌ನ ಲಿಂಕ್ ಕಂಡು ಬಂದಿದೆ.
ನಂತರ ದೂರುದಾರರನ್ನು ಸದರಿ ಗ್ರೂಪ್ಗೆ ಸೇರಿಸಿಕೊಂಡಿದ್ದಾರೆ. ಈ ಗ್ರೂಪ್ನಲ್ಲಿ ಶೇರು ಟ್ರೇಡಿಂಗ್ ಬಗ್ಗೆ ಆನ್ ಲೈನ್ ಮೂಲಕ ತರಬೇತಿ ನೀಡಿದ್ದಾರೆ. ಏ.25 ರಂದು ಕಂಪನಿಯಿಂದ ಟ್ರೇಡಿಂಗ್ ಖಾತೆಯನ್ನು ತೆರೆಯಲು ವಾಟ್ಸಾಪ್ ಮೂಲಕ ಮೆಸೇಜ್ ಬಂದಿದೆ. ಹೆಚ್ಚಿನ ಹಣ ತೊಡಗಿಸಿದ್ದಲ್ಲಿ ಹೆಚ್ಚು ಲಾಭಗಳಿಸಬಹುದು ಎಂದು ಹೇಳಿ ಶೇರು ಟ್ರೇಡಿಂಗ್ ಬಗ್ಗೆ ಪ್ರೇರೇಪಿಸಿದ್ದಾರೆ.