ಹುಬ್ಬಳ್ಳಿ :ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿರ್ವಹಿಸಲು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯಿಂದ ಹೆಚ್ಚುವರಿ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ವ್ಯವಸ್ಥೆ ಮಾಡಲಾಗಿದೆ. ವಿವರಗಳು ಈ ಕೆಳಗಿನಂತಿವೆ.
ರೈಲು ಸಂಖ್ಯೆ 07323 ಎಸ್ಎಸ್ಎಸ್ ಹುಬ್ಬಳ್ಳಿ-ಯಶವಂತಪುರ ಒನ್ ವೇ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 30, 2024 ರಂದು (ಬುಧವಾರ) ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಬೆಳಗ್ಗೆ 8:00 ಗಂಟೆಗೆ ಹೊರಟು ಅದೇ ದಿನ ಮಧ್ಯಾಹ್ನ 3:45 ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ. ಈ ರೈಲು ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲ್ಲಲಿದೆ.
ರೈಲು ಸಂಖ್ಯೆ 07324 ಯಶವಂತಪುರ - ಕಲಬುರಗಿ ಒನ್ ವೇ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 30, 2024 ರಂದು (ಬುಧವಾರ) ಯಶವಂತಪುರದಿಂದ ಸಂಜೆ 5:15ಕ್ಕೆ ಹೊರಟು, ಮರುದಿನ ಅಂದರೆ ಅಕ್ಟೋಬರ್ 31, 2024 ರಂದು (ಗುರುವಾರ) ಬೆಳಗಿನ ಜಾವ 4:15ಕ್ಕೆ ಕಲಬುರಗಿ ತಲುಪಲಿದೆ. ಮಾರ್ಗದಲ್ಲಿ ಈ ರೈಲು ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರೋಡ್, ರಾಯಚೂರು, ಕೃಷ್ಣಾ, ಯಾದಗಿರಿ ಮತ್ತು ಶಹಾಬಾದ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ರೈಲು ಸಂಖ್ಯೆ 07325 ಕಲಬುರಗಿ - ಎಸ್‌ಎಸ್‌ಎಸ್ ಹುಬ್ಬಳ್ಳಿ ಒನ್ ವೇ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 31, 2024 ರಂದು (ಗುರುವಾರ) ಕಲಬುರಗಿಯಿಂದ ಬೆಳಗ್ಗೆ 6:15 ಕ್ಕೆ ಹೊರಟು ಅದೇ ದಿನ ಸಂಜೆ 4:00 ಗಂಟೆಗೆ ಹುಬ್ಬಳ್ಳಿ ತಲುಪಲಿದೆ. ಮಾರ್ಗದಲ್ಲಿ ಈ ರೈಲು ಶಹಾಬಾದ್, ಯಾದಗಿರಿ, ಕೃಷ್ಣಾ, ರಾಯಚೂರು, ಮಂತ್ರಾಲಯಂ ರೋಡ್, ಆದೋನಿ, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ ಮತ್ತು ಗದಗ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಮೇಲೆ ತಿಳಿಸಿದ ಈ ವಿಶೇಷ ರೈಲುಗಳು (07323, 07324, ಮತ್ತು 07325) 1 ಎಸಿ ಫಸ್ಟ್ ಕ್ಲಾಸ್, 2 ಎಸಿ 2 ಟೈರ್, 4 ಎಸಿ 3 ಟೈರ್, 3 ಎಸಿ 3-ಟೈರ್ ಎಕಾನಮಿ, 6 ಸ್ಲೀಪರ್ ಕ್ಲಾಸ್, 2 ಜನರಲ್ ಸೆಕೆಂಡ್ ಕ್ಲಾಸ್, 1 ಪ್ಯಾಂಟ್ರಿ ಕಾರ್ ಮತ್ತು 2 ಲಗೇಜ್ ಬ್ರೇಕ್ ಮತ್ತು ಜನರೇಟರ್ ಕಾರುಗಳು ಸೇರಿದಂತೆ 21 ಬೋಗಿಗಳನ್ನು ಒಳಗೊಂಡಿರುತ್ತದೆ.
ಪ್ರಯಾಣಿಕರು www.enquiry.indianrail.gov.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅಥವಾ NTES ಅಪ್ಲಿಕೇಶನ್ ಬಳಸಿ ಅಥವಾ 139 ಗೆ ಡಯಲ್ ಮಾಡುವ ಮೂಲಕ ರೈಲುಗಳ ಆಗಮನ/ನಿರ್ಗಮನ ಸಮಯ, ಇತರ ವಿವರಗಳನ್ನು ಪರಿಶೀಲಿಸಬಹುದು ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
14 ರೈಲುಗಳಿಗೆ ಹೆಚ್ಚುವರಿ ಬೋಗಿ ಜೋಡಣೆ :ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು, 14 ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ತಾತ್ಕಾಲಿಕವಾಗಿ ಜೋಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ವಿವರಗಳು ಈ ಕೆಳಗಿನಂತಿವೆ.
1. ಅಕ್ಟೋಬರ್ 25 ರಿಂದ ನವೆಂಬರ್ 24, 2024ರ ವರೆಗೆ ರೈಲು ಸಂಖ್ಯೆ 16589 ಕೆಎಸ್ಆರ್ ಬೆಂಗಳೂರು-ಸಾಂಗ್ಲಿ ರಾಣಿ ಚೆನ್ನಮ್ಮ ಡೈಲಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ, 3-ಟೈರ್ ಎಕಾನಮಿ ಬೋಗಿ ಜೋಡಿಸಲಾಗುತ್ತಿದೆ.
2. ಅಕ್ಟೋಬರ್ 26 ರಿಂದ ನವೆಂಬರ್ 25, 2024ರ ವರೆಗೆ ರೈಲು ಸಂಖ್ಯೆ 16590 ಸಾಂಗ್ಲಿ-ಕೆಎಸ್ಆರ್ ಬೆಂಗಳೂರು ರಾಣಿ ಚೆನ್ನಮ್ಮ ಡೈಲಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಎಕಾನಮಿ ಬೋಗಿ ಜೋಡಿಸಲಾಗುತ್ತಿದೆ.
3.ಅಕ್ಟೋಬರ್ 25 ರಿಂದ ನವೆಂಬರ್ 24, 2024ರ ವರೆಗೆ ರೈಲು ಸಂಖ್ಯೆ 20653 ಕೆಎಸ್ಆರ್ ಬೆಂಗಳೂರು-ಬೆಳಗಾವಿ ಡೈಲಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಎಕಾನಮಿ ಬೋಗಿ ಜೋಡಿಸಲಾಗುತ್ತಿದೆ.
4. ಅಕ್ಟೋಬರ್ 26 ರಿಂದ ನವೆಂಬರ್ 25, 2024ರ ವರೆಗೆ ರೈಲು ಸಂಖ್ಯೆ 20654 ಬೆಳಗಾವಿ-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಎಕಾನಮಿ ಬೋಗಿ ಜೋಡಿಸಲಾಗುತ್ತಿದೆ.