ಕರ್ನಾಟಕ

karnataka

ತುಂಗಭದ್ರಾ ಜಲಾಶಯಕ್ಕೆ ಬಂತು ಕ್ರಸ್ಟ್ ಗೇಟ್​ನ ಎಲಿಮೆಂಟ್ಸ್ - ELEMENTS OF CREST GATE

By ETV Bharat Karnataka Team

Published : Aug 15, 2024, 10:41 AM IST

ತುಂಗಭದ್ರಾ ಜಲಾಶಯಕ್ಕೆ ಇಂದು ಬೆಳಗ್ಗೆ ಜೀರೋ ಟ್ರಾಫಿಕ್​ನಲ್ಲಿ ಕ್ರಸ್ಟ್ ಗೇಟ್​ನ ಎಲಿಮೆಂಟ್ಸ್​ಗಳನ್ನು ತರಲಾಗಿದೆ.

ಕ್ರಸ್ಟ್ ಗೇಟ್​ನ ಎಲಿಮೆಂಟ್ಸ್
ಕ್ರಸ್ಟ್ ಗೇಟ್​ನ ಎಲಿಮೆಂಟ್ಸ್ (ETV Bharat)

ತುಂಗಭದ್ರಾ ಜಲಾಶಯಕ್ಕೆ ಬಂತು ಕ್ರಸ್ಟ್ ಗೇಟ್​ನ ಎಲಿಮೆಂಟ್ಸ್ (ETV Bhara)

ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್​ ಗೇಟ್ ಕಿತ್ತು ಹೋದ ಹಿನ್ನೆಲೆ ತಾತ್ಕಾಲಿಕ ಕ್ರಸ್ಟ್ ಗೇಟ್ ಅಳವಡಿಕೆಗೆ ತಜ್ಞರು ಸಲಹೆ ನೀಡಿದ್ದರು. ಅದರಂತೆ ಬಳ್ಳಾರಿಯ ಜಿಂದಾಲ್​ನಿಂದ ಇಂದು ಬೆಳಗ್ಗೆ ಕ್ರಸ್ಟ್ ಗೇಟ್​ನ ಎಲಿಮೆಂಟ್ಸ್​ಅನ್ನು ಜಲಾಶಯದ ಆವರಣಕ್ಕೆ ತರಲಾಗಿದೆ.

ಕೊಪ್ಪಳ ಜಿಲ್ಲೆ ಹೊಸಳ್ಳಿಯ ಹಿಂದೂಸ್ಥಾನ ಇಂಜನಿಯರಿಂಗ್​ ಮತ್ತು ಹೊಸಪೇಟೆಯ ನಾರಾಯಣ ಇಂಜನಿಯರಿಂಗ್​ ಮತ್ತು ಜಿಂದಾಲ್​ ಕಡೆಯಿಂದ ತಾತ್ಕಾಲಿಕ ಕ್ರಸ್ಟ್‌ ಗೇಟ್ ತಯಾರಿಸಲು ಯೋಜನೆ ರೂಪಿಸಲಾಗಿತ್ತು. ಸದ್ಯ ಜಿಂದಾಲ್​ನ ಒಂದು ಕಡೆಯಿಂದ ಪ್ಲೇಟ್​ಗಳನ್ನು ಇಂದು ತರಲಾಗಿದೆ.

ಪೊಲೀಸ್ ಭದ್ರತೆಯಲ್ಲಿ ಆಗಮಿಸಿದ ಗೇಟ್​ಗಳು:ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಪೋಲಾಗುವುದನ್ನು ತಡೆಯಲು ಅಹೋರಾತ್ರಿ ಗೇಟ್ ನಿರ್ಮಾಣ ಕಾರ್ಯ ನಡೆದಿದೆ. ಬುಧವಾರ ರಾತ್ರಿಯೇ ಗೇಟ್​ಗಳ ಎಲಿಮೆಂಟ್ಸ್​ ಬರಬೇಕಿತ್ತು. ಆದರೆ, ಮಳೆಯ ಕಾರಣದಿಂದ ತರಲಾಗಲಿಲ್ಲ. ಇಂದು ಬೆಳಗ್ಗೆ ಪೊಲೀಸ್​ ಭದ್ರತೆಯಲ್ಲಿ ಜೀರೋ ಟ್ರಾಫಿಕ್​ನಲ್ಲಿ ಗೇಟ್​ಗಳ ಎಲಿಮೆಂಟ್ಸ್​ಅನ್ನು ತರಲಾಗಿದೆ.

77 ಟಿಎಂಸಿಗೆ ಇಳಿದ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹ: ತುಂಗಭದ್ರಾ ಜಲಾಶಯ ಒಟ್ಟು 105.788 ಟಿಸಿಎಂ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಕ್ರಸ್ಟ್ ಗೇಟ್ ಕಿತ್ತೋಗಿರುವ ಹಿನ್ನೆಲೆ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ. ಇಲ್ಲಿಯವರೆಗೂ ಜಲಾಶಯದಿಂದ ಸುಮಾರು 36 ಟಿಎಂಸಿ ನೀರು ಹೊರಬಿಡಲಾಗಿದೆ. ಜಲಾಶಯಕ್ಕೆ ಈಗ 36,143 ಕ್ಯೂಸೆಕ್ ನೀರು ಒಳಹರಿದು ಬರುತ್ತಿದೆ. ಜಲಾಶಯದಿಂದ ಈಗ ನದಿಗೆ 1,00,245 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

ಇದನ್ನೂ ಓದಿ:ಟಿಬಿ ಡ್ಯಾಂಗೆ ಸ್ಟಾಪ್ ಲಾಗ್ ಗೇಟ್ ನಿರ್ಮಾಣ; ಗುರುವಾರ ನೀರಿಗಿಳಿಸುವ ಕಾರ್ಯ - TB Dam Crest Gate

ABOUT THE AUTHOR

...view details