ಬೆಂಗಳೂರು:ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೇ ವಿದ್ಯುತ್ ದರ ಇಳಿಕೆ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ರಾಜ್ಯದ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ಕೆಇಆರ್ಸಿ ಪ್ರಸಕ್ತ ಸಾಲಿನ (2024-2025) ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದು ಗೃಹ ಬಳಕೆ, ವಾಣಿಜ್ಯ, ಕೈಗಾರಿಕೆಗಳು ಉಪಯೋಗಿಸುವ ವಿದ್ಯುತ್ ದರದಲ್ಲಿ ಗಣನೀಯ ಇಳಿಕೆ ಮಾಡಿ ಆದೇಶ ಹೊರಡಿಸಿದೆ.
100 ಯುನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರಿಗೆ ಮಾತ್ರ ವಿದ್ಯುತ್ ದರ ಇಳಿಕೆಯ ಪ್ರಯೋಜನ ದೊರೆಯಲಿದೆ. ಗೃಹ ಬಳಕೆಯ 100 ಯೂನಿಟ್‌ಗಿಂತ ಹೆಚ್ಚು ಕರೆಂಟ್ ಬಳಸುವ ಗ್ರಾಹಕರಿಗೆ ಪ್ರತಿ ಯುನಿಟ್ಗೆ 1 ರೂಪಾಯಿ 10 ಪೈಸೆ ದರ ಕಡಿಮೆ ಮಾಡಲಾಗಿದೆ.