ಬೆಂಗಳೂರು: ಹೆಚ್ಬಿಆರ್ ಸ್ಟೇಷನ್ನಲ್ಲಿ ತುರ್ತು ನಿರ್ವಹಣಾ ಕೆಲಸದ ಹಿನ್ನೆಲೆಯಲ್ಲಿ ಮಂಗಳವಾರ (ಜೂ.25) ಬೆಳಗ್ಗೆ 10.30 ರಿಂದ ಮಧ್ಯಾಹ್ನ 3.30ರ ವರೆಗೆ ಹಲವೆಡೆ ವಿದ್ಯುತ್ ಕಡಿತವಾಗಲಿದೆ ಎಂದು ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ) ತಿಳಿಸಿದೆ.
ಬೆಂಗಳೂರಿಗರೇ ದಯವಿಟ್ಟು ಗಮನಿಸಿ: ನಗರದ ವಿವಿಧೆಡೆ ಇಂದು ವಿದ್ಯುತ್ ವ್ಯತ್ಯಯ - Power Cut In Bengaluru - POWER CUT IN BENGALURU
ಬೆಸ್ಕಾಂ ತುರ್ತು ನಿರ್ವಹಣಾ ಕೆಲಸಗಳನ್ನು ಕೈಗೊಳ್ಳುವ ಹಿನ್ನೆಲೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ.
Published : Jun 25, 2024, 8:04 AM IST
ಹೆಚ್ಬಿಆರ್ 1, 2 ಮತ್ತು 3ನೇ ಬ್ಲಾಕ್, ಸುಭಾಶ್ ಬಡಾವಣೆ, ರಾಮ ದೇವಸ್ಥಾನದ ರಸ್ತೆ, ರಾಮದೇವ್ ಗಾರ್ಡನ್, ಕೃಷ್ಣ ರೆಡ್ಡಿ ಬಡಾವಣೆ, ಟೀಚರ್ಸ್ ಕಾಲನಿ, ಶಿವರಾಮಯ್ಯ ಬಡಾವಣೆ, ಕಮ್ಮನಹಳ್ಳಿ ಮುಖ್ಯರಸ್ತೆ, ರಾಮಯ್ಯ ಬಡಾವಣೆ, ಲಿಂಗರಾಜಪುರ, ಜಾನಕೀರಾಮ್ ಬಡಾವಣೆ, ಕನಕದಾಸ ಬಡಾವಣೆ, ಗೋವಿಂದಪುರ, ಗೋವಿಂದಪುರ ಗ್ರಾಮ, ವಿನೋಬಾನಗರ, ಹೆಣ್ಣೂರು ಮುಖ್ಯರಸ್ತೆ, ನಾಗೇನಹಳ್ಳಿ, ಕೆಂಪೇಗೌಡ ಬಡಾವಣೆ, ಗಾಂಧಿನಗರ, ಕುಶಾಲನಗರ ಸೇರಿ ವಿವಿಧೆಡೆ ವಿದ್ಯುತ್ ಕಡಿತವಾಗಲಿದೆ. ಹಾಗಾಗಿ ಸಾರ್ವಜನಕರು ಸಹಕರಿಸುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಗಾಳಿಸಹಿತ ಧಾರಾಕಾರ ಮಳೆ ಎಫೆಕ್ಟ್: ಹೆಸ್ಕಾಂಗೆ ಅಂದಾಜು ₹34 ಕೋಟಿ ನಷ್ಟ - HESCOM