ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮನೆ, ಕಚೇರಿ ಮೇಲೆ ಇಡಿ ದಾಳಿ: 41 ಗಂಟೆಗಳವರೆಗೆ ಶೋಧ ಕಾರ್ಯ - Ballary

ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಮನೆ ಹಾಗೂ ಕಚೇರಿಯ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿ, 41 ಗಂಟೆಗಳವರೆಗೆ ಶೋಧ ಕಾರ್ಯ ಕೈಗೊಂಡರು.

ED raid  Congress MLA Nara Bharat Reddy  ಬಳ್ಳಾರಿ  Ballary  ಶಾಸಕ ನಾರಾ ಭರತ್ ರೆಡ್ಡಿ
ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮನೆ, ಕಚೇರಿ ಮೇಲೆ ಇಡಿ ದಾಳಿ: 41 ಗಂಟೆಗಳವರೆಗೆ ಶೋಧ ಕಾರ್ಯ

By ETV Bharat Karnataka Team

Published : Feb 12, 2024, 9:02 AM IST

ಬಳ್ಳಾರಿ:ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಅವರ ಮನೆ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿ ಸತತ ಎರಡು ದಿನಗಳ ಕಾಲ ಶೋಧ ಕಾರ್ಯ ನಡೆಸಿದರು. ಮೋಕಾ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಎಂಟರ್ಪ್ರೈಸ್ ಮತ್ತು ಗ್ರಾನೈಟ್ ‌ಕಂಪನಿಯಲ್ಲಿರುವ ಕಚೇರಿಗಳಲ್ಲಿ ಕಡತಗಳ ಪರಿಶೀಲನೆ ನಡೆಸಿದರು.

41 ಗಂಟೆಗಳವರೆಗೆ ಶೋಧ ಕಾರ್ಯ:ಶನಿವಾರ (ಫೆ.10 ರಂದು) ದಿನವಿಡೀ ಅಧಿಕಾರಿಗಳು ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದರು. ಭಾನುವಾರ (ಫೆ.11 ರಂದು) ರಾತ್ರಿ 11.30ರವರೆಗೆ ಕೂಡ ತೀವ್ರ ಶೋಧ ನಡೆಸಿದರು. ಸುಮಾರು 41 ಗಂಟೆಗಳವರೆಗೆ ಕಡತಗಳನ್ನು ಪರಿಶೀಲಿಸಿದರು. ಫೆ.11 ರಂದು ಬೆಳಿಗ್ಗೆ ‌6.30ರಿಂದ ಆರಂಭವಾಗಿದ್ದ ಇ.ಡಿ ಅಧಿಕಾರಿಗಳ ದಾಳಿಯು, ಫೆ.12ರು ರಾತ್ರಿ 11.30ರವರಗೆ ನಡೆಯಿತು. ಇನ್ನೂ ಮನೆಗೆ ಬಂದ ಕೆಲಸದವರನ್ನು ಭದ್ರತಾ ಸಿಬ್ಬಂದಿ ಮರಳಿ ಕಳುಹಿಸಿದರು.

ಇದನ್ನೂ ಓದಿ:ರಾಜ್ಯಸಭೆ ಚುನಾವಣೆ: ಬಿಜೆಪಿ ಟಿಕೆಟ್ ಪಡೆದ ನಾರಾಯಣಸಾ ಭಾಂಡೆಗೆ ಯಾರು?

ABOUT THE AUTHOR

...view details