ಕರ್ನಾಟಕ

karnataka

ETV Bharat / state

ಪಂದ್ಯ ವೀಕ್ಷಿಸಲು ಬರುವ ಶ್ವಾನಪ್ರೇಮಿಗಳಿಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 'ಡಾಗ್ ಔಟ್' ವಲಯ - Chinnaswamy Stadium - CHINNASWAMY STADIUM

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB ಫ್ರಾಂಚೈಸಿ ಈ ಬಾರಿಯೂ 'ಡಾಗ್ ಔಟ್' ವಲಯವನ್ನು ಮುಂದುವರೆಸಿದೆ.

ಶ್ವಾನಪ್ರೇಮಿಗಳು
ಶ್ವಾನಪ್ರೇಮಿಗಳು

By ETV Bharat Karnataka Team

Published : Mar 29, 2024, 3:33 PM IST

ಬೆಂಗಳೂರು : ಅಭಿಮಾನಿಗಳಿಗೆ ಕ್ರೀಡಾಂಗಣದಲ್ಲಿ ಅತ್ಯುತ್ತಮ ಅನುಭವ ಮತ್ತು ಹೊಸ ಹೊಸ ಆವಿಷ್ಕಾರಗಳಿಗೆ ಹೆಸರುವಾಸಿಯಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ, ಈ ಬಾರಿಯೂ ತನ್ನ ಹೊಸತನವನ್ನ ಮುಂದುವರೆಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೇ ಮೊದಲ ಬಾರಿಗೆ ತಮ್ಮ ತವರು ಮೈದಾನವಾದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತ್ಯಾಕರ್ಷಕ 'ಡಾಗ್ ಔಟ್' ವಲಯವನ್ನು ಈ ಬಾರಿಯೂ ಮುಂದುವರೆಸಿದೆ.

ಪಂದ್ಯಗಳನ್ನು ಸಾಕುಪ್ರಾಣಿ ಸ್ನೇಹಿಯನ್ನಾಗಿ ಮಾಡಲು 2019 ರಲ್ಲಿ ಡಾಗ್ ಔಟ್ ವ್ಯವಸ್ಥೆಯನ್ನ ಮೊದಲ ಬಾರಿಗೆ ಪರಿಚಯಿಸಲಾಯಿತು. ಮತ್ತು ಇದು ಬೆಂಗಳೂರು‌ ತಂಡದ ಹೋಮ್ ಗ್ರೌಂಡ್‌ನಲ್ಲಿ ಶಾಶ್ವತ ವೈಶಿಷ್ಟ್ಯವಾಗಿ ಉಳಿಸಿಕೊಳ್ಳಲಾಗಿದೆ. ಆರಾಮದಾಯಕವಾದ ಆಸನ ವ್ಯವಸ್ಥೆಗಳೊಂದಿಗೆ, ತಮ್ಮ ಪ್ರೀತಿಯ ನಾಯಿಗಳೊಂದಿಗೆ, ಅವುಗಳ ಮಾಲೀಕರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟವನ್ನ ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.

ಈ ವಿಶೇಷ ವಲಯದಲ್ಲಿ ಎಲ್ಲ ತಳಿಗಳ ನಾಯಿಗಳಿಗೆ ಪ್ರವೇಶವಿದ್ದು, ಅವುಗಳು ಸ್ವತಂತ್ರವಾಗಿ ವರ್ತಿಸಬಹುದು ಮತ್ತು ಪಂದ್ಯದ ವೇಳೆ ಮಾಲೀಕರಿಗೆ, ಸಾಕುಪ್ರಾಣಿಗಳಿಗೆ ಆಹಾರ ಮತ್ತು ನೀರನ್ನು ಸಹ ಒದಗಿಸಲಾಗುತ್ತಿದೆ. ಡಾಗ್ ಔಟ್ ವಲಯವು ಕ್ರಿಕೆಟ್ ಪ್ರೇಮಿ ಹಾಗೂ ಶ್ವಾನ ಪ್ರಿಯರಿಗೆ ಸಮಾನವಾಗಿ ಸುರಕ್ಷಿತ ಸ್ಥಳವಾಗಿದೆ. ಮತ್ತು ಆಟದ ಮೇಲಿನ ಅವರ ಪ್ರೀತಿಯನ್ನ ತಮ್ಮ ನೆಚ್ಚಿನ ಸಹಚರರೊಂದಿಗೆ ಹಂಚಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಿದೆ.

"ನಮ್ಮ ತವರು ಮೈದಾನದಲ್ಲಿ ಡಾಗ್ ಔಟ್ ವಲಯ ಹೊಂದಲು ನಾವು ಸಂತೋಷಪಡುತ್ತೇವೆ. ಮರೆಯಲಾಗದ ಕ್ಷಣಗಳನ್ನು ತಮ್ಮ ಸಾಕುನಾಯಿಗಳೊಂದಿಗೆ ಹಂಚಿಕೊಳ್ಳುವ ಅವಕಾಶವನ್ನ ಡಾಗ್ ಔಟ್ ಒದಗಿಸುತ್ತಿದೆ. ಅನೇಕ ಅಭಿಮಾನಿಗಳು ಸಾಕು ಪ್ರಾಣಿಗಳ ಸಲುವಾಗಿ ಮನೆಗೆ ಸೀಮಿತವಾದ ಕಾರಣ RCBಯ ಆಟವನ್ನು ವೀಕ್ಷಿಸುವ ಉತ್ಸಾಹವನ್ನು ಕಳೆದುಕೊಳ್ಳುತ್ತಿದ್ದರು. ಆದರೆ, ಈಗ ಅವರು ಯಾವುದೇ ಅನಾನುಕೂಲತೆ ಇಲ್ಲದೆ ಕ್ರೀಡಾಂಗಣಕ್ಕೆ ಬಂದು ತಮ್ಮ ಸಾಕುಪ್ರಾಣಿಗಳೊಂದಿಗೆ ಕ್ರಿಕೆಟ್ ವೀಕ್ಷಿಸಬಹುದು'' ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ರಾಜೇಶ್ ಮೆನನ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ :ಎಚ್​ಎಎಲ್ ನಿಂದ ತೇಜಸ್ ಎಲ್ಎ 5033 ಯುದ್ಧ ವಿಮಾನದ ಯಶಸ್ವಿ ಹಾರಾಟ - Tejas LA 5033 Fighter Aircraft

ABOUT THE AUTHOR

...view details