ಕರ್ನಾಟಕ

karnataka

ETV Bharat / state

ಕಾಡಾನೆಗಳ ಉಪಟಳ: ಚಿಕ್ಕಮಗಳೂರಿನ ಹತ್ತಾರು ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಡಳಿತ ಆದೇಶ

ಚಿಕ್ಕಮಗಳೂರಿನ ಹತ್ತಾರು ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಳವಾಗಿರುವುದರಿಂದ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿ ಆದೇಶಿಸಿದೆ.

ELEPHANTS
ಕಾಡಾನೆಗಳು (ETV Bharat)

By ETV Bharat Karnataka Team

Published : Nov 11, 2024, 6:26 PM IST

Updated : Nov 11, 2024, 9:22 PM IST

ಚಿಕ್ಕಮಗಳೂರು :ಮಲೆನಾಡಿನ ಕೆಲವು ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಹೇರಿ ಜಿಲ್ಲಾಡಳಿತ ಭಾನುವಾರ ಆದೇಶ ಹೊರಡಿಸಿದ್ದು, ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲಾ - ಕಾಲೇಜುಗಳಿಗೂ ರಜೆ ಘೋಷಣೆ ಮಾಡಿದೆ.

ಚಿಕ್ಕಮಗಳೂರು ಜಿಲ್ಲೆಯ ವಸ್ತಾರೆ, ಮೂಗ್ತಿಹಳ್ಳಿ ಗ್ರಾ. ಪಂ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಹೀಗಾಗಿ, 2 ಗ್ರಾಮ ಪಂಚಾಯಿತಿ ವ್ಯಾಪ್ತಿಯ 13 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಗ್ರಾಮಗಳಲ್ಲಿ ಶಾಲಾ‌, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಮಲೆನಾಡಿನ ಕೆಲವೆಡೆ ಕಾಡಾನೆಗಳು ಬಂದಿರುವುದು (ETV Bharat)

ಚಿಕ್ಕಮಗಳೂರು ತಾಲೂಕು ಮೂಗ್ತಿಹಳ್ಳಿ ಮತ್ತು ವಸ್ತಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಮತ್ತಾವರ, ದಂಬದಹಳ್ಳಿ, ಶಿರಗುಂದ, ದುಂಗೆರೆ, ಮೂಗ್ತಿಹಳ್ಳಿ, ಕದ್ರಿಮಿದ್ರಿ ಹಾಗೂ ವಸ್ತಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲದಗುಡ್ಡೆ, ವಸ್ತಾರೆ, ನಂದಿಕೆರೆ, ದಹುಲುವಾಲೆ, ತೊಂಡವಳಿ, ಸಂಸೆ, ದಿಣ್ಣೆಕರೆ, ಗ್ರಾಮಗಳಲ್ಲಿ ಬಿಟ್ಟಮ್ಮ ಆನೆಗಳ ತಂಡವು ಸಂಚರಿಸುತ್ತಿದೆ.

ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ 10-11-2024 ರ ಸಂಜೆ 7 ರಿಂದ 11-11-2024 ರ ರಾತ್ರಿ 9ರ ವರೆಗೆ ಕಾಡಾನೆ ಇರುವ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾರ್ವಜನಿಕರಿಂದ ಕಾರ್ಯಾಚರಣೆಗೆ ತೊಂದರೆ ಉಂಟಾಗದಂತೆ ಸೂಕ್ತ ಭದ್ರತೆ ಒದಗಿಸಬೇಕಾಗಿ ವಲಯ ಅರಣ್ಯಾಧಿಕಾರಿ ಆಲ್ದೂರು ವಲಯ ಚಿಕ್ಕಮಗಳೂರು ಅವರು ಕೋರಿರುತ್ತಾರೆ. ಹೀಗಾಗಿ, ಮೇಲೆ ಉಲ್ಲೇಖಿಸಿರುವ ಗ್ರಾಮಗಳಲ್ಲಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಡಳಿತದ ಆದೇಶ ತಿಳಿಸಿದೆ.

ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ವಿನಾಯಿತಿ : ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವುದರಿಂದ ವಿದ್ಯಾರ್ಥಿಗಳು ಹಾಗೂ ಶಾಲಾ - ಕಾಲೇಜು ಸಿಬ್ಬಂದಿ ಓಡಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಡಳಿತದ ಆದೇಶದಲ್ಲಿ ಉಲ್ಲೇಖಿಸಲಾಗಿದ್ದು, ಕರ್ತವ್ಯದ ಮೇಲಿರುವ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ಮಾತ್ರ ನಿಷೇಧಾಜ್ಞೆಯಿಂದ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ :ಕಾಫಿನಾಡಿಗೆ ಲಗ್ಗೆ ಇಟ್ಟ ಕಾಡಾನೆ ಹಿಂಡು; ಕಂಗಾಲಾದ ಹಳ್ಳಿಗರು

Last Updated : Nov 11, 2024, 9:22 PM IST

ABOUT THE AUTHOR

...view details