ಬೆಳಗಾವಿ:ಕರ್ನಾಟಕ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬೆಳಗಾವಿಯ ಸೋಷಿಯಲ್ ಕ್ಲಬ್ ಎದುರು ನಿನ್ನೆ ರಾತ್ರಿ ನಡೆದಿದೆ.
ಖಾನಾಪುರ ರಸ್ತೆಯಲ್ಲಿರುವ ಕಮಲ ನಗರದ ಮಲ್ಲೇಶ ಪೂಜಾರಿ (29) ಹಲ್ಲೆಗೊಳಗಾದ ಯುವಕ. ತೀವ್ರ ಗಾಯಗೊಂಡ ಯುವಕನನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರೂಪಕ ವಾಹನದಲ್ಲಿ ಕುಳಿತಿದ್ದ ಮಲ್ಲೇಶ ಪೂಜಾರಿ ಮೇಲೆ ಹಿಂದಿನಿಂದ ಬಂದ ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿದ್ದಾರೆ. ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.