ಕರ್ನಾಟಕ

karnataka

ETV Bharat / state

ನಮ್ಮ ಬಳಿ ನೀರಿದ್ದರೆ ಕೊಟ್ಟೇ ಕೊಡುತ್ತೇವೆ, ಹಿಡಿದಿಡುವ ಉದ್ದೇಶ ನಮ್ಮಲ್ಲಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ - Cauvery water issue - CAUVERY WATER ISSUE

ನಮ್ಮ ಬಳಿ ನೀರಿದ್ದರೆ ತಮಿಳುನಾಡು ಪಾಲಿನ 177 ಟಿಎಂಸಿ ನೀರನ್ನು ಕೊಟ್ಟೇ ಕೊಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಡಿಸಿಎಂ ಡಿ.ಕೆ.ಶಿವಕುಮಾರ್
ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat)

By ETV Bharat Karnataka Team

Published : Jul 16, 2024, 10:51 PM IST

ಬೆಂಗಳೂರು: ನಮ್ಮ ಬಳಿ ನೀರಿದ್ದರೆ ತಮಿಳುನಾಡು ಪಾಲಿನ 177 ಟಿಎಂಸಿ ನೀರನ್ನು ಕೊಟ್ಟೇ ಕೊಡುತ್ತೇವೆ. ಉತ್ತಮ ಮಳೆಯಾಗುತ್ತಿದೆ ಆದರೆ ಪ್ರಸ್ತುತ ನೀರಿನ ಕೊರತೆಯಿದೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ನಿಲುವು ಖಂಡಿಸಿ ಸುಪ್ರೀಂಕೋರ್ಟ್ ಕದ ತಟ್ಟುವ ತಮಿಳುನಾಡಿನ ನಿರ್ಣಯದ ಬಗ್ಗೆ ಮಾಧ್ಯಮಗಳು ಕೇಳಿದಾಗ ವಿಧಾನಸೌಧದಲ್ಲಿ ಉತ್ತರಿಸಿದ ಅವರು “ಅವರ ಆಂತರಿಕ ನಿರ್ಣಯ, ರಾಜಕೀಯ ಒಗ್ಗಟ್ಟಿನ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ ಎಂದರು.

ನೀರನ್ನು ಹಿಡಿದಿಡುವ ಉದ್ದೇಶ ನಮ್ಮಲ್ಲಿಲ್ಲ, ಆದರೆ ಕಷ್ಟದಲ್ಲಿ ಇದ್ದೇವೆ. ನಾವು ನ್ಯಾಯಾಲಯಕ್ಕೆ ಗೌರವ ಕೊಡುತ್ತೇವೆ. ಅಗೌರವ ಸೂಚಿಸುವುದಿಲ್ಲ. ವರುಣದೇವನ ಕೃಪೆಯಿಂದ ಉತ್ತಮ ಮಳೆಯಾಗುತ್ತಿದ್ದು, ಅಣೆಕಟ್ಟುಗಳಿಗೆ ಒಳಹರಿವು ಹೆಚ್ಚಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ಕೆರೆಗಳಿಗೆ ತುಂಬಿಸುವ ಯೋಜನೆ ಶೀಘ್ರದಲ್ಲಿ ಅನುಷ್ಠಾನ: ಸಚಿವ ಬೋಸರಾಜು - WATER TREATMENT PLANT

ABOUT THE AUTHOR

...view details