ಬೆಂಗಳೂರು:"ಪಾಪ ಆರ್.ಅಶೋಕ್ ವಿರುದ್ಧ ನಡೆದ ಷಡ್ಯಂತ್ರ ನೋಡಿ ನನಗೆ ದಿಗ್ಭ್ರಮೆ ಆಗಿದೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಡಿಕೆಶಿ ಮುನಿರತ್ನ ಕೇಸ್ ಎಸ್ಐಟಿ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿ, "ನನಗೆ ಎಲ್ಲ ಮಾಹಿತಿ ಸಿಕ್ಕಿದೆ. ಪ್ರಪಂಚದಲ್ಲೇ ಈ ರೀತಿಯ ಸಂಚು ನಡೆದಿಲ್ಲ. ಆರ್.ಅಶೋಕ್ ಪ್ರಾರಂಭದ ಮಾತು ನೋಡಿದ್ದೇನೆ. ಎರಡನೇ ಬಾರಿಯ ಮಾತು ಕೇಳಿಲ್ಲ. ಆರ್.ಅಶೋಕ್, ವಿಜಯೇಂದ್ರಣ್ಣ, ರವಿ ಅಣ್ಣ ತಿಳಿಸಲಿ. ಅವರು ಸತ್ಯ ಏನಿದೆ ಅಂತ ಪರಿಶೀಲಿಸಿ ತಿಳಿಸಲಿ. ಕುಮಾರಣ್ಣ ಅವರು ಉತ್ತರ ಕೊಡಬೇಕು. ಡಾ.ಮಂಜುನಾಥ್ ಅವರು ತಿಳಿಸಲಿ. ಯಾರದ್ದು ಏನಿದೆ ಗೊತ್ತಿಲ್ಲ. ನಾನು ನೋಡಿ ಹೇಳಿಕೆ ನೀಡುತ್ತೇನೆ" ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat) ನೈಟ್ ರೌಂಡ್ಸ್ ಮಾಡುತ್ತೇನೆ:ರಸ್ತೆ ಗುಂಡಿ ಮುಚ್ಚಲು ಡೆಡ್ ಲೈನ್ ವಿಚಾರವಾಗಿ ಮಾತನಾಡಿ, "ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡ್ತಿದ್ದಾರೆ. ಪ್ರತಿಗುಂಡಿಗಳ ಲೆಕ್ಕ ನನ್ನ ಫೋನ್ನಲ್ಲಿದೆ. ಎರಡು ಮೂರು ದಿನ ನಾನು ನೈಟ್ ರೌಂಡ್ಸ್ ಮಾಡ್ತೇನೆ. ಟ್ರಾಫಿಕ್ ಕಡಿಮೆ ಇದ್ದಾಗ ಕೆಲಸಕ್ಕೆ ಸೂಚಿಸಿದ್ದೇನೆ. ಇದೇನು ದೊಡ್ಡ ಸಾಧನೆಯಲ್ಲ. ಕೆಲಸ, ಕ್ವಾಲಿಟಿ ನಾನೇ ಚೆಕ್ ಮಾಡ್ತೇನೆ. ಅಭಿಯಾನದ ಮಾದರಿಯಲ್ಲಿ ಬದ್ಧತೆ ಕರ್ತವ್ಯದಿಂದ ಕೆಲಸ ಮಾಡ್ತೇವೆ. ನಾಗರಿಕರಿಗೆ ಅನುಕೂಲ ಆಗಬೇಕು. ನಾನು ಬೇರೆ ರಾಜ್ಯದ ಪ್ರವಾಸ ಮಾಡಿದ್ದೇನೆ" ಎಂದರು.
ಗಂಗೇನಹಳ್ಳಿ ಡಿನೋಟಿಫೈ ಕುರಿತು ಪ್ರತಿಕ್ರಿಯಿಸಿ, "ಅದರ ಬಗ್ಗೆ ನನಗೆ ಗೊತ್ತಿಲ್ಲ. ನಾನು ಏನು ಅಂತ ತಿಳಿದುಕೊಂಡಿಲ್ಲ" ಎಂದರು. ಬಿಜೆಪಿಯಿಂದ ಷಡ್ಯಂತ್ರದ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, "ಅವರು ದಿನಾ ನನ್ನ ನೆನಪಿಸಿಕೊಳ್ಳಬೇಕು. ನೆನಪಿಸಿಕೊಳ್ಳುತ್ತಲೇ ಇರಲಿ. ಬಿಜೆಪಿ ಸಮರ್ಥನೆ ಮಾಡಿಕೊಳ್ಳಲಿ. ಅದು ರಾಜ್ಯದ ಜನತೆಗೆ ಅರ್ಥ ಆಗಬೇಕು" ಎಂದರು.
ಊಹಿಸಿಕೊಳ್ಳುವುದಕ್ಕೂ ಆಗುವುದಿಲ್ಲ, ಅದು ಘನಘೋರ, ಶಿಕ್ಷೆ ಆಗಬೇಕು:"ನಾವು ಊಹಿಸಿಕೊಳ್ಳುವುದಕ್ಕೂ ಆಗಲ್ಲ. ಅದು ಘನಘೋರ, ಆ ಬಗ್ಗೆ ಯೋಚಿಸಬೇಕಾಗುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಶಾಸಕ ಮುನಿರತ್ನ ಹೆಚ್ಐವಿ ಹರಡಿಸುತ್ತಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, "ಇಂತದ್ದು ನಿಜವಾದರೆ ಅದಕ್ಕಿಂತ ಘೋರ ಇನ್ನೊಂದಿಲ್ಲ. ಅದು ಸತ್ಯ ಆಗಿದ್ರೆ ಅದರಂಥ ದೊಡ್ಡ ತಪ್ಪು ಇಲ್ಲ. ಅದು ಊಹಿಸಲಾಗದ ಮನಸ್ಥಿತಿ. ಸತ್ಯ ಆಗಿದ್ರೆ ನಂಗೆ ಗೊತ್ತಿಲ್ಲ. ಇಂತಹ ಕೆಲಸ ಮಾಡುತ್ತಾರೆ ಅಂತ ಊಹೆ ಮಾಡಿಲ್ಲ. ಆ ಥರ ಮಾಡಿದ್ರೆ ಶಿಕ್ಷೆ ಆಗಬೇಕು" ಎಂದು ಒತ್ತಾಯಿಸಿದರು.
"ತಿರುಪತಿ ಲಡ್ಡುನಲ್ಲಿ ಪ್ರಾಣಿಕೊಬ್ಬು ಬಳಕೆ ಕುರಿತು ಪ್ರತಿಕ್ರಿಯಿಸಿ, "ಪ್ರಾಣಿಕೊಬ್ಬು ಬೆರೆಸುವುದು ಅಪರಾಧ. ಜನರ ಭಾವನೆಗಳು ಅದರಲ್ಲಿ ಅಡಗಿವೆ. ನಾನು ಕೆಎಂಎಫ್ ಅಧ್ಯಕ್ಷರ ಜೊತೆ ಮಾತನಾಡಿದ್ದೇನೆ. ಲಡ್ಡು ಭಕ್ತಿ ಶ್ರದ್ಧೆಯಿಂದ ಸ್ವೀಕರಿಸ್ತಾರೆ. ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ಇದರ ವಿರುದ್ಧ ತನಿಖೆಯಾಗಬೇಕು. ತಪ್ಪಿತಸ್ಥರ ಮೇಲೆ ಕ್ರಮ ಜರುಗಬೇಕು" ಎಂದು ಆಗ್ರಹಿಸಿದರು.
"ಭಾರತದಲ್ಲಿ ಸಿಲಿಕಾನ್ ವ್ಯಾಲಿ ಮಾಡಬೇಕು ಎಂಬ ಬಗ್ಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದರು. ಬೆಂಗಳೂರು ಸಿಲಿಕಾನ್ ವ್ಯಾಲಿಯಾಗಿದೆ. ಅದು ಭಾರತದಲ್ಲೇ ಇದೆ. ಇದರ ಬಗ್ಗೆ ನಾವು ಟ್ವೀಟ್ ಮಾಡಿದ್ದೆವು. ಆ ಮೇಲೆ ತುಮಕೂರಿನಲ್ಲಿ ಇಂಡಸ್ಟ್ರಿ ಹಬ್ ಇದೆ. ಯಾಕೆ ಡೆವಲಪ್ಮೆಂಟ್ ಆಗಿಲ್ಲ ಅಂತ ಟ್ವೀಟ್ ಮಾಡಿದ್ರು. ಅದಕ್ಕೂ ನಾವು ಸರಿಯಾದ ಉತ್ತರಕೊಟ್ಟಿದ್ದೇವೆ. ಬೆಂಗಳೂರಿಗೆ ತನ್ನದೇ ಆದ ಇತಿಹಾಸವಿದೆ. ಜಾಗತಿಕವಾಗಿ ನಾವು ನಂಬರ್ ಒನ್ ಇದ್ದೇವೆ. ಏರೋಸ್ಪೇಸ್ ಸೇರಿ ಎಲ್ಲವೂ ಇಲ್ಲಿವೆ" ಎಂದರು.
ಇದನ್ನೂ ಓದಿ:4 ವರ್ಷಗಳಿಂದ ನಾನು ಊರಿಗೆ ಹೋಗಿಲ್ಲ, ಬಿಜೆಪಿ ದ್ವೇಷ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ: ವಿನಯ್ ಕುಲಕರ್ಣಿ - MLA Vinay Kulkarni