ಚಿಕ್ಕೋಡಿ(ಬೆಳಗಾವಿ):"ಅಜ್ಜಯ್ಯನ ಮೇಲಿರುವ ಗುರು ನಿಷ್ಠೆ, ಪಕ್ಷ ನಿಷ್ಠೆ, ಹಿರಿಯರ ಮೇಲಿರುವ ಭಕ್ತಿ ಮತ್ತು ನಾಟಕವಿಲ್ಲದ ಮಾತು ನೋಡಿದಾಗ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಿ ಸೇವೆ ಮಾಡುವ ಅವಕಾಶ ಭಗವಂತ ಕೊಡಲಿ. ಅವರ ಗುರುಗಳ ದಯೆಯಿಂದ ಅದು ಖಂಡಿತ ಆಗುತ್ತದೆ ಎಂಬುದು ನನ್ನ ನಂಬಿಕೆ" ಎಂದು ಅವಧೂತ ವಿನಯ್ ಗುರೂಜಿ ಹೇಳಿದರು.
ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, " ಸಿದ್ದರಾಮಯ್ಯನವರ ನಂತರ ಸಿಎಂ ಆಗುವ ಅವಕಾಶ ಸಿಗುತ್ತದೆ ಎಂದರೆ ಅದು ಡಿ.ಕೆ. ಶಿವಕುಮಾರ್ ಅವರಿಗೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಲ್ಲಿದ್ದುಕೊಂಡು ಪಕ್ಷ ಸಂಘಟನೆ, ಪಾದಯಾತ್ರೆಯಿಂದ ಹಿಡಿದು ಒಬ್ಬ ನಾಯಕ ಪಕ್ಷಕ್ಕೆ ಏನೆಲ್ಲಾ ಮಾಡಬಹುದೂ ಅಷ್ಟೂ ತಪಸ್ಸನ್ನು ಅವರು ಮಾಡಿದ್ದಾರೆ" ಎಂದರು.