ಬೆಂಗಳೂರು : ಬಿಜೆಪಿಯವರು ಘರ್ ಘರ್ ತಿರಂಗಾ ಮಾಡಿದ್ರು ಏನಾಯ್ತು?. ತಿರಂಗಾ ಯಾಕೆ ಬಿಟ್ಟು ಬಿಟ್ರಿ?. ಕೇಂದ್ರದಲ್ಲಿ ತಿರಂಗಾ ಬಿಟ್ಟು ಹನುಮ ಧ್ವಜಾನೇ ಹಾರಿಸಿ ಬಿಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. ಮಂಡ್ಯ ಪ್ರತಿಭಟನೆ ವಿಚಾರವಾಗಿ ಇಂದು ಡಿ.ಕೆ ಶಿವಕುಮಾರ್ ಮಾತನಾಡಿದ್ದಾರೆ.
ಬಿಜೆಪಿಯವರು ಮಂಡ್ಯದಲ್ಲಿ ಬಹಳ ತೊಂದರೆ ಮಾಡುತ್ತಿದ್ದಾರೆ. ರಾಷ್ಟ್ರಧ್ವಜ, ಕನ್ನಡ ಧ್ವಜ ಬಿಟ್ಟು ಬೇರೆ ಯಾವುದೂ ಹಾರಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದರು. ಹೀಗಿದ್ದರೂ ಶಾಂತಿ ಕದಡಲು ದೊಡ್ಡ ಪ್ರಯತ್ನ ಮಾಡುತ್ತಿದ್ದಾರೆ. ಜನರು ಇದನ್ನು ಗಂಭೀರವಾಗಿ ನೋಡುತ್ತಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಕೇಸರಿ ಶಾಲು ಧರಿಸಿ ಪ್ರತಿಭಟನೆ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಅವರು ಆಲ್ ಮೋಸ್ಟ್ ಬಿಜೆಪಿ ಜೊತೆ ಮರ್ಜ್ ಆಗಿದ್ದಾರೆ. ಅದಕ್ಕೂ ನಮಗೂ ಸಂಬಂಧ ಇಲ್ಲ. ಮಂಡ್ಯದಲ್ಲಿ ಅವರ ಪಕ್ಷಕ್ಕೆ ಬೇಸ್ ಇಲ್ಲ. ಕೇಸರಿ ಶಾಲು ಆದರೂ ಹಾಕಿಕೊಳ್ಳಲಿ. ಯಾವ ಬಣ್ಣದ್ದು ಶಾಲು ಬೇಕಾದರೂ ಹಾಕ್ಕೊಳ್ಳಲಿ. ಅವರು ಇವರನ್ನು ನುಂಗ್ತಾರೋ, ಇವರು ಅವರನ್ನು ನುಂಗ್ತಾರೋ ನೋಡೋಣ ಎಂದು ಡಿಕೆಶಿ ತಿಳಿಸಿದರು.
ಕಾರ್ಯಕರ್ತರಿಗೆ ನಿಗಮಮಂಡಳಿ ಹಂಚಿಕೆ ವಿಚಾರವಾಗಿ ಮಾತನಾಡುತ್ತ, ನಿನ್ನೆ ಸಭೆ ಮಾಡಿದ್ದೇವೆ. ಇಂದು ಸಹ ಸಭೆ ಮಾಡುತ್ತೇವೆ ಎಂದರು. ಪೌರಕಾರ್ಮಿಕರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಬಜೆಟ್ ಬರುತ್ತಿರುವುದರಿಂದ ಖಾಯಂ ಮಾಡಿ ಕೇಳುತ್ತಿದ್ದಾರೆ. ಒಂದೇ ಬಾರಿ ಮಾಡಲು ಆಗುವುದಿಲ್ಲ. ಹಂತ ಹಂತವಾಗಿ ಮಾಡುತ್ತೇವೆ. ಪೌರಕಾರ್ಮಿಕರ ಜೊತೆಗೆ ಸಭೆ ಮಾಡುತ್ತೇನೆ ಎಂದು ಡಿ.ಕೆ ಶಿವಕುಮಾರ್ ವಿವರಿಸಿದರು.
ಇದನ್ನೂ ಓದಿ :ಹೆಸರಿನಲ್ಲಿ ರಾಮ ಇದ್ದರೆ ಸಾಲದು ನಡವಳಿಕೆಯಲ್ಲೂ ರಾಮನ ಸಂಸ್ಕೃತಿ ಇರಲಿ: ಹೆಚ್ ಡಿ ಕುಮಾರಸ್ವಾಮಿ