ಕರ್ನಾಟಕ

karnataka

ETV Bharat / state

ಅಂಜಲಿ‌ ಕೊಲೆ ಪ್ರಕರಣ : ಗಿರೀಶ್​ನನ್ನು ಜೂನ್​ 16 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ - ACCUSED GIRISH JUDICIAL CUSTODY - ACCUSED GIRISH JUDICIAL CUSTODY

ಅಂಜಲಿ ಕೊಲೆ ಆರೋಪಿ ಗಿರೀಶನಿಗೆ ಜೂನ್ 16ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.

accused-girish
ಆರೋಪಿ ಗಿರೀಶ್​ (ETV Bharat)

By ETV Bharat Karnataka Team

Published : May 31, 2024, 10:17 PM IST

Updated : May 31, 2024, 10:31 PM IST

ಹುಬ್ಬಳ್ಳಿ : ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಜಲಿ ಹತ್ಯೆ ಹಂತಕ ವಿಶ್ವ ಅಲಿಯಾಸ್ ಗಿರೀಶನನ್ನು ಜೂನ್ 16 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಸಿಐಡಿ ಕಸ್ಟಡಿ ಮುಗಿದ ಹಿನ್ನೆಲೆ ಗುರುವಾರ ಹಂತಕ ಗಿರೀಶನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ, ಮೂರನೇ ಜೆಎಮ್ಎಫ್​ಸಿ ನ್ಯಾಯಾಲಯದ ನ್ಯಾಯಾಧೀಶ ನಾಗೇಶ ನಾಯಕ ವಿಚಾರಣೆ ನಡೆಸಿ, ಜೂನ್ 16 ರವರೆಗೂ ವಿಶ್ವನಿಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ.

ಘಟನೆಯ ಹಿನ್ನೆಲೆ : ಪ್ರೀತಿ ನಿರಾಕರಿಸಿದ ಕಾರಣಕ್ಕೆ ಕೋಪಗೊಂಡ ವಿಶ್ವನಾಥ ಅಲಿಯಾಸ್​ ಗಿರೀಶ್ ಎಂಬಾತ ಮೇ.15ರಂದು ಅಂಜಲಿ ಅಂಬಿಗೇರ ಎಂಬ ಯುವತಿಯ ಮನೆಗೆ ನುಗ್ಗಿ ಆಕೆಗೆ ಚಾಕುವಿನಿಂದ ಇರಿದು, ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ.

ಇದನ್ನೂ ಓದಿ :ಅಂಜಲಿ‌ ಕೊಲೆ ಪ್ರಕರಣ : ದಾವಣಗೆರೆಯಲ್ಲಿ ಚಾಕು ಪತ್ತೆ, ಮುಂದುವರೆದ ಆರೋಪಿ ವಿಚಾರಣೆ - ANJALI MURDER CASE

Last Updated : May 31, 2024, 10:31 PM IST

ABOUT THE AUTHOR

...view details