ಬಳ್ಳಾರಿ:ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ಜಿಲ್ಲೆಯ ಕಂಪ್ಲಿ ತಾಲೂಕು ಸಂಪೂರ್ಣ ಬಂದ್ ಆಗಿದೆ.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಬಗ್ಗೆ ಬಿಜೆಪಿಗರು ಅವಮಾನ ಮಾಡುವುದೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ವಿವಿಧ ಸಂಘಟನೆಗಳ ಪ್ರತಿಭಟನಕಾರರು ಬೆಳಗ್ಗೆ 6 ಗಂಟೆಯಿಂದಲೇ ಬಂದ್ ಆರಂಭಿಸಿದ್ದಾರೆ. ಬಂದ್ ಇದ್ದರೂ ಕಂಪ್ಲಿಯಲ್ಲಿ ಎಂದಿನಂತೆ ದಿನಸಿ ಮಾರುಕಟ್ಟೆಗಳು, ಮತ್ತು ಆಟೋ, ಕ್ಯಾಬ್ ಮಾತ್ರ ಓಪನ್ ಇತ್ತು. ಇವುಗಳನ್ನು 10 ಗಂಟೆ ಬಳಿಕ ಬಂದ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.